ಲೈಫ್‌ಸ್ಟೈಲ್

Chakli Recipe | ದೀಪಾವಳಿಗೆ ಮನೆಯಲ್ಲೇ ಮಾಡಿ ಕ್ರಿಸ್ಪಿ ಮತ್ತು ಟೇಸ್ಟಿ ಚಕ್ಕುಲಿ; ಸಿಂಪಲ್​ ರೆಸಿಪಿ ಇಲ್ಲಿದೆ

ದೀಪಾವಳಿ ಹಬ್ಬದಂದು ಮನೆಯಲ್ಲಿ ಉತ್ತಮ ಅಲಂಕಾರದ ಜತೆಗೆ ರುಚಿಕರವಾದ ತಿಂಡಿಗಳನ್ನು ಮಾಡುವುದು ಅಭ್ಯಾಸ. ವಿವಿಧ ಸಿಹಿತಿಂಡಿಗಳ ಜತೆಗೆ ಖಾರ ಖಾರ ಚಕ್ಕುಲಿ ಇದ್ದರೆ ಹೇಗೆ? ಬಹಳ ಮಂದಿ ಇಷ್ಟಪಡುವ ಚಕ್ಕುಲಿಯನ್ನು ಮನೆಯಲ್ಲಿ ಮಾಡಲು ಕಷ್ಟ ಎಂದು ಎಷ್ಟೋ ಜನರು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಸರಿಯಾದ ವಿಧಾನವನ್ನು ಪಾಲಿಸಿದರೆ ಅಂಗಡಿಗಳಲ್ಲಿ ಸಿಗುವಂತಹ ರುಚಿಕರ ಚಕ್ಲಿಯನ್ನು ಈಗ ಮನೆಯಲ್ಲೆ ಮಾಡಬಹುದು. ಕ್ರಿಸ್ಪಿ ಮತ್ತು ಟೇಸ್ಟಿ ಚಕ್ಕುಲಿ ಮಾಡುವ ವಿಧಾನವನ್ನು(Chakli Recipe) ಇಲ್ಲಿ ತಿಳಿಸಲಾಗಿದೆ.

ಚಕ್ಕುಲಿ ಮಾಡಲು ಬೇಕಾಗುವ ಪದಾರ್ಥ

  • ಒಂದು ಕಪ್ ಅಕ್ಕಿಹಿಟ್ಟು
  • ಅರ್ಧ ಕಪ್ ಕಡ್ಲೆಹಿಟ್ಟು
  • ಅರ್ಧ ಟೀಚಮಚ ಸೆಲರಿ
  • 1/4 ಟೀಚಮಚ ಇಂಗು
  • ಅರ್ಧ ಟೀಚಮಚ ಚಿಲ್ಲಿ ಪೌಡರ್​​
  • ಅರ್ಧ ಟೀಚಮಚ ಧನಿಯಾ ಪುಡಿ
  • ಅರ್ಧ ಟೀಚಮಚ ಅರಿಶಿನ ಪುಡಿ
  • ರುಚಿಗೆ ತಕ್ಕಂತೆ ಉಪ್ಪು
  • ಕರಿಯಲು ಅಡುಗೆ ಎಣ್ಣೆ

ಚಕ್ಕುಲಿ ಮಾಡುವ ವಿಧಾನ

ಚಕ್ಕುಲಿ ಮಾಡಲು ಮೊದಲು ಅಕ್ಕಿಹಿಟ್ಟು, ಕಡ್ಲೆಹಿಟ್ಟು, ಸೆಲರಿ, ಚಿಲ್ಲಿ ಪೌಡರ್​, ಧನಿಯಾಪುಡಿ, ಅರಿಶಿನ ಪುಡಿ ಮತ್ತು ಉಪ್ಪನ್ನು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಸ್ವಲ್ಪ ಸ್ವಲ್ಪ ಬಿಸಿ ನೀರನ್ನು ಸೇರಿಸುತ್ತಾ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ಗಟ್ಟಿಯಾಗಿರಬಾರದು ಅಥವಾ ತುಂಬಾ ಮೃದುವಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಬಳಿಕ ಚಕ್ಕುಲಿ ಒರಳಿನಲ್ಲಿ ಹಾಕಿ ಚಕ್ಕುಲಿ ಆಕಾರ ನೀಡುತ್ತ ಬಾಳೆ ಎಲೆ ಮೇಲ ಒತ್ತಿ. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಆ ಚಕ್ಕುಲಿಯನ್ನು ಗೋಲ್ಡನ್​​​​​ ಕಲರ್​ ಆಗುವವರೆಗೆ ಬೇಯಿಸಿ. ಈಗ ರುಚಿಕರವಾದ ಚಕ್ಕುಲಿ ಸವಿಯಲು ಸಿದ್ಧ.

ನೆನಪಿನಲ್ಲಿಡಿ

ಚಕ್ಕುಲಿ ಬೇಯಿಸುವ ಎಣ್ಣೆ ಬಿಸಿಯಾಗಿರಬಾರದು. ಚಕ್ಕುಲಿ ಬಹುಬೇಗನೆ ಕಪ್ಪಗಾಗುತ್ತದೆ.

ಚಕ್ಕುಲಿಯನ್ನು ಇನ್ನಷ್ಟು ರುಚಿಕರವಾಗಿಸಲು, ನಿಮ್ಮ ಆಯ್ಕೆಯ ಕೆಲವು ಮಸಾಲೆಗಳನ್ನು ನೀವು ಸೇರಿಸಬಹುದು. ಉದಾಹರಣೆಗೆ ಗರಂ ಮಸಾಲ, ಬಿಳಿ ಎಳ್ಳು ಇತ್ಯಾದಿಗಳನ್ನು ಸೇರಿಸಬಹುದು.