Black Fungus Onions : ಈರುಳ್ಳಿಯ ಹೊರಪದರದಲ್ಲಿ ಕಪ್ಪು ಪುಡಿಯಂತಹ ವಸ್ತುವಿರುವುದನ್ನು ನೀವು ನೋಡಿದ್ದೀರಾ? ಈ ಕಣಗಳು ಕೊಳಕಲ್ಲ. ಇದು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲ್ಪಡುವ ಒಂದು ರೀತಿಯ ಶಿಲೀಂಧ್ರವಾಗಿದೆ. ಇತ್ತೀಚಿಗೆ ಮಾರಕಟ್ಟೆಯಲ್ಲಿ ಸಿಗುವಂತಹ ಎಲ್ಲಾ ಈರುಳ್ಳಿಗಳೂ ಕೂಡಾ ಈ ಕಪ್ಪು ಕಣವನ್ನು ಹೊಂದಿರುತ್ತವೆ, ಈ ಬಗ್ಗೆ ವೈದ್ಯರೊಬ್ಬರು ಮಾಡಿದ ಪೋಸ್ಟ್ ಆಹಾರ ಸುರಕ್ಷತಾ ಪದ್ಧತಿಗಳ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ ಎಂದರೆ ತಪ್ಪಾಗದು.
ಡಾ. ನಂದಿತಾ ಅಯ್ಯರ್ ತಮ್ಮ ಎಕ್ಸ್ ಖಾತೆಯಲ್ಲಿ ಕಪ್ಪು ಶಿಲೀಂಧ್ರವನ್ನು ಹೊಂದದೆ ಇರುವಂತಹ ಈರುಳ್ಳಿಯನ್ನು ಪಡೆಯುವ ಏಕೈಕ ಮಾರ್ಗವೆಂದರೆ, ತರಕಾರಿ ಮಾರುಕಟ್ಟೆಗೆ ಚಾಕು ತೆಗೆದುಕೊಂಡು ಹೋಗಿ, ಸಿಪ್ಪೆ ಸುಲಿದು, ಗುಣಮಟ್ಟವನ್ನು ಪರಿಶೀಲಿಸಿ ನಂತರ ಖರೀದಿಸಬೇಕು. ನಾನು ಪ್ರತಿಯೊಂದು ಅಪ್ಲಿಕೇಶನ್ಗಳಲ್ಲೂ ಖರೀದಿಸಿದ್ದೇನೆ. ಆದರೆ, ಕಪ್ಪು ಕಲೆಗಳಿಲ್ಲದ ಈರುಳ್ಳಿಯನ್ನು ಎಂದಿಗೂ ನೋಡಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಅನೇಕ X ಬಳಕೆದಾರರು "ಸ್ವಚ್ಛ" ಈರುಳ್ಳಿಯನ್ನು ಹುಡುಕುವಲ್ಲಿ ವಿಫಲರಾಗಿದ್ದಾರೆ. ಕೆಲವರು ವಿತರಣಾ ಅಪ್ಲಿಕೇಶನ್‌ಗಳನ್ನು ಬಳಸುವ ಬದಲಿಗೆ ಸ್ಥಳೀಯ ಮಾರುಕಟ್ಟೆಗೆ ಹೋಗಿ ಖರೀದಿಸುವಂತೆ ಸಲಹೆ ನೀಡಿದರು. ಕೆಲವರು ಈ ಸಮಸ್ಯೆ ಹೊಸದೇನಲ್ಲ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಈರುಳ್ಳಿಗಳು ಈ ಕಪ್ಪು ಶಿಲೀಂಧ್ರವನ್ನು ಹೊಂದಿರುವುದು ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.
ಈರುಳ್ಳಿಯಲ್ಲಿ ಕಪ್ಪು ಶಿಲೀಂಧ್ರ ಬೆಳೆಯುವುದಕ್ಕೆ ಮುಖ್ಯ ಕಾರಣವೆಂದರೆ ಅಸ್ಪರ್ಜಿಲಸ್ ನೈಜರ್ (Aspergillus niger) ಎಂಬ ಕುಟುಂಬದ ತಳಿಯಾಗಿದೆ. ಇದು ಮಣ್ಣು, ಗಾಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಸಾಮಾನ್ಯ ಬೆಳೆಯಾಗಿದೆ. ವೈದ್ಯರ ಪ್ರಕಾರ, "ಆರ್ದ್ರ ವಾತಾವರಣ, ಶೇಖರಣೆಯಲ್ಲಿ ಕಳಪೆ ಗಾಳಿ, ಗೋದಾಮಿನಲ್ಲಿ ದೀರ್ಘ ಕಾಲ ಅಲ್ಲಿಯೇ ಬಿಡುವುದು. ಮಸುಕಾದ ಅಂಗಡಿಗಳು ಈರುಳ್ಳಿಯಲ್ಲಿ ಕಪ್ಪು ಕಾಣುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಹಣೆಯ ಆಕಾರವು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ! ನಿಮ್ಮ ಅದೃಷ್ಟದ ರಹಸ್ಯ ತಿಳಿದುಕೊಳ್ಳಿ… personality test
ಡಾ. ನಂದಿತಾ ಅಯ್ಯರ್ ಸೂಚಿಸಿದಂತೆ, ಕಪ್ಪು ವಸ್ತು ಈರುಳ್ಳಿಯ ಹೊರ ಪದರದಲ್ಲಿದ್ದರೆ ಮಾತ್ರ ಸೇವಿಸಬೇಕು. ಆ ಶಿಲೀಂಧ್ರವನ್ನು ತೊಡೆದುಹಾಕಲು ಎಚ್ಚರಿಕೆಯಿಂದ ಸುಲಿಯಬೇಕು. ಕಪ್ಪು ಪದರ ಹೋಗುವವರೆಗೂ ತೆಗೆದು ಚೆನ್ನಾಗಿ ಬೇಯಿಸಬೇಕು. ಆದಾಗ್ಯೂ, ಕಪ್ಪು ವಸ್ತುವು ಹೆಚ್ಚಿನ ಪದರಗಳಲ್ಲಿ ಕಂಡುಬಂದರೆ, ಶುದ್ಧವಾದ ನೀರಿನಿಂದ ತೊಳೆದು ಅದು ಹೋಗುವವರೆಗೂ ಸ್ವಚ್ಛವಾಗಿ ಸಿಪ್ಪೆಯನ್ನು ತೆಗೆಯಬೇಕು. ಇಲ್ಲದಿದ್ದರೆ ಈ ಶಿಲೀಂಧ್ರಗಳು ಕೆಲವೊಮ್ಮೆ ಆರೋಗ್ಯದಲ್ಲಿ ವಿಷವನ್ನು ಉತ್ಪತ್ತಿ ಮಾಡುತ್ತವೆ ಎಂದು ಹೇಳಿದ್ದಾರೆ.
ಕಪ್ಪು ಶಿಲೀಂಧ್ರವಿರುವ ಯಾವುದೇ ಈರುಳ್ಳಿಯನ್ನು ಕತ್ತರಿಸಿದ ನಂತರ ನಿಮ್ಮ ಕೈ ಮತ್ತು ಚಾಕುವನ್ನು ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ಏಕೆಂದರೆ, ಕಪ್ಪು ಶಿಲೀಂಧ್ರಗಳು ನಿಮ್ಮ ದೇಹಕ್ಕೆ ತಲುಪಿ ಕಲುಷಿತಗೊಳಿಸಬಹುದು. ಹಾಗೆಯೇ ತಂದಂತಹ ಈರುಳ್ಳಿಗಳು ಹಾಳಾಗದಂತೆ ತಡೆಯಲು ಜಾಲರಿಯ ಬುಟ್ಟಿ ಅಥವಾ ಮುಚ್ಚಿದ ಪೆಟ್ಟಿಗೆಗಳಲ್ಲಿ ಸಂಗ್ರಹಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.