- ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ದುರ್ಬಲ ಮೂಳೆಗಳು ಅನೇಕ ಜನರ ಸಮಸ್ಯೆಯಾಗಿದೆ
- ಇದರ ಪರಿಣಾಮವಾಗಿ ಕೈ ನೋವು, ಮೊಣಕಾಲು ನೋವು, ಬೆನ್ನು ನೋವು ಕಾಣಿಸಿಕೊಳ್ಳುತ್ತವೆ
- ಈ ಎಲ್ಲಾ ಸಮಸ್ಯೆಗಳಿಗೆ ಆಹಾರ ಮತ್ತು ಜೀವನಶೈಲಿಯೇ ಕಾರಣವಾಗಿರಬಹುದು
- ನಾವು ಸೇವಿಸುವ ಕೆಲವು ಆಹಾರಗಳು ಮೂಳೆಗಳ ಮೇಲೆ ಗಂಭೀರ ಪರಿಣಾಮ ಬೀರಲಿವೆ
Bone Health: ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ದುರ್ಬಲ ಮೂಳೆಗಳು ಅನೇಕ ಜನರ ಸಮಸ್ಯೆಯಾಗಿ ಮಾರ್ಪಾಟ್ಟಿದೆ. ಇದರ ಪರಿಣಾಮವಾಗಿ ಕೈ ನೋವು, ಮೊಣಕಾಲು ನೋವು, ಬೆನ್ನು ನೋವು ಮುಂತಾದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳಿಗೆ ಹೆಚ್ಚಾಗಿ ಯುವಜನರೇ ಬಲಿಯಾಗುತ್ತಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಆಹಾರ ಮತ್ತು ಜೀವನಶೈಲಿಯೇ ಕಾರಣವಾಗಿರಬಹುದು. ಪ್ರತಿನಿತ್ಯ ಸೇವಿಸುವ ಕೆಲವು ಆಹಾರಗಳು ಮೂಳೆಗಳ ಮೇಲೆ ತುಂಬಾ ಗಂಭೀರವಾಗಿ ಪರಿಣಾಮ ಬೀರಲಿವೆ. ಹಾಗಾಗಿ ನೀವೇನಾದರೂ ಉತ್ತಮ ಸ್ನಾಯುಗಳನ್ನು ಹೊಂದಲೇಬೇಕು ಎಂದು ಬಯಸಿದರೆ, ಈ ರೀತಿಯ ಅಭ್ಯಾಸಗಳನ್ನು ಇಂದೇ ಬಿಡಿ.
ಮದ್ಯಪಾನ ಸೇವನೆ
ಅತಿಯಾದ ಮದ್ಯಪಾನವು ನಮ್ಮ ಯಕೃತ್ತಿಗೆ ಮಾತ್ರವಲ್ಲದೆ ನಮ್ಮ ಮೂಳೆಯ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಯಾವ ವ್ಯಕ್ತಿ ಅತಿಯಾಗಿ ಮದ್ಯಪಾನ ಮಾಡುತ್ತಾನೋ ಅವರ ದೇಹವು ನಮ್ಮ ಮೂಳೆಯು ಆರೋಗ್ಯಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಮೆಗ್ನೀಶಿಯಮ್ ಅನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ಮೂಳೆ ಪುನಃ ರಚನೆಯನ್ನು ನಿಧಾನಗೊಳಿಸಿ, ಹಾರ್ಮೋನ್ ಮಟ್ಟವನ್ನು ಬದಲಾಯಿಸುತ್ತದೆ.
ಅತಿಯಾದ ಕೆಫೀನ್
ಕೆಫೀನ್ ಅತಿ ಹೆಚ್ಚಾದ ಸೇವನೆಯು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಫೀನ್ ಮೂತ್ರದ ಮೂಲಕ ಕ್ಯಾಲ್ಸಿಯಂ ಹೊರಹೋಗುವಿಕೆಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟುಮಾಡಿ, ಮೂಳೆಗಳಿಂದ ಕ್ಯಾಲ್ಸಿಯಂ ಎಳೆದುಕೊಳ್ಳುವಂತೆ ಮಾಡುತ್ತದೆ. ವಿಟಮಿನ್ ಡಿ ಮಟ್ಟದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ.
ಅತಿಯಾದ ಉಪ್ಪು ಸೇವನೆ
ಅತಿಯಾದ ಉಪ್ಪು ಸೇವನೆಯು ರಕ್ತದೊತ್ತಡದ ಮಟ್ಟ ಹೆಚ್ಚಿಸುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ, ಇದು ನಿಮ್ಮ ಮೂಳೆಗಳ ಮೇಲೆ ತುಂಬಾ ಗಂಭೀರ ಪರಿಣಾಮವನ್ನು ಬೀರುತ್ತದೆ. ಇದರಿಂದ ಹೆಚ್ಚು ಉಪ್ಪು ತಿನ್ನುವುದರಿಂದ ಮೂಳೆಗಳಿಂದ ಕ್ಯಾಲ್ಸಿಯಂ ನಷ್ಟವಾಗುತ್ತದೆ.
ಅತಿಯಾದ ಕೆಂಪು ಮಾಂಸ ಸೇವನೆ
ಹೆಚ್ಚಿನ ಪ್ರೋಟೀನ್ ಸೇವನೆಯು ಮೂಳೆಗಳಿಂದ ಕ್ಯಾಲ್ಸಿಯಂ ಹೊರಹೋಗಲು ಕಾರಣವಾಗಬಹುದು. ಇದು ಆಸ್ಟಿಯೊಪೊರೊಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಫಾಸ್ಫರಸ್ ಕ್ಯಾಲ್ಸಿಯಂ ಸಮತೋಲನೆಯನ್ನು ಅಸ್ಥಿರಗೊಳಿಸುತ್ತದೆ ಮತ್ತು ಮೂಳೆಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.
ಮೂಳೆಗಳು ಬಲಗೊಳ್ಳಬೇಕೆಂದರೆ ಸರಿಯಾದ ಆಹಾರ ಕ್ರಮಗಳ ಅಭ್ಯಾಸವನ್ನು ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ. ಹಾಗಾಗಿ ಹಸಿರು ತರಕಾರಿಗಳು, ಹಣ್ಣುಗಳು, ಪೌಷ್ಟಿಕಾಂಶಗಳಿಂದ ಕೂಡಿದ ಆಹಾರಗಳನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ಮೂಳೆಗಳನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡುತ್ತದೆ (ಏಜೆನ್ಸೀಸ್).