Pumpkin seeds for acne clear skin
- ಕುಂಬಳಕಾಯಿ ಬೀಜಗಳಲ್ಲಿ, ವಿಟಮಿನ್ ಇ, ಒಮೆಗಾ-3 ಕೊಬ್ಬಿನಾಮ್ಲ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.
- ಕೇವಲ ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದಲೇ ಮೊಡವೆ ಮಾಯವಾಗುವುದಿಲ್ಲ
- ಸಮತೋಳಿತ ಆಹಾರದ ಜೊತೆಗೆ ಕುಂಬಳಕಾಯಿ ಬೀಜ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಿ
Pumpkin seeds for acne clear skin: ಇತ್ತೀಚಿನ ದಿನದಲ್ಲಿ ಯುವಜನತೆಗೆ ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮೊಗದ ಮೇಲಿನ ಮೊಡವೆಗಳು. ಇದರಿಂದಾಗಿ ಮುಖದ ಅಂದ ಹಾಳಾಗುತ್ತದೆ ಎನ್ನುವ ಬೇಸರ ಅವರದ್ದು. ಹೀಗಾಗಿ ಅದಕ್ಕೆ ಮದ್ದು ಮೊದಲು ನೈಸರ್ಗಿಕವಾಗಿ ಅರಿಶಿಣ, ತುಳಸಿ ಜಜ್ಜಿ ಹಚ್ಚುವುದು ಹೀಗೆ ನಾನಾ ರೀತಿ ಹಚ್ಚಿ ಯಾವುದೇ ಫಲಿತಾಂಶ ಸಿಗದ ನಂತರ, ಚರ್ಮ ರೋಗ ತಜ್ಞರ ಬಳಿ ಹೋಗುತ್ತಾರೆ. ಅವರು ಬರೆದುಕೊಡುವ ದುಬಾರಿ ಕ್ರೀಂಗಳನ್ನು ಕೊಂಡು ಹಣ ಲಾಸ್ ಮಾಡಿಕೊಳ್ಳುತ್ತಾರೆ. ಆದರೆ, ಸರಿಯಾದ ಆಹಾರ ಕ್ರಮ, ಸ್ವಚ್ಛತೆ ಇಂತಹ ಸಮಸ್ಯೆಗಳಿಗೆ ಎಡೆಮಾಡಿಕೊಡೋದಿಲ್ಲ.
ಇನ್ಮುಂದೆ ಮೊಗದ ಮೇಲೆ ಮೊಡವೆ ಕಂಡರೆ ದುಬಾರಿ, ಕ್ರೀಂಗಳ ಬದಲಾಗಿ ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ಮುಖದ ಮೇಲಿನ ಮೊಡವೆಗಳು ಬೇಗನೆ ನಿವಾರಣೆಯಾಗಿ, ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ ಎಂದು ಜಾದ್ ಇಂಟರ್ನ್ಯಾಷನಲ್ ಜರ್ನಲ್‌ನಲ್ಲಿ 2022 ರಲ್ಲಿ ಪ್ರಕಟಿಸಲಾಗಿದೆ.
ಕುಂಬಳಕಾಯಿಯಲ್ಲಿ ಏನೆಲ್ಲ ಅಂಶವಿದೆ?
ಮುಖದ ಮೇಲಿನ ಹಾರ್ಮೋನ್‌ಗಳ ಏರುಪೇರು, ವಂಶಪಾರಂಪರ್ಯ ಕಾರಣಗಳು, ಕಳಪೆ ಜೀವನಶೈಲಿ, ಧೂಳು ಮತ್ತು ಕರುಳಿನ ಆರೋಗ್ಯದ ತೊಂದರೆಗಳು ಸೇರಿದಂತೆ ನಾನಾ ಕಾರಣಗಳಿರುತ್ತವೆ. ಕುಂಬಳಕಾಯಿ ಬೀಜಗಳು ಉರಿಯೂತ ನಿವಾರಕ ಇದರಲ್ಲಿರುವ ವಿಟಮಿನ್ ಇ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ಚರ್ಮದ ಜೀವಕೋಶಗಳು ಹಾನಿಗೊಳಗಾಗದಂತೆ ರಕ್ಷಿಸುತ್ತವೆ. ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳು ಮುಖದ ಮೇಲಿನ ಉರಿಯೂತ ಮತ್ತು ಕೆಂಪಾಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುತ್ತದೆ.
ಕುಂಬಳಕಾಯಿ ಎಲ್ಲದಕ್ಕೂ ಮದಲ್ಲ
ಕೇವಲ ಬೀಜ ತಿಂದರೆ ಮೊಡವೆಗಳು ವಾಸಿಯಾಗುವುದಿಲ್ಲ. ಕುಂಬಳಕಾಯಿ ಬೀಜಗಳು ಚರ್ಮದ ಆರೋಗ್ಯವನ್ನು ಒಳಗಿನಿಂದ ವೃದ್ಧಿಸುತ್ತವೆಯೇ ಹೊರತು, ಅವು ಕೇವಲ ಮೊಡವೆಗೆ ಇರುವ ಏಕೈಕ ಮದ್ದಲ್ಲ. ನಾನಾ ಕಾರಣಕ್ಕೆ ಮೊಡವೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಎಲ್ಲದಕ್ಕೂ ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದಲೇ ಮೊಡವೆಗಳು ಸಂಪೂರ್ಣವಾಗಿ ಮರೆಯಾಗುವುದಿಲ್ಲ.
ತಜ್ಞರು ಏನಂತಾರೆ?
- ಆರೋಗ್ಯಕರ ತ್ವಚೆ ಬೇಕಿದ್ದಲ್ಲಿ ಒಟ್ಟಾರೆ ಆಹಾರ ಕ್ರಮದ ಕಡೆಗೆ ಗಮನ ಹರಿಸಬೇಕು
- ಸಮತೋಲಿತ ಆಹಾರದ ಭಾಗವಾಗಿ ಒಂದು ಚಮಚ ಕುಂಬಳಕಾಯಿ ಬೀಜಗಳನ್ನು ಸೇವಿಸಿ.
- ಅತಿಯಾದ ಸಕ್ಕರೆ, ಎಣ್ಣೆ ಪದಾರ್ಥಗಳು ಹಾಗೂ ಸಂಸ್ಕರಿಸಿದ ಆಹಾರ ಸೇವಿಸುವುದನ್ನು ಕಡಿಮೆ ಮಾಡಿ
- ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಿರಿ ಮತ್ತು ಚರ್ಮವನ್ನು ಸ್ವಚ್ಛವಾಗಿಟ್ಟುಕೊಳ್ಳಿ.
- ಒಂದು ವೇಳೆ ನಿಮ್ಮ ಮೊಡವೆ ಸಮಸ್ಯೆ ತೀವ್ರವಾಗಿದ್ದರೆ, ನುರಿತ ಚರ್ಮರೋಗ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಸೂಕ್ತ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.