ಲೈಫ್‌ಸ್ಟೈಲ್

ಕ್ಯಾನ್ಸರ್​ ಗೆಲ್ಲೋಣ: ರಾಜ್ಯದಲ್ಲೇ ಸ್ತನ-ಗರ್ಭಕಂಠ ಅಧಿಕ

ಕ್ಯಾನ್ಸರ್​ ಬಂದ ಮೇಲೆ ಒದ್ದಾಡುವುದಕ್ಕಿಂತ ಮುನ್ನೆಚ್ಚರಿಕೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಿಸಿಕೊಂಡರೆ ಕ್ಯಾನ್ಸರ್​ ಗೆಲ್ಲಬಹುದು ಎಂಬುದು ಹಲವು ವೈದ್ಯರ ಸಲಹೆ. ಇಂದು ಕ್ಯಾನ್ಸರ್​ ಜಾಗೃತಿ ದಿನದ ಸಂದರ್ಭದಲ್ಲಿ ಅಪೋಲೋ ಆಸ್ಪತ್ರೆ ಮೆಡಿಕಲ್ ಆಂಕೋಲಜಿಸ್ಟ್ ಡಾ ಸಿ.ಎನ್.ಪಾಟೀಲ್ ಅವರಿಂದ ಸಲಹೆಗಳು...

ಸಾವಿಗೆ ಪ್ರಮುಖ ಕಾರಣವಾಗಿರುವ ಅಸಾಂಕ್ರಾಮಿಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಸಹ ಒಂದು. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿದೆ.

ಅಸುರಕ್ಷಿತ ಲೈಂಗಿಕತೆಯಿಂದ ಬರುವ ಕ್ಯಾನ್ಸರ್ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹೆಪಟೈಟಿಸ್ ಬಿ ಮತ್ತು ಎಚ್​ಪಿವಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಯಕೃತ್ ಮತ್ತು ಗರ್ಭಕಂಠದ ಕ್ಯಾನ್ಸರ್ ಬಾರದಂತೆ ತಡೆಯಬಹುದು.

ಆರೋಗ್ಯಕರ ಪರಿಸರ ಹೊಂದುವುದರಿಂದಲೂ ಕ್ಯಾನ್ಸರ್ ತಡೆಯಲು ಸಾಧ್ಯ. ಹೀಗಾಗಿ ಮನೆಯ ಸುತ್ತಮುತ್ತ ಮರ ಗಿಡಗಳನ್ನು ನೆಟ್ಟು ಉತ್ತಮ ಪರಿಸರ ಇರುವಂತೆ ನೋಡಿಕೊಳ್ಳಿ. ದೇಹದಲ್ಲಿ ಅನಗತ್ಯ ಕೊಬ್ಬು ಬೆಳೆಯದಂತೆಯೂ ಎಚ್ಚರವಹಿಸಿ. ವ್ಯಾಯಮ ಹಾಗೂ ನಿಯಮಿತ ಆಹಾರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ದೇಹದ ತೂಕವನ್ನು ಸಮಪ್ರಮಾಣದಲ್ಲಿ ಕಾಪಾಡಿಕೊಳ್ಳಿ, ತರಕಾರಿ, ಸೊಪ್ಪು, ಹಣ್ಣು, ಧಾನ್ಯಗಳನ್ನು ಸೇವಿಸಿ, ಕೆಂಪು ಮಾಂಸ ಹಾಗೂ ಸಂರಕ್ಷಿಸಿದ ಆಹಾರ ಸೇವನೆಯಿಂದ ದೂರವಿರಿ.

,