Banana Peel Help Reduce Grey Hair
- ಬಿಳಿ ಕೂದಲಿಗೆ ನೈಸರ್ಗಿಕ ಹೇರ್ ಮಾಸ್ಕ್ ಮಾಡುವುದು ಹೇಗೆ ಗೊತ್ತಾ?
- ಬಾಳೆ ಹಣ್ಣಿನ ಸಿಪ್ಪೆ ರುಬ್ಬಿ, ಎಣ್ಣೆ, ಅಲೋವೆರಾ ಸೇರಿಸಿ ತಲೆಗೆ ಹಚ್ಚಿ
- ಬಾಳೆ ಹಣ್ಣಿನ ಹೇರ್ ಮಾಸ್ಕ್ನಿಂದ ಕಂಡಿಷನರ್, ಬಣ್ಣದ ಅಗತ್ಯವಿಲ್ಲ
Banana Peel Help Reduce Grey Hair: ಇತ್ತೀಚಿನ ಬದುಕಿನಲ್ಲಿ ಬಿಳಿ ಕೂದಲು ಸಣ್ಣ ಮಕ್ಕಳಿನಲ್ಲಿಯೂ ಕಾಣಿಸಿಕೊಳ್ಳುತ್ತದೆ. ದೊಡ್ಡವರಾದಂತೆ ಅದರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಬಿಳಿ ಕೂದಲಿನಿಂದ ಮುಕ್ತಿ ಪಡೆದುಕೊಳ್ಳಲು ಅದನ್ನು ಕೈನಿಂದ ಅಥವಾ ಟ್ರಿಮ್ಮರ್ನಿಂದ ರಿಮೂವ್ ಮಾಡೋದು. ರಾಸಾಯನಿಕ ಹೇರ್ ಮಾಸ್ಕ್, ಕಲರ್ ಬಳಕೆ ಮಾಡುವುದು ಹೆಚ್ಚಾಗುತ್ತದೆ. ಇವೆಲ್ಲ ಕ್ಷಣಿಕ ಭವಿಷ್ಯದಲ್ಲಿ ನಿಮ್ಮ ಕೂದಲಿನ ಆರೋಗ್ಯ ಸಮಸ್ಯೆಯನ್ನುಂಟು ಮಾಡಬಲ್ಲವು. ಹೀಗಾಗಿ ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಮುಕ್ತಿ ಕೊಡಬಹುದು ಹೇಗೆ ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ, ರೋಗನಿರೋಧಕ ಅಂಶ ಸೇರಿದಂತೆ ನಾನಾ ಆರೋಗ್ಯಕಾರಿ ಪೋಷಕಾಂಶವನ್ನು ಈ ಬಾಳೆ ಹಣ್ಣು ಹೊಂದಿದೆ. ಇದು ಕಡಿಮೆ ಬೆಲೆಗೆ ಸಿಗುವ ಆರೋಗ್ಯಕಾರಿ ಹಣ್ಣಲ್ಲದೆ, ಇದರ ಬೇಡ ಎಂದು ಬಿಸಾಡುವ ಇದರ ಸಿಪ್ಪೆಯಲ್ಲಿ ನಾನಾ ಪ್ರಯೋಜನಳು ಇವೆ. ಹೌದು, ಬಾಳೆ ಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಹೇರ್ ಮಾಸ್ಕ್ ಆಗಿ ಬಳಕೆ ಮಾಡುವುದರಿಂದ ಕೊದಲಿನ ಹೊಳಪು ಹೆಚ್ಚಾಗುತ್ತದೆ. ಅಲ್ಲದೆ ನೈಸರ್ಗಿಕ ಬಣ್ಣವನ್ನು ಇದು ನೀಡುತ್ತದೆ.
ಸಾಮಾನ್ಯವಾಗಿ ಬಾಳೆಹಣ್ಣು ತಿಂದ ಮೇಲೆ ಕೆಲವರು ಸಿಪ್ಪೆ ಬಿಸಾಡುತ್ತಾರೆ ಇನ್ನೂ ಕೆಲವರು ಅದನ್ನು ಕಣ್ಣಿನ ಮೇಲಿಟ್ಟು ತಂಪು ಮಾಡಿಕೊಳ್ಳುತ್ತಾರೆ. ಆದರೆ, ಮತ್ತೊಂದು ಅಚ್ಚರಿ ಸಂಗತಿ ಇದರಲ್ಲಿರುವ ಉತ್ಕರ್ಷಣ ನಿರೋಧಕ ನೆತ್ತಿಯಲ್ಲಿ ಮೆಲನಿನ್ ಉತ್ಪಾದನೆ ಯನ್ನು ಹೆಚ್ಚು ಮಾಡುತ್ತದೆ. ಈ ಹಿನ್ನೆಲೆ ನಿಮ್ಮ ಬಿಳಿ ಬಣ್ಣದ ಕೂದಲಿಗೆ ಬ್ರೇಕ್ ಕೊಡಬಹುದು. ಮುಖ್ಯವಾಗಿ ದೇಹದಲ್ಲಿ ಮೆಲನಿನ್ ಕಡಿಮೆಯಾದಾಗಲೇ ಈ ಬಿಳಿ ಕೂದಲು ಕಾಣಿಸಿಕೊಳ್ಳುವುದು
ಹೇರ್ ಮಾಸ್ಕ್ ತಯಾರಿಸುವುದು ಹೇಗೆ
ನೈಸರ್ಗಿಕವಾಗಿ ಹೇರ್ ಮಾಸ್ಕ್ ತಯಾರಿಸಲು ಮುಖ್ಯವಾಗಿ ಎರಡು ಬಾಳೆ ಹಣ್ಣಿ ಸಿಪ್ಪೆ, 2 ಚಮಚ ಮೊಸರು ಅಥವಾ ಅಲೋವೆರಾ ಬೇಕು. ತೆಂಗಿನ ಎಣ್ಣೆ ಬೇಕಾಗುತ್ತದೆ.
ಮಾಡುವ ವಿಧಾನ
ಬಾಳೆಹಣ್ಣಿನ ಸಿಪ್ಪೆ ತುಂಡು ಮಾಡಿ ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿ ಅದು ಪೇಸ್ಟ್ ಆದ ನಂತ ಅದಕ್ಕೆ ಮೊಸರು ಅಥವಾ ಅಲೋವೆ ಹಾಗೂ ತೆಂಗಿನ ಎಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ಬೆರಸಿ ಚೆನ್ನಾಗಿ ಕಲಿಸಿಕೊಳ್ಳಿ
ತಲೆಗೆ ಅಪ್ಲೈ ಮಾಡೋದು ಹೇಗೆ
ಪೇಸ್ಟ್ ಮಾಡಿದ ಬಾಳೆಹಣ್ಣಮ್ಮಿ ತಲೆಯ ಬುಡದಿಂದ ಹಚ್ಚಿ ಹೆಚ್ಚಾಗಿ ಬಿಳಿ ಕೂದಲಿನ ಬಳಿ ಹಚ್ಚಿ 35ರಿಂದ 45 ನಿಮಿಷ ಅದು ಒಳಗಡೆ ಕಾರ್ಯಾಚರಣೆ ನಡೆಸಲು ಬಿಡಿ. ಆನಂತರ ಸಾಫ್ಟ್ ಶಾಂಪು ಬಳಕೆ ಮಾಡಿ, ಉಗುರು ಬೆಚ್ಚಗಗಿನ ನೀರಿನಲ್ಲಿ ತಲೆ ಸ್ನಾನ ಮಾಡಿ ಎಂದು ವೈದ್ಯರು ಹೇಳಿದ್ದಾರೆ.
ಈ ಬಾಳೆ ಹಣ್ಣಿನ ಮಾಸ್ಕ್ ನಿಮ್ಮ ದೇಹದ ಕೂದಲಿಗೆ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ ಅಷ್ಟೇ ಅಲ್ಲದೆ, ತಲೆಯಲ್ಲಿರುವ ಬಿಳಿ ಕೂದಲನ್ನು ಕ್ರಮೇಣವಾಗಿ ಕಡಿಮೆ ಮಾಡಲು ಕಾರಣವಾಗುತ್ತದೆ ಎನ್ನಲಾಗಿದೆ, (ಏಜೆನ್ಸೀಸ್).