ಸೌತೆಕಾಯಿ, ಕಲ್ಲಂಗಡಿ, ಕುಂಬಳಕಾಯಿ ಜಾತಿಗೆ ಸೇರಿದ ಈ ಹಣ್ಣನ್ನು ಕೆಲ ದೇಶಗಳ ಕಡೆ ತರಕಾರಿ ಗುಂಪಿಗೆ ಸೇರಿಸುತ್ತಾರೆ. ಮೊದಲು ಪರ್ಷಿಯಾ ದೇಶದಲ್ಲಿ ರೈತರ ಜೀವನೋಪಾಯಕ್ಕೆ ಎಂದು ಬೆಳೆದ ಈ ಹಣ್ಣುಗಳು ನಂತರ ಕ್ರಮೇಣವಾಗಿ ಬ್ರೆಜಿಲ್, ಅಮೇರಿಕಾ ದೇಶಗಳಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡವು. ಈಗ ನಮ್ಮ ಭಾರತದಲ್ಲೇ ಪಂಜಾಬ್ ಪ್ರಾಂತ್ಯದಲ್ಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಹಣ್ಣುಗಳನ್ನು ಬೆಳೆಯುತ್ತಾರೆ.
ಕರ್ಬೂಜ ಹಣ್ಣಿನಲ್ಲಿ ಕ್ಯಾನ್ಸರ್ ವಿರೋಧಿ ಗುಣ ಲಕ್ಷಣಗಳಿವೆ
ಕರ್ಬೂಜ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ flavonoid ಗಳಾದ ' ಲ್ಯೂಟೀನ್', ' zeaxanthin 'ಮತ್ತು ' cryptoxanthin 'ಎಂಬ ಅಂಶಗಳಿವೆ. ಇವು ಮನುಷ್ಯನ ದೇಹದಲ್ಲಿ ಶಕ್ತಿಯುತವಾದ ಆಂಟಿ - ಆಕ್ಸಿಡೆಂಟ್ ಏಜೆಂಟ್ ಗಳಾಗಿ ಕೆಲಸ ಮಾಡುತ್ತವೆ. ಈ ಆಂಟಿ - ಆಕ್ಸಿಡೆಂಟ್ ಗಳು ದೇಹದ ಕೋಶಗಳನ್ನು ಮತ್ತು ಇತರ ಅಂಗ ರಚನೆಗಳನ್ನು ರಕ್ಷಿಸಿ ಫ್ರೀ ರಾಡಿಕಲ್ ಗಳ ಹಾವಳಿಯಿಂದ ದೇಹಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತವೆ. ಆದ್ದರಿಂದ ಕರ್ಬುಜ ಹಣ್ಣಿನ ಸೇವನೆಯಿಂದ ಕರುಳಿನ, ಪ್ರೊಸ್ಟೇಟ್, ಶ್ವಾಸಕೋಶ, ಪ್ಯಾಂಕ್ರಿಯಾಸ್, ಎಂಡೋಮೆಟ್ರಿಯಲ್ ಮತ್ತು ಸ್ತನ ಕ್ಯಾನ್ಸರ್ ಸಮಸ್ಯೆಗಳಿಂದ ದೂರಾಗಬಹುದು.
ಆಂಟಿ - ಆಕ್ಸಿಡೆಂಟ್ ಗಳ ಆಗರ ಕರ್ಬೂಜ ಹಣ್ಣು
ದೇಹದ ಸಂಪೂರ್ಣ ಆರೋಗ್ಯ ವೃದ್ಧಿಗಾಗಿ ಆಂಟಿ - ಆಕ್ಸಿಡೆಂಟ್ ಗಳು ಬಹಳಷ್ಟು ಅವಶ್ಯಕವಾಗಿವೆ. ಚರ್ಮದ ಹೊಳಪು, ಕಣ್ಣಿನ ಆರೋಗ್ಯ ಮೂಳೆಗಳ ಬಲ ಇತ್ಯಾದಿ ಕೆಲಸಗಳು ಆಂಟಿ - ಆಕ್ಸಿಡೆಂಟ್ ಗಳ ಸಹಯೋಗದಿಂದ ಆಗುತ್ತವೆ. ಬೀಟಾ - ಕ್ಯಾರೋಟಿನ್, ಫೋಲಿಕ್ ಆಸಿಡ್, ಪೊಟ್ಯಾಶಿಯಂ, ವಿಟಮಿನ್ ' ಸಿ ' ಮತ್ತು ವಿಟಮಿನ್ ' ಎ ' ಅಂಶಗಳು ಕರ್ಬೂಜ ಹಣ್ಣಿನಲ್ಲಿ ಸಾಕಷ್ಟಿವೆ.
ಅವಶ್ಯಕವಿಲ್ಲದ ನೀರಿನ ಅಂಶವನ್ನ ಹೊರಹಾಕುತ್ತೆ
ಇದು ಮನುಷ್ಯನ ದೇಹದಿಂದ ವಿಷಕಾರಿ ಅಂಶಗಳನ್ನು ಮತ್ತು ಅವಶ್ಯವಿಲ್ಲದ ಹೆಚ್ಚಿನ ನೀರಿನ ಅಂಶವನ್ನು ಹೊರ ಹಾಕುತ್ತದೆ. ಇದರಿಂದ ಮೂತ್ರ ಪಿಂಡದ ಸಮಸ್ಯೆಗಳು ದೂರಾಗಿ ಕಿಡ್ನಿಗಳು ಆರೋಗ್ಯವಾಗಿ ಕೆಲಸ ಮಾಡಲು ಸಹಾಯಕವಾಗುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ನಾವು ಸೇವಿಸಿದ ಆಹಾರ ಪದಾರ್ಥಗಳು ಸರಿಯಾಗಿ ಪರಿಷ್ಕರಣೆ ಆಗದೆ ಮೂತ್ರ ಪಿಂಡಗಳಲ್ಲಿ ಘನಾಕಾರ ಪಡೆದುಕೊಂಡು ಮೂತ್ರ ಪಿಂಡದ ಕಲ್ಲುಗಳಾಗಿ ಮಾರ್ಪಾಡಾಗುತ್ತವೆ.
ರಕ್ತದ ಒತ್ತಡವನ್ನು ನಿಯಂತ್ರಣ ಮಾಡುತ್ತದೆ
ರಕ್ತ ಸಂಚಾರ ಸುಗಮವಾಗಿ ದೇಹದಲ್ಲಿ ರಕ್ತದ ಒತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಪೊಟ್ಯಾಶಿಯಂ ಖನಿಜಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ ಯಾವುದೇ ಆಹಾರ ಈ ಕೆಲಸವನ್ನು ಸುಲಭವಾಗಿ ಮಾಡುತ್ತದೆ. ಕರ್ಬೂಜ ಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶ ಬಹಳಷ್ಟು ಹೆಚ್ಚಾಗಿದ್ದು, ಇದು ಮನುಷ್ಯನ ದೇಹದಲ್ಲಿ ರಕ್ತದ ಅಸಮರ್ಪಕ ಸಂಚಾರದಿಂದ ಉಂಟಾಗುವ ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಪಾರ್ಶ್ವವಾಯು ಸಮಸ್ಯೆಗಳನ್ನು ಎದುರಾಗದಂತೆ ನೋಡಿಕೊಳ್ಳುತ್ತದೆ.