Cashews: ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಗೋಡಂಬಿ ತಿನ್ನಬಹುದೇ ಎಂಬ ಪ್ರಶ್ನೆ ಹಲವಾರು ಜನರಲ್ಲಿ ಕಾಡುವಂತಹ ಪ್ರಶ್ನೆಯಾಗಿದೆ. ಹಾಗೇ ಗೋಡಂಬಿ ಬಗ್ಗೆ ಹೇಳುವುದಾದರೆ, ಇದು ಪೌಷ್ಟಿಕಾಂಶವನ್ನು ಹೊಂದಿದೆ. ಇನ್ನು ಕೊಲೆಸ್ಟ್ರಾಲ್ ಇದರ ಸೇವನೆಯ ಪರಿಣಾಮವನ್ನು ಹೊಂದಿದೆ.
ಗೋಡಂಬಿಯು ರುಚಿಕರವಾದ ಡ್ರೈ ಫ್ರೂಟ್ ಆಗಿದ್ದು, ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್‌ಗಳು, ಫೈಬರ್ ಮತ್ತು ವಿಟಮಿನ್‌ಗಳನ್ನು ಒಳಗೊಂಡಿದೆ. ಆದರೆ, ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಗೋಡಂಬಿಯನ್ನು ತಿನ್ನುವಾಗ ಕೆಲವು ಎಚ್ಚರಿಕೆ ವಹಿಸಬೇಕಾಗಿರುತ್ತದೆ.
ಗೋಡಂಬಿಯು ಮೊನೊಸಾಚುರೇಟೆಡ್ ಕೊಬ್ಬುಗಳು ಹಾಗೂ ಬಹುಅಪರ್ಯಾಪ್ತ ಕೊಬ್ಬುಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ಗಳನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ಗಳನ್ನು ಕಡಿಮೆ ಮಾಡುತ್ತದೆ. ಇನ್ನು ಅಂದಾಜಿಗೆ 28 ಗ್ರಾಂ ಗೋಡಂಬಿಯಲ್ಲಿ ಸುಮಾರು 12 ಗ್ರಾಂ ಕೊಬ್ಬು, 5 ಗ್ರಾಂ ಪ್ರೋಟೀನ್, 1 ಗ್ರಾಂ ಫೈಬರ್ ಮತ್ತು ಮೆಗ್ನೀಸಿಯಮ್, ಕಬ್ಬಿಣ, ವಿಟಮಿನ್ K ಮತ್ತು B6ನಂತಹ ಪೌಷ್ಟಿಕಗಳಿರುತ್ತವೆ. ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲ. ಆದರಿಂದ ಇದರ ಸೇವನೆಯಿಂದ ಕೊಲೆಸ್ಟ್ರಾಲ್ಗೆ ಕಾರಣವಾಗುವುದಿಲ್ಲ.
ಗೋಡಂಬಿಯಲ್ಲಿರುವ ಕೊಬ್ಬುಗಳು ರಕ್ತದಲ್ಲಿನ ಕೊಲೆಸ್ಟ್ರಾಲ್ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತವೆ. ಕೆಲಬವು ಅಧ್ಯಯನಗಳ ಪ್ರಕಾರ, ದಿನಕ್ಕೆ 28-56 ಗ್ರಾಂ ಗೋಡಂಬಿಯನ್ನು ಸೇವಿಸುವುದರಿಂದ ಎಲ್‌ಡಿಎಲ್ ಕೊಲೆಸ್ಟ್ರಾಲ್ ಕಡಿಮೆಯಾಗಬಹುದು. ಹಾಗೇ ಇದರಲ್ಲಿರುವ ಫೈಬರ್ ಗುಣಗಳು ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಆದರೆ, ಗೋಡಂಬಿಯಲ್ಲಿ ಕ್ಯಾಲೋರಿಗಳು ಹೆಚ್ಚಿರುವುದರಿಂದ ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರಿಂದ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಉಲ್ಬಣಗೊಳ್ಳಬಹುದು.
ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ದಿನಕ್ಕೆ 15-30 ಗ್ರಾಂ ಅಂದರೆ ಸುಮಾರು 10-15 ಗೋಡಂಬಿಗಳನ್ನು ಸೇವಿಸಬಹುದು. ಇದನ್ನು ಆಹಾರದ ಭಾಗವಾಗಿ ತಿನ್ನಬೇಕು. ಅಂದರೆ ಸಲಾಡ್‌ಗಳನ್ನು ಮಾಡಿ ಅದಕ್ಕೆ ಗೋಡಂಬಿ ಸೇರಿಸಿ ತಿನ್ನಿ. ಇಲ್ಲವೇ ಇತರ ಕಡಿಮೆ ಕ್ಯಾಲೋರಿ ಆಹಾರಗಳೊಂದಿಗೆ ಸೇವಿಸಿರಿ.ಉಪ್ಪು ಮತ್ತು ಎಣ್ಣೆಯಲ್ಲಿ ಹುರಿದ ಅಥವಾ ಸಕ್ಕರೆ ಲೇಪಿತ ಗೋಡಂಬಿಗಳನ್ನು ತಿನ್ನುವುದನ್ನು ತಪ್ಪಿಸಿರಿ. ಏಕೆಂದರೆ ಇವು ಸೋಡಿಯಂ ಮತ್ತು ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸಬಹುದು.
ಗೋಡಂಬಿಯಲ್ಲಿರುವ ಅಧಿಕ ಪ್ರೊಟೀನ್ಗಳು ನಮ್ಮ ತೂಕವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಕೊಲೆಸ್ಟ್ರಾಲ್ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಕೆಲವರಿಗೆ ಕೆಲವು ಪದಾರ್ಥಗಳು ಸೇವನೆಯಿಂದ ಅಲರ್ಜಿಯಾಗಬಹುದು. ಇನ್ನು ಗೋಡಂಬಿ ತಿನ್ನುವುದರಿಂದ ಮೈ ಕಡಿತ, ತುರಿಕೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರ ಬಳಿ ಎಷ್ಟು ಪ್ರಮಾಣದಲ್ಲಿ ಗೋಡಂಬಿ ಸೇವಿಸಬೇಕೆಂದು ಸಲಹೆ ಪಡೆದು ಸೇವಿಸಿ.. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ