ಲೈಫ್‌ಸ್ಟೈಲ್

ವಾಲ್ ನಟ್ಸ್, ಬಾದಾಮಿ ಮಾತ್ರವಲ್ಲ ಗೋಡಂಬಿಯನ್ನೂ ನೆನೆಸಿ ತಿನ್ನಬಹುದು..ಆರೋಗ್ಯಕ್ಕಿದೆ ಸಾಕಷ್ಟು ಲಾಭ..!

ಗೋಡಂಬಿಯಲ್ಲಿ ಫೈಬರ್, ಪ್ರೋಟೀನ್ ಮತ್ತು ಮೆಗ್ನೀಸಿಯಮ್, ಮ್ಯಾಂಗನೀಸ್, ಫಾಸ್ಫರಸ್, ಸತು ಮತ್ತು ತಾಮ್ರದಂತಹ ಅನೇಕ ಅಗತ್ಯ ಖನಿಜಗಳು ಸಮೃದ್ಧವಾಗಿರುವುದರಿಂದ ದೇಹಕ್ಕೆ ಇದು ತುಂಬಾ ಆರೋಗ್ಯಕರ. ಇಷ್ಟೇ ಅಲ್ಲದೆ, ಪೌಷ್ಟಿಕ ತಜ್ಞರು ಗೋಡಂಬಿಯಲ್ಲಿ ವಿಟಮಿನ್ ಬಿ 6, ವಿಟಮಿನ್ ಕೆ ಮತ್ತು ಥಯಾಮಿನ್ ಸಮೃದ್ಧವಾಗಿರುವ ಕಾರಣ ಪ್ರತಿದಿನ ತಿನ್ನಲು ಶಿಫಾರಸು ಮಾಡುತ್ತಾರೆ.


ಸಾಮಾನ್ಯವಾಗಿ ಸಿಹಿತಿಂಡಿಗಳಲ್ಲಿ ಗೋಡಂಬಿಗಳನ್ನ ಬಳಸಲಾಗುತ್ತೆ. ಗೋಡಂಬಿಯನ್ನು ಸಹ ನೆನೆಸಿ ತಿನ್ನಬಹುದು ಎಂಬುವುದರ ಬಗ್ಗೆ ನಿಮಗೆ ತಿಳಿದಿದೆಯೇ? ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ತಿನ್ನುವುದರಿಂದ ಸ್ನಾಯು ಮತ್ತು ಮೂಳೆ ಬೆಳವಣಿಗೆಗೆ ಸಹಾಯಕವಾಗಲಿದೆ.


3-5 ಗೋಡಂಬಿಗಳನ್ನ ನೀರಿನಲ್ಲಿ ನೆನೆಸಿಡಿ. ಅದನ್ನ ಮರುದಿನ ಬೆಳಗ್ಗೆ ಹಾಲಿನಲ್ಲಿ ಚೆನ್ನಾಗಿ ಕುದಿಸಿ, ಹಾಲು ಮತ್ತು ಗೋಡಂಬಿ ಎರಡರಲ್ಲೂ ಕ್ಯಾಲೋರಿಗಳು ಮತ್ತು ಆರೋಗ್ಯಕರ ಕೊಬ್ಬುಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ. ಹಾಗಾಗಿ ಗೋಡಂಬಿಯನ್ನು ಮಿತವಾಗಿ ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ.ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ತಿನ್ನುವುದರಿಂದ ಕೆಲವು ಪ್ರಮುಖ ಆರೋಗ್ಯ ಪ್ರಯೋಜನಗಳು ಇಲ್ಲಿವೆ.


ಗಟ್ಟಿಯಾದ ಮೂಳೆಗೆ ಸಹಾಯಕ: ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ತಿನ್ನುವುದರಿಂದ ನಿಮ್ಮ ಮೂಳೆಗಳು ಬಲಗೊಳ್ಳುತ್ತವೆ. ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ ಎಂದು ನಿಮಗೆ ತಿಳಿದಿದೆ. ವಿಟಮಿನ್ ಕೆ, ಮೆಗ್ನೀಸಿಯಮ್, ವಿಟಮಿನ್ ಬಿ6 ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳು ಗೋಡಂಬಿಯಲ್ಲಿ ಕಂಡುಬರುತ್ತವೆ. ಈ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಕೀಲು ನೋವನ್ನು ನಿವಾರಿಸುತ್ತದೆ.ಹಾಲಿನಲ್ಲಿ ನೆನೆಸಿದ ಗೋಡಂಬಿಒ ತಿನ್ನುವುದರಿಂದ ಕೀಲು ಮತ್ತು ಮೂಳೆ ನೋವು ವಾಸಿಯಾಗುತ್ತದೆ.


ಮಲಬದ್ಧತೆ ನಿವಾರಣೆಗೆ ಸಹಾಯಕ: ಗೋಡಂಬಿಯಲ್ಲಿರುವ ಫೈಬರ್ ಮಲಬದ್ಧತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಗೋಡಂಬಿಯನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಗ್ಗೆ ತಿಂದರೆ ಹೊಟ್ಟೆ ಸುಲಭವಾಗಿ ಸ್ವಚ್ಛವಾಗುತ್ತದೆ.


ರೋಗ ನಿರೋಧಕ ಶಕ್ತಿಯನ್ನ ವೃದ್ಧಿಸುತ್ತದೆ: ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಲು ಮತ್ತು ಗೋಡಂಬಿ ಎರಡೂ ವಿಟಮಿನ್ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ.


ಫ್ರೀ ರಾಡಿಕಲ್ಸ್​​​ನಿಂದ ರಕ್ಷಣೆ ನೀಡುತ್ತದೆ: ತಿದಿನ ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ಸೇವಿಸಿದರೆ, ನಿಮ್ಮ ದೇಹವು ಫ್ರೀ ರಾಡಿಕಲ್ಗಳನ್ನು ನಾಶಪಡಿಸುತ್ತದೆ. ಇದು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ.