ಲೈಫ್‌ಸ್ಟೈಲ್

ಮೆದುಳಿನ ಕ್ಯಾನ್ಸರ್ ಏಕೆ ಬರುತ್ತೆ; ಅದಕ್ಕೆ ಸೂಕ್ತ ಚಿಕತ್ಸೆ ಯಾವುದು ಗೊತ್ತಾ? Health

Health | ಕ್ಯಾನ್ಸರ್​ ಎಂಬ ಈ ಕೆಟ್ಟ ಕಾಯಿಲೆಯು ಮೆದುಳಿನ ಅಸಹಜ ಬೆಳವಣಿಗೆ ಅಥವಾ ದೇಹದ ಕೆಲವು ಭಾಗಗಳಲ್ಲಿ ಕಂಡುಬರುವ ಗೆಡ್ಡೆಯ ಕೋಶಗಳಿಂದ ಹರಡುವ ಮೆಟಾಸ್ಟಾಟಿಕ್ ಗೆಡ್ಡೆಯಾಗಿದೆ. ಇದನ್ನು ಪ್ರಾಥಮಿಕ ಮೆದುಳಿನ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಇದು ಮೆದುಳು, ಕಪಾಲದ ನರಗಳು, ಪಿಟ್ಯುಟರಿ ಗ್ರಂಥಿ ಮತ್ತು ಪೀನಲ್ ಗ್ರಂಥಿ ಸೇರಿದಂತೆ ತಲೆಬುರುಡೆಯ ಅಂಗಾಂಶಗಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಈ ಕಾಯಿಲೆಯು ನಮ್ಮ ದೇಹದ ಯಾವುದೋ ಭಾಗದಲ್ಲಿ ಕಾಣಿಸಿಕೊಂಡು ನಂತರ ಮೆದುಳಿಗೆ ಹರಡುತ್ತದೆ.

ಸಾಮಾನ್ಯವಾಗಿ ಹೇಳುವುದಾದರೆ, ಪ್ರಾಥಮಿಕ ಮೆದುಳಿನ ಕ್ಯಾನ್ಸರ್ ಆರೋಗ್ಯಕರ ಮೆದುಳಿನ ಕೋಶಗಳಲ್ಲಿ ಆನುವಂಶಿಕ ರೂಪಾಂತರಗಳನ್ನು ಉಂಟುಮಾಡುತ್ತದೆ. ರೂಪಾಂತರಗಳ ಜೀವಕೋಶಗಳು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ ಬೆಳೆಯುವ ಮೂಲಕ ದೇಹದೆಲ್ಲಡೆ ಹರಡಿಕೊಳ್ಳುತ್ತವೆ. ನಂತರ ಈ ರಾಕ್ಷಸ ಜೀವಕೋಶಗಳು ದೇಹದಲ್ಲಿ ಆವರಿಸಿ, ಗೆಡ್ಡೆಯ ರಚನೆಗೆ ಕಾರಣವಾಗುತ್ತದೆ.

ಚಿಕಿತ್ಸೆ ನೀಡಲು ಏಕೆ ಕಷ್ಟ?

ವೈದ್ಯಕೀಯ ತಂತ್ರಜ್ಞಾನದ ಹೊರತಾಗಿಯೂ, ಮೆದುಳಿನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದು ಇನ್ನೂ ಸವಾಲಿನ ಕೆಲಸವಾಗಿದೆ. ಹಿಂದಿನಿಂದಲೂ ಸಹ ವೈದ್ಯಕೀಯ ತಂತ್ರಜ್ಞಾನ ಬಳಸಿ ಕ್ಯಾನ್ಸರ್‌ಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಮೂಲಕ ಹಲವರನ್ನು ಬದುಕಿಸಲಾಗಿದೆ. ಆದರೆ ಹೆಚ್ಚಿನ ಸಂಶೋಧನೆ ಮತ್ತು ನಾವೀನ್ಯತೆಯ ಹೊರತಾಗಿಯೂ ಮೆದುಳಿನ ಗೆಡ್ಡೆಗಳಿಗೆ ಚಿಕಿತ್ಸೆ ನೀಡುವುದು ಇನ್ನೂ ಸವಾಲಿನ ಕೆಲಸವೇ ಆಗಿದೆ.

ಮೆದುಳು ಕ್ಯಾನ್ಸರ್‌ನ ಲಕ್ಷಣಗಳು

ಜ್ಞಾಪಕ ಶಕ್ತಿ ಕೊರತೆ ಹಾಗೂ ದೇಹದಲ್ಲಿ ಬದಲಾವಣೆ

ದೃಷ್ಟಿ ಸಮಸ್ಯೆಗಳು

ವಾಕರಿಕೆ (ವಾಂತಿ) ಬರುವುದು

ರೋಗಗ್ರಸ್ತವಾಗುವಿಕೆ

ತಲೆನೋವು : ಮೆದುಳು ಕ್ಯಾನ್ಸರ್​ ಕಂಡುಬರುತ್ತಿರುವವರ ದೇಹದಲ್ಲಿ ಪ್ರಥಮವಾಗಿ ಅತೀ ಹೆಚ್ಚು ತಲೆ ನೋವು ಕಾಣಿಸಿಕೊಳ್ಳಲಿದೆ.

ಮೆದುಳು ಕ್ಯಾನ್ಸರ್‌ ಬರಲು ಕಾರಣ

ಕ್ಯಾನ್ಸರ್ ಅಂಶಗಳನ್ನೊಂದಿರುವ ಸೀಸ, ಪ್ಲಾಸ್ಟಿಕ್, ರಬ್ಬರ್, ಪೆಟ್ರೋಲಿಯಂನೊಂದಿಗೆ ಸುರಕ್ಷತೆ ವಹಿಸದೆ ಕೆಲಸ ನಿರ್ವಹಿಸುವುದು.

ಕಳೆನಾಶಕಗಳು ಮತ್ತು ರಸಗೊಬ್ಬರಗಳಿಗೆ ಒಡ್ಡಿಕೊಳ್ಳುವುದು

ಕೀಟನಾಶಕಗಳೊಂದಿಗೆ ಒಡ್ಡಿಕೊಳ್ಳುವುದು

ಧೂಮಪಾನ ಮಾಡುವುದು

ಪ್ರಾಥಮಿಕ ಮಿದುಳಿನ ಕ್ಯಾನ್ಸರ್‌ಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ಕೆಲವು ಅಂಶಗಳು ಅಪಾಯವನ್ನು ಉಂಟು ಮಾಡುತ್ತವೆ ಎಂದು ತಿಳಿದುಬಂದಿದೆ.

ಮೆದುಳಿನ ಕ್ಯಾನ್ಸರ್‌ಗೆ ಚಿಕಿತ್ಸಾ ಆಯ್ಕೆಗಳು ಯಾವುವು?

ಕಾರ್ಮುಸ್ಟೈನ್ ಇಂಪ್ಲಾಂಟ್‌ಗಳು

ಔಷಧಗಳು

ವಿಕಿರಣ ಚಿಕಿತ್ಸೆ

ಕೀಮೋಥೆರಪಿ

ಶಸ್ತ್ರಚಿಕಿತ್ಸೆ

ಮೆದುಳಿನ ಕ್ಯಾನ್ಸರ್​ಗೆ ತುತ್ತಾದವರಿಗೆ ಅವರ ಗಾತ್ರ, ದೇಹದ ಭಾಗ ಮತ್ತು ಹಂತವನ್ನು ಆಧರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

(ಏಜೆನ್ಸೀಸ್​)