Kidneys Healthy 
ಲೈಫ್‌ಸ್ಟೈಲ್

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಬೇಕಾ?; ನಿತ್ಯ ಈ ಐದು ನಿಯಮಗಳನ್ನು ರೂಢಿಸಿಕೊಳ್ಳಿ..Kidneys Healthy

ಪ್ರಮುಖ ಮುಖ್ಯಾಂಶಗಳು

  • ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?
  • ಉಪ್ಪಿನಾಂಶ ತಿನ್ನುವುದು, ಸಕ್ಕರೆ ಅಂಶವಿರುವ ಪದಾರ್ಥ ತಿನ್ನುವುದು ಕಡಿಮೆ ಮಾಡಿ
  • ಕಿಡ್ನಿ ಆರೋಗ್ಯಕ್ಕೆ ವ್ಯಾಯಾಮ, ತರಕಾರಿ ಹಣ್ಣು ತಿನ್ನುವುದು ಅಗತ್ಯ.
Kidneys Healthy: ದೇಹದಲ್ಲಿ ಎಲ್ಲ ಅಂಗಾಗದಂತೆ ಕಿಡ್ನಿ ಬಹುಮುಖ್ಯಪಾತ್ರವನ್ನುವಹಿಸುತ್ತದೆ. ಇವು ದಿನಕ್ಕೆ 180ರಿಂದ 200 ಲೀಟರ್​​ ರಕ್ತವನ್ನು ಶುದ್ಧೀಕರಿಸಿ, ದೇಹಕ್ಕೆ ಬೇಡವಾದ ವಸ್ತುಗಳನ್ನು ಫಿಲ್ಟರ್​ ಮಾಡಿ ಹೊರಗೆ ಹಾಕುವುದರಲ್ಲಿ ಹೆಚ್ಚು ಸಹಕಾರಿ. ರಕ್ತದೊತ್ತಡ ನಿಯಂತ್ರಿಸುವ ಪ್ರಮುಖ ಅಂಗಾಗ ಇದಾಗಿದೆ. ಸಕ್ಕರೆ ಹಾಗೂ ಮದ್ಯಪಾನ ಮಿತಿಗೊಳಿಸಿ, ಉಪ್ಪಿನಾಂಶ ಸೇವನೆ ಕಡಿಮೆ ಮಾಡಿ, ಯಥೇಚ್ಛವಾಗಿ ನೀರು ಕುಡಿಯುವದರ ಮೂಲಕ ಅದರ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ.
ಕೆಲವೊಬ್ಬರು ಕಿಡ್ನಿ ಬಗ್ಗೆ ಡೋಂಟ್​ ಕೇರ್​ ಪಾಲಿಸಿಯನ್ನು ಅನುಕರಿಸುತ್ತಾರೆ. ನೀರು ಕಡಿಮೆ ಕುಡಿಯುವುದು. ನಿತ್ಯ ಮದ್ಯಪಾನ ಮಾಡುವುದು ಅಭ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ನೆನಪಿಡಿ ಕಿಡ್ನಿ ಆರೋಗ್ಯ ಒಮ್ಮೆ ಹದಗೆಟ್ಟರೆ ದೇಹದಲ್ಲಿ ರಕ್ತದೊತ್ತಡ ಸಮಸ್ಯೆ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವುದಂತೂ ಗ್ಯಾರಂಟಿ
ಹಾಗಾದ್ರೆ ನಮ್ಮ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು. ನಿತ್ಯ 3ರಿಂದ 4 ಲೀಟರ್​ ನೀರು ಕುಡಿದರೆ ಸಾಕಾ ಅಥವಾ ವ್ಯಾಯಾಮಾ ಏನು ಮಾಡಬೇಕು. ಯಾವ ಆಹಾರವನ್ನು ಸೇವನೆ ಮಾಡಬೇಕು ಎನ್ನುವ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ಈ ಹಣ್ಣು ತರಕಾರಿ ತಿನ್ನಿ

ಮೂತ್ರಪಿಂಡದ ಆರೋಗ್ಯ ಕಾಪಾಡಿಕೊಳ್ಳಲು ಪೊಟ್ಯಾಷಿಯಂ, ಪೋಷಕಾಂಶ ಹಾಗೂ ಆಂಟಿ ಆಕ್ಸಿಡೆಂಟ್​ ಗುಣವುಳ್ಳ ತರಕಾರಿ ತಿನ್ನುವುದು ಉತ್ತಮ. ಉರಿಯೂತ ಶಮನ ಮಾಡುವ ಸೇಬು, ಪೊಟ್ಯಾಸಿಯಮ್​ವುಳ್ಳ ಬ್ಲೂ ಬೆರ್ರಿ, ಸ್ಟ್ರಾಬೆರಿ ಹಾಗೂ ಅನಾನಸ್​ ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ. ಇನ್ನು ತರಕಾರಿಯಲ್ಲಿ ವಿಟಮಿನ್​ ಕೆ ಮತ್ತು ಸಿ ಹಾಗೂ ನಾರಿನಾಂಶವಿರುವ ಎಲೆಕೋಸು, ದಪ್ಪ ಮೆಣಸಿನಕಾಯಿ ಹಾಗೂ ಹೂ ಕೋಸು, ಸೌತೆಕಾಯಿಯನ್ನು ತಿನ್ನಬೇಕು ಎಂದು ವೈದ್ಯರು ಹೇಳುತ್ತಾರೆ.

ವ್ಯಾಯಾಮ ಅಗತ್ಯ

ದೇಹದ ಹೊರಭಾಗ ಶಕ್ತಿಯುತವಾಗಿರಬೇಕ ಎಂದು ಬಯಸುವ ಕೆಲವರ ಅದಕ್ಕಷ್ಟೆ ಒತ್ತು ನೀಡುತ್ತಾರೆ. ಮುಖಕ್ಕೆ ಫೇಷಿಯಲ್​ಮ ಟ್ಯಾನ್​ ತೆಗೆಯುವ ವಿಧಾನ, ಮೆನಿಕ್ಯೂರ್ ಪೆಡಿಕ್ಯೂರ್​ ಸೇರಿದಂತೆ ನಾನಾ ರೀತಿಯಲ್ಲಿ ಖರ್ಚು ಮಾಡುತ್ತಾರೆ. ಆದರೆ, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ 20 ನಿಮಿಷವಾದರೂ ವಾಕಿಂಗ್​ ಮಾಡುವುದು ಅಗತ್ಯ. ಅಥವಾ ದೇಹಕ್ಕೆ ಬೇಕಾಗುವ ಯಾವುದೇ ರೀತಿಯ ಚಟುವಟಿಕೆ ಮಾಡುವುದು ಅಗತ್ಯವಾಗಿದೆ.

ಸಕ್ಕರೆ ಅಂಶ ತಿನ್ನುವುದು ಕಡಿಮೆ ಮಾಡಿ, ಅಧಿಕ ರಕ್ತದೊತ್ತಡ ನಿಯಂತ್ರಿಸಿ

ಕಾಫಿ, ಟೀ ಹಾಗೂ ತರಹೇವಾರಿ ಸ್ವೀಟ್​ಗಳನ್ನು ಸೇವನೆ ಮಾಡುವುದು ಕಡಿಮೆ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು. ಅಧಿಕ ರಕ್ತದೊತ್ತಡದಿಂದ ಕಿಡ್ನಿ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಈ ಕಾರಣದಿಂದಾಗಿ ಆಗಾಗ್ಗೆ ಬಿಪಿ ಚೆಕ್​ ಮಾಡಿಸಿಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ.

ಉಪ್ಪಿನಾಂಶ ಸೇವನೆ ಕಡಿಮೆ ಮಾಡಿ

ಹೆಚ್ಚಾಗಿ ಉಪ್ಪಿನಾಂಶವಿರುವ ಆಹಾರವನ್ನು ಸೇವನೆ ಮಾಡುವುದರಿಂದ ರಕ್ತದೊತ್ತಡ ಕಾಡಬಹುದು ಆ ಕಾರಣದಿಂದಾಗಿ ಸಂಸ್ಕರಿತ ಆಹಾರದ ಬದಲಿಗೆ ನಿಂಬೆ, ಬೆಳ್ಳುಳ್ಳಿಯಂತಹ ಪದಾರ್ಥವನ್ನು ಸೇವೆನೆ ಮಾಡಿ