Nippattu Recipe: ಬೆಂಗಳೂರಿನ ಸಂಜೆ ಟೀ ಸಮಯಕ್ಕೆ ಅಥವಾ ಹಬ್ಬದ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಕುರುಂ ಕುರುಂ ತಿಂಡಿ ಎಂದರೆ ಅದು ನಿಪ್ಪಟ್ಟು. ಆದಾಗ್ಯೂ, ನಿಪ್ಪಟ್ಟು ದೀರ್ಘಕಾಲ ಬಾಳಿಕೆ ಬರುವ ತಿಂಡಿ. ಒಮ್ಮೆ ತಯಾರಿಸಿ ಗಾಳಿಯಾಡದ ಡಬ್ಬದಲ್ಲಿ ಇಟ್ಟರೆ ಸುಮಾರು 3-4 ವಾರಗಳ ಕಾಲ ಇದರ ಕುರುಕುಲುತನ ಕಡಿಮೆಯಾಗುವುದಿಲ್ಲ. ಇದು ಪ್ರಯಾಣದ ಸಮಯದಲ್ಲಿ ತಿನ್ನಲು ಅತ್ಯುತ್ತಮ ತಿಂಡಿಯಾಗಿದೆ. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೇ ಮಾಡಿ..
ಅಗತ್ಯವಿರುವ ಸಾಮಗ್ರಿಗಳು
*2 ದೊಡ್ಡ ಚಮಚ ಒಣ ಕೊಬ್ಬರಿ ತುರಿ
*1.5 ರಿಂದ 2 ಚಮಚ ಖಾರದ ಪುಡಿ
*2 ದೊಡ್ಡ ಚಮಚ ಬಿಸಿ ಎಣ್ಣೆ ಅಥವಾ ತುಪ್ಪ
*ಕರಿಯಲು ಅಗತ್ಯವಿರುವಷ್ಟು ಎಣ್ಣೆ
ಒಂದು ದೊಡ್ಡ ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಮೈದಾ, ರವೆ, ಕುಟ್ಟಿದ ಕಡಲೆಕಾಯಿ, ಹುರಿಗಡಲೆ ಪುಡಿ, ಎಳ್ಳು, ಕೊಬ್ಬರಿ ತುರಿ, ಖಾರದ ಪುಡಿ, ಉಪ್ಪು, ಇಂಗು ಮತ್ತು ಕರಿಬೇವು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ 2 ಚಮಚ ಬಿಸಿಯಾಗಿರುವ ಎಣ್ಣೆಯನ್ನು ಹಾಕಿ ಹಿಟ್ಟನ್ನು ಕೈಯಿಂದ ಚೆನ್ನಾಗಿ ಕಲಸಿಕೊಳ್ಳಿ.
ಈಗ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಗಟ್ಟಿಯಾದ ಹಿಟ್ಟನ್ನು ಕಲಸಿಕೊಳ್ಳಿ (ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ). ಹಿಟ್ಟು ಕಲಸಿದ ನಂತರ 10-15 ನಿಮಿಷ ನೆನೆಯಲು ಬಿಡಿ. ಇದಾದ ಬಳಿಕ ಹಿಟ್ಟಿನಿಂದ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಒಂದು ಪ್ಲಾಸ್ಟಿಕ್ ಹಾಳೆ ತೆಗೆದುಕೊಂಡು ಅದರ ಮೇಲೆ ಉಂಡೆಯನ್ನಿಟ್ಟು ಕೈಯಿಂದ ತೆಳುವಾಗಿ ತಟ್ಟಿ.
ಒಲೆಯ ಮೇಲೆ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಕಾದ ನಂತರ, ತಯಾರಿಸಿದ ನಿಪ್ಪಟ್ಟುಗಳನ್ನು ಎಣ್ಣೆಗೆ ಹಾಕಿ. ಮಧ್ಯಮ ಉರಿಯಲ್ಲಿ ನಿಪ್ಪಟ್ಟು ಎರಡು ಬದಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಎಣ್ಣೆಯ ನೊರೆ ಕಡಿಮೆಯಾದಾಗ ನಿಪ್ಪಟ್ಟು ಬೆಂದಿದೆ ಎಂದು ಅರ್ಥ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.