ಲೈಫ್‌ಸ್ಟೈಲ್

ಸೇಬನ್ನು ಹೀಗೆ ತಿಂದ್ರೆ ಮಹಿಳೆಯರಿಗೆ ಈ ಒಂದು ಸಮಸ್ಯೆ ಕಾಡೋದಿಲ್ಲ…!

ಚಳಿಗಾಲ ಮತ್ತು ಬೇಸಿಗೆಕಾಲ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ರಾಶಿ-ರಾಶಿ ಸೇಬುಗಳನ್ನು ಮಾರಾಟ ಮಾಡುವುದನ್ನು ನೀವು ಕಾಣಬಹುದು. ಆದರೆ ಎಲ್ಲಾ ರೀತಿಯ ಹಣ್ಣುಗಳಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಕೆಲ ಮಂದಿ ಸೇಬುಗಳಿಗೆ ನೀಡದಿದ್ದರೂ, ಕೆಲ ಮಂದಿ ಸೇಬಿಲ್ಲದೇ ಊಟ ಮುಟ್ಟುವುದೇ ಇಲ್ಲ. ಅಲ್ಲದೇ ಈ ಸೇಬು ಪಿರಿಯಡ್ಸ್ ವೇಳೆ ಮಹಿಳೆಯರಿಗೆ ಸಾಕಷ್ಟು ಪ್ರಯೋಜನಕಾರಿ ಆಗಿದೆ ಎಂಬ ವಿಚಾರ ನಿಮಗೆ ತಿಳಿದಿದ್ಯಾ?

ಪ್ಪೆ ಸುಲಿದ ಸೇಬನ್ನು ತಿನ್ನುವುದು ಪಿರಿಯಡ್ ನೋವನ್ನು ನಿವಾರಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರತಿದಿನ ಸಿಪ್ಪೆ ಸುಲಿದ ಸೇಬನ್ನು ತಿನ್ನುವುದರಿಂದ ಮುಟ್ಟಿನ ಸೆಳೆತ ಮತ್ತು ನೋವಿನಿಂದ ಮುಕ್ತಿ ಪಡೆಯಬಹುದು. ಏಕೆಂದರೆ ಇದರಲ್ಲಿ ಕಬ್ಬಿಣ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ.

ಪ್ರಮುಖವಾಗಿ ಪೀರಿಯಡ್ಸ್​​​​ ಸಮಯದಲ್ಲಿ ಮಹಿಳೆಯರನ್ನ ಹ್ಯಾಪಿ ಮೂಡ್​​ನಲ್ಲಿಡುವ ಕೆಲಸವನ್ನ ಸೇಬು ಮಾಡುತ್ತದೆ.

ಮೂಡ್ ಸ್ವಿಂಗ್ಸ್: ಹಾರ್ಮೋನುಗಳ ಬದಲಾವಣೆಗಳು ಮೆದುಳಿನ ಚಟುವಟಿಕೆ, ದೈಹಿಕ ಮತ್ತು ಮಾನಸಿಕ ಅಂಶಗಳಿಂದಾಗಿ ಮೂಡ್ ಸ್ವಿಂಗ್ಸ್ ಸಂಭವಿಸುತ್ತವೆ. ಈ ಕುರಿತಂತೆ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಜೊತೆಗೆ ಮಾತನಾಡಿರುವ, ಆರ್ಟೆಮಿಸ್ ಆಸ್ಪತ್ರೆಗಳ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡಾ.ಸಂಗೀತಾ ತಿವಾರಿ ಅವರು, ‘ಸೇಬು ನಮ್ಮ ಸಂಪೂರ್ಣ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ಪೀರಿಯಡ್ಸ್ ಸಮಯದಲ್ಲಿ ಸೇಬು ತಿಂದರೆ ನಮ್ಮ ಆರೋಗ್ಯ ವೃದ್ಧಿಸುತ್ತದೆ.

ಸಿಪ್ಪೆಯಲ್ಲಿದೆ ಅನೇಕ ಸತ್ವಗಳು: ಸೇಬು ಸೇವನೆ ಆರೋಗ್ಯ ಪ್ರಯೋಜನಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಿರುತ್ತದೆ. ಕೆಲ ಮಂದಿ ಸೇಬುಗಳನ್ನು ತಿನ್ನುವುದರಿಂದ ಮೂಡ್ ಸ್ವಿಂಗ್ ಅನ್ನು ಅನುಭವಿಸುತ್ತಾರೆ. ಆದರೆ ಇನ್ನೂ ಕೆಲ ಮಂದಿ ಯಾವುದೇ ಗಮನಾರ್ಹ ಪರಿಣಾಮಗಳನ್ನು ಹೊಂದುವುದಿಲ್ಲ. ಇದಲ್ಲದೇ, ಸೇಬಿನ ಸಿಪ್ಪೆಯನ್ನು ತೆಗೆದುಹಾಕುವುದರಿಂದ ಅದರ ಕೆಲವು ಪ್ರಯೋಜನಗಳನ್ನು ಕಳೆದುಕೊಳ್ಳಬಹುದು. ಏಕೆಂದರೆ ಸಿಪ್ಪೆಯು ಹೆಚ್ಚುವರಿ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.