HIV:ಸಾಮಾನ್ಯವಾಗಿ ಅನೇಕ ಗಂಭೀರ ರೋಗಗಳು ಸೊಳ್ಳೆ ಕಡಿತದಿಂದ ಹರಡುತ್ತದೆ. ಕೆಲ ಸೊಳ್ಳೆಗಳು ಅಪಾಯಕಾರಿ ರೋಗಗಳ ವಾಹಕಗಳಾಗಿವೆ. ಹಾಗೆ ಅನೇಕ ರೀತಿಯ ವೈರಲ್ ಮತ್ತು ಬ್ಯಾಕ್ಟರಿಗಳು ಸೊಳ್ಳೆ ಕಡಿತದ ಮೂಲಕ ಮಾನವ ದೇಹ ತಲುಪುತ್ತಿವೆ. ಆದಾಗ್ಯೂ, HIV ಸೋಂಕಿತ ವ್ಯಕ್ತಿಯ ರಕ್ತ ಹೀರಿದ ಸೊಳ್ಳೆ, ಆರೋಗ್ಯವಂತ ವ್ಯಕ್ತಿಗೆ ಕಚ್ಚಿದ್ರೆ ಏಡ್ಸ್ ರೋಗ ಬರುತ್ತದೆಯೇ? ಎಂಬುದು ತಿಳಿಯೋಣ..
ಎಚ್ಐವಿ ಒಂದು ವೈರಸ್. ಇದು ಮಾನವನ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಕಾಲಾನಂತರದಲ್ಲಿ ಏಡ್ಸ್‌ಗೆ ಕಾರಣವಾಗಬಹುದು. ಈ ವೈರಸ್ ಮುಖ್ಯವಾಗಿ ಸೋಂಕಿತ ವ್ಯಕ್ತಿಯ ರಕ್ತದ ಮೂಲಕ, ಲೈಂಗಿಕ ಸಂಪರ್ಕದ ಮೂಲಕ ಅಥವಾ ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹರಡುತ್ತದೆ.
ಸೊಳ್ಳೆಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ HIV ವೈರಸ್ ಅನ್ನು ಹರಡಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಸೊಳ್ಳೆಗಳ ಜೈವಿಕ ಪ್ರಕ್ರಿಯೆಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (CDC) ಕೂಡ ಸೊಳ್ಳೆಗಳು HIV ಹರಡುವುದಿಲ್ಲ ಎಂದು ದೃಢಪಡಿಸಿವೆ.
ಡೆಂಗ್ಯೂ ಅಥವಾ ಮಲೇರಿಯಾದಂತಹ ಕಾಯಿಲೆಗಳಲ್ಲಿ, ಸೊಳ್ಳೆಗಳು ತಮ್ಮ ದೇಹದಲ್ಲಿ ವೈರಸ್ ಅಥವಾ ಪರಾವಲಂಬಿಯನ್ನು ವೃದ್ಧಿಗೊಳಿಸಲು ಅವಕಾಶ ಮಾಡಿಕೊಡುತ್ತವೆ ಮತ್ತು ನಂತರ ಅದನ್ನು ಮುಂದಿನ ವ್ಯಕ್ತಿಗೆ ವರ್ಗಾಯಿಸುತ್ತವೆ. ಆದರೆ ಎಚ್ಐವಿ ಸಂದರ್ಭದಲ್ಲಿ ಇದು ಸಂಭವಿಸುವುದಿಲ್ಲ.(ಏಜೆನ್ಸೀಸ್)