ಬೆಂಗಳೂರು: ನಮ್ಮ ಮನೆಯ ಮುಂದೆ ಇರುವ ಸುಂದರವಾದ ಹೂ ಬಿಡುವ ದಾಸವಾಳ ಗಿಡವು ಹೇರಳವಾದ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ದಾಸವಾಳದ ಹೂವುಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ.
ದಾಸವಾಳ ಚಹಾ ಮಾಡುವ ವಿಧಾನ: ಎರಡು ಅಥವಾ ಮೂರು ಚಮಚ ಒಣಗಿದ ದಾಸವಾಳ ಹೂಗಳನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಎರಡು ಕಪ್ ನೀರಿಗೆ ಸೇರಿಸಿ ಮತ್ತು ಐದು ನಿಮಿಷ ಕುದಿಸಿ. ಸೋಸಿದ ನಂತರ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.
ದಾಸವಾಳದ ಚಹಾವನ್ನು ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದು ನಾವು ಸೇವಿಸುವ ಕಾರ್ಬೋಹೈಡ್ರೇಟ್‌ಗಳು ಕೊಬ್ಬಾಗಿ ಬದಲಾಗುವುದನ್ನು ತಡೆಯುತ್ತದೆ. ಇದು ಕ್ರಮೇಣ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ದಾಸವಾಳದ ಹೂವಿನಿಂದ ತಯಾರಿಸಿದ ಚಹಾವನ್ನು ಪ್ರತಿನಿತ್ಯ ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರದಂತೆ ತಡೆಯಬಹುದು. ರಕ್ತದೊತ್ತಡವನ್ನು ಕಡಿಮೆ ಮಾಡಲು ಈ ಚಹಾ ತುಂಬಾ ಒಳ್ಳೆಯದು. ಅಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಈ ಚಹಾ ತುಂಬಾ ಉಪಯುಕ್ತವಾಗಿದೆ.
ವಯಸ್ಸು ಹೆಚ್ಚಾಗಿ ಸೌಂದರ್ಯ ಕಮ್ಮಿಯಾಗುವುದನ್ನು ನಾವು ಯಾರೂ ಬಯಸುವುದಿಲ್ಲ, ಆದರೂ ನಾವು ಸ್ವಲ್ಪ ಆರೈಕೆ ಮಾಡಿದರೆ ಯೌವನದ ಚೆಲುವು ಬೇಗನೆ ಕಡಿಮೆಯಾಗುವುದನ್ನು ತಡೆಯಬಹುದು.
ಮೊಡವೆ ಕಡಿಮೆ ಮಾಡಲು ದುಬಾರಿ ಚಿಕಿತ್ಸೆ ಮಾಡಿಸುತ್ತೇವೆ, ಆದರೆ ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು, ಅಲ್ಲದೆ ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ.