ಲೈಫ್‌ಸ್ಟೈಲ್

ಕಪ್ಪು ಚುಕ್ಕೆ ಇರುವ ಬಾಳೆಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ? ಈ ಬಗ್ಗೆ ಮೊದಲು ತಿಳಿದುಕೊಳ್ಳಿ

ಬೆಂಗಳೂರು:  ಬಾಳೆಹಣ್ಣುಗಳು ವರ್ಷವಿಡೀ ನಮಗೆ  ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಈ ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬಾಳೆ ಹಣ್ಣುಗಳು ಸಿಗುತ್ತವೆ.  ಈ ಬಾಳೆಹಣ್ಣುಗಳಲ್ಲಿ ಕೆಲವು ಕಪ್ಪು ಚುಕ್ಕೆಗಳನ್ನು ಹೊಂದಿರುತ್ತವೆ. ಕಪ್ಪು ಚುಕ್ಕೆ ಬಾಳೆಹಣ್ಣು ಮಾರಾಟಕ್ಕೆ ಇರಿಸಿರೋದನ್ನು ನೀವು ನೋಡಿರಬಹುದು. ಆದ್ರೆ ಈ ಬಾಳೆಹಣ್ಣು ತಿನ್ನಬಹುದಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

 ಬಾಳೆ ಹಣ್ಣಿನ ಸಿಪ್ಪೆಯ ಮೇಲೆ ಇರುವ  ಕಪ್ಪು ಚುಕ್ಕೆಗಳಲ್ಲಿರುವ TNF ಕ್ಯಾನ್ಸರ್ ವಿರುದ್ಧ ಹೋರಾಡುವ ವಸ್ತುವಾಗಿದೆ. ಇದು ದೇಹದಲ್ಲಿನ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ.

ಮಾಗಿದ ಬಾಳೆಹಣ್ಣುಗಳು ಸಿಹಿ ಮತ್ತು ಟೇಸ್ಟಿಯಾಗಿ ಇರುತ್ತದೆ. ಬಾಳೆಹಣ್ಣುಗಳು ಹಣ್ಣಾದಾಗ, ಅವುಗಳಲ್ಲಿರುವ ಕಾರ್ಬೋಹೈಡ್ರೇಟ್ಗಳು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತವೆ. ಈ ಹಣ್ಣುಗಳು ಜೀರ್ಣಿಸಿಕೊಳ್ಳಲು ತುಂಬಾ ಸುಲಭ. ಜೀರ್ಣಕ್ರಿಯೆಯ ಸಮಸ್ಯೆಗಳೂ ಕಡಿಮೆಯಾಗುತ್ತವೆ.

ಬಾಳೆಹಣ್ಣಿನ ಚರ್ಮದ ಮೇಲಿನ ಕಪ್ಪು ಕಲೆಗಳು ಪೊಟ್ಯಾಸಿಯಮ್ ಅಂಶದಲ್ಲಿ ಸಮೃದ್ಧವಾಗಿವೆ. ಹೀಗೆ ಮಾಗಿ ಹಣ್ಣಾಗಿರುವ ಕಪ್ಪು ಚುಕ್ಕೆ ಹೊಂದಿರುವ ಬಾಳೆ ಹಣ್ಣು  ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ದೇಹದಲ್ಲಿ ಅನಗತ್ಯ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಇಲ್ಲ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ.

ಮಾಗಿದ ಬಾಳೆಹಣ್ಣು ಕೂಡ ಆಂಟಾಸಿಡ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಅಂತಹ ಹಣ್ಣುಗಳು ಹೊಟ್ಟೆಯ ಆಮ್ಲಗಳು ಮತ್ತು ಕಿರಿಕಿರಿಯಿಂದ ರಕ್ಷಿಸುತ್ತವೆ. ಇಂತಹ ಹಣ್ಣುಗಳನ್ನು ತಿನ್ನುವುದರಿಂದ ಎದೆಯುರಿ ಬೇಗ ಕಡಿಮೆಯಾಗುತ್ತದೆ.

ಮಧುಮೇಹ ರೋಗಿಗಳು ಮಾಗಿದ ಬಾಳೆಹಣ್ಣನ್ನು ತಿನ್ನಬಾರದು. ಇವುಗಳಲ್ಲಿರುವ ಪಿಷ್ಟದ ಅಂಶವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಕಾರಣ, ಮಾಗಿದ ಬಾಳೆಹಣ್ಣಿನಿಂದ ಕೊಳೆತ ವಾಸನೆ ಬಂದರೂ, ಅವುಗಳನ್ನು ತಿನ್ನಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಗಮನಿಸಿ: ಈ ಆರೋಗ್ಯ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ. ಇದು ಕೇವಲ ಜಾಗೃತಿಗಾಗಿ