ಲೈಫ್‌ಸ್ಟೈಲ್

ಕೋಳಿ ಮೊಟ್ಟೆಯನ್ನು ಹಸಿಯಾಗಿ ತಿನ್ನಬಹುದೇ? Egg ಪ್ರೋಟೀನ್ ಸಿಗುತ್ತೆ ಅಂತ ತಿಂದ್ರೆ ತೊಂದರೆ ಗ್ಯಾರಂಟಿ!

Egg :  ಕೋಳಿ ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಪೌಷ್ಟಿಕ ಆಹಾರವಾಗಿದೆ. ತಮ್ಮ ಇಚ್ಛೆಯಂತೆ ಕೋಳಿ ಮೊಟ್ಟೆಗಳ  ಆಮ್ಲೆಟ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಕೆಲವರು ಹಸಿ ಮೊಟ್ಟೆಯನ್ನು ಕುಡಿಯುತ್ತಾರೆ. ಹಸಿ ಮೊಟ್ಟೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?  ಎನ್ನುವ ಪ್ರಶ್ನೆ ಹಲವರಿಗೆ ಇರುತ್ತದೆ. ನಾವು ಇಂದು ಈ ಕುರಿತಾಗಿ ನಿಮಗೆ ತಿಳಿಸಿ ಕೊಡಲಿದ್ದೇವೆ...

ಹಸಿ ಮೊಟ್ಟೆಯನ್ನು ನೇರವಾಗಿ ಸೇವಿಸಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಒಂದು ಅಥವಾ ಎರಡರ ವರೆಗೆ ಪರವಾಗಿಲ್ಲ. ಅತಿಯಾಗಿ ಕುಡಿದರೆ ಆರೋಗ್ಯ ಸಮಸ್ಯೆಗಳು ಬರುವುದು ಗ್ಯಾರಂಟಿ ಎನ್ನುತ್ತಾರೆ ವೈದ್ಯಕೀಯ ತಜ್ಞರು.

ಹಸಿ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುತ್ತದೆ. ಹಾಗಾಗಿ ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಬರಬಹುದು.

ಮೊಟ್ಟೆಯನ್ನು ಬಿಸಿ ಮತ್ತು ಅಡುಗೆ ಮಾಡುವ ಮೂಲಕ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಹಾಗಾಗಿ ಯಾವುದೇ ತೊಂದರೆ ಆಗುವುದಿಲ್ಲ.

ಈ ಸಮಸ್ಯೆಗಳು ಉದ್ಭವಿಸಬಹುದು:

ಜಿಮ್‌ಗೆ ಹೋಗುವವರು ಹಸಿ ಮೊಟ್ಟೆಗಳನ್ನು ಸೇವಿಸುವ ಸಾಧ್ಯತೆ ಹೆಚ್ಚು .ಆದರೆ ಹಸಿ ಮೊಟ್ಟೆಗಳನ್ನು ಹೆಚ್ಚಾಗಿ ಸೇವಿಸಿದರೆ ಸಮಸ್ಯೆಗಳು ಎದುರಾಗುತ್ತವೆ.

ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಬೇಯಿಸಿದ ಮೊಟ್ಟೆಗಳನ್ನು ಅಥವಾ ಆಮ್ಲೆಟ್ ರೂಪದಲ್ಲಿ ಸೇವಿಸಬೇಕು. ಇಲ್ಲದಿದ್ದರೆ ರೋಗನಿರೋಧಕ ಶಕ್ತಿ ಮತ್ತಷ್ಟು ನಾಶವಾಗುತ್ತದೆ.

ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವು ಜೀರ್ಣಕಾರಿ ಸಮಸ್ಯೆಗಳು, ಸೋಂಕುಗಳು, ವಾಂತಿ ಮತ್ತು ಜ್ವರವನ್ನು ಉಂಟುಮಾಡುತ್ತದೆ. ಬಯೋಟಿನ್ ಕೊರತೆ. ತುರಿಕೆ, ಕೂದಲು ಉದುರುವಿಕೆ ಮತ್ತು ನರಗಳ ದೌರ್ಬಲ್ಯದಂತಹ ಸಮಸ್ಯೆಗಳ ಸಾಧ್ಯತೆಗಳಿವೆ.

 ಗಮನಿಸಿ:  ವೈದ್ಯರ ಸಲಹೆಯ ಮೇರೆಗೆ ಹಸಿ ಮೊಟ್ಟೆಗಳನ್ನು ಸೇವಿಸುವುದು ಉತ್ತಮ.