- ಮುಖದ ಮೇಲಿನ ಅತಿಯಾದ ಕೂದಲು ಅನೇಕ ಮಹಿಳೆಯರಿಗೆ ಮುಜುಗರವನ್ನುಂಟು ಮಾಡುತ್ತದೆ
- ಕೆಲವೊಮ್ಮೆ ಅವರ ಆತ್ಮವಿಶ್ವಾಸದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ
- ದೈನಂದಿನ ಆಹಾರ ಕ್ರಮದಲ್ಲಿ ಕೆಲವು ಸ್ಮಾರ್ಟ್ ಬದಲಾವಣೆ ಮಾಡಿಕೊಳ್ಳುವುದು ಉತ್ತಮ
- ದೇಹದಲ್ಲಾಗುವ ಆಂಡ್ರೋಜೆನ್‌ಗಳ ಹೆಚ್ಚಳವು ಮುಖದ ಕೂದಲು ಬೆಳೆಯಲು ಕಾರಣವಾಗುತ್ತದೆ
Facial hair: ಮುಖದ ಮೇಲಿನ ಅತಿಯಾದ ಕೂದಲು ಅನೇಕ ಮಹಿಳೆಯರಿಗೆ ಮುಜುಗರವನ್ನುಂಟು ಮಾಡುತ್ತದೆ. ಇದು ಕೆಲವೊಮ್ಮೆ ಅವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಕೆಲವು ಮಹಿಳೆಯರಿಗೆ ಇದು ವಯಸ್ಸಾದಂತೆ ಬೆಳೆಯುವುದನ್ನು ನಾವು ಗಮನಿಸಬಹುದು. ಈ ತ್ವರಿತಕ್ರಮಕ್ಕಾಗಿ ಮಹಿಳೆಯರು ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ, ಇದು ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿದ್ದರೂ, ಜೀವನ ಪರ್ಯಂತ ಬದಲಾವಣೆಯಾಗುವುದಿಲ್ಲ.
ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ದೈನಂದಿನ ಆಹಾರ ಕ್ರಮದಲ್ಲಿ ಕೆಲವು ಸ್ಮಾರ್ಟ್ ಬದಲಾವಣೆ ಮಾಡಿಕೊಳ್ಳುವುದರಿಂದ ಸಮಸ್ಯೆಗಳನ್ನು ನೈಸರ್ಗಿಕವಾಗಿ ತೆಗೆಯಬಹುದು. ಹಾಗಾಗಿ ಪ್ರತಿನಿತ್ಯ ಸಮತೋಲನವನ್ನು ಬಿಂಬಿಸುವ ಆಹಾರ ಪದಾರ್ಥವನ್ನು ಸೇವಿಸುವುದರಿಂದ ಮುಖದ ಮೇಲೆ ಬೆಳೆಯುವ ಕೂದಲನ್ನು ಕಡಿಮೆ ಮಾಡಬಹುದು. ಮೊದಲಿಗೆ ಮುಖದ ಮೇಲಿನ ಕೂದಲು ಬೆಳವಣಿಗೆಗೆ ಕಾರಣ ಏನು ಎಂಬುದನ್ನು ತಿಳಿಯೋಣ
ಮುಖದ ಮೇಲೆ ಬೆಳೆಯುವ ಅತಿಯಾದ ಕೂದಲಿಗೆ ಕಾರಣವೇನು?
ದೇಹದಲ್ಲಾಗುವ ಆಂಡ್ರೋಜೆನ್‌ಗಳ ಹೆಚ್ಚಳವು ಮಹಿಳೆಯರ ಮುಖದ ಕೂದಲು ಬೆಳೆಯಲು ಕಾರಣವಾಗುತ್ತದೆ. ಇವು ಟೆಸ್ಟೋಸ್ಟೆರಾನ್ ನಂತಹ ಪುರುಷ ಹಾರ್ಮೋನುಗಳಾಗಿದ್ದು, ಆಂಡ್ರೋಜೆನ್‌ಗಳ ಹೆಚ್ಚಿನ ಮಟ್ಟವು ಸಾಮಾನ್ಯಕಿಂತ ಹೆಚ್ಚಾದಾಗ, ಅವು ಕೂದಲಿನ ಕಿರುಚೀಲವನ್ನು ದಪ್ಪ ಹಾಗೂ ಗಾಢವಾದ ಕೂದಲನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಇದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS), ಕೆಲವು ಔಷಧಿಗಳಿಂದ ಉಂಟಾಗುವ ಹಾರ್ಮೋನುಗಳ ಅಸಮತೋಲದಿಂದ ಈ ಸಮಸ್ಯೆಗಳು ಕಾರಣವಾಗಬಹುದು.
1. ಪುದೀನಾ ಚಹಾ
ಟೆಸ್ಟೋಸ್ಟೆರಾನ್ ಮತ್ತು ಇತರ ಆಂಡ್ರೋಜೆನ್ ಮಟ್ಟಗಳು ಹೆಚ್ಚಾದಾಗ ಮುಖದ ಮೇಲೆ ಕೂದಲುಗಳು ಬೆಳೆಯಲು ಆರಂಭಿಸುತ್ತವೆ. ಆದರಿಂದ ಪ್ರತಿದಿನ ಎರಡು ಕಪ್ ಪುದೀನಾ ಚಹಾ ಕುಡಿಯುವುದರಿಂದ ದೇಹದಲ್ಲಿ ಇವುಗಳ ಮಟ್ಟ ಕಡಿಮೆಯಾಗುತ್ತದೆ. ಮನ್ಪ್ರೀತ್ ಕಲ್ರಾ ತಜ್ಞರ ಪ್ರಕಾರ, ಗಿಡಮೂಲಕೆಗಳ ಚಹಾವು ಹಾರ್ಮೋನುಗಳ ಸಮತೋಲನವನ್ನು ನೈಸರ್ಗಿಕವಾಗಿ ಬೆಂಬಲಿಸಲು ಸಹಾಯ ಮಾಡುತ್ತದೆ.
2. ಸಿಟ್ರಸ್ ಹಣ್ಣುಗಳು
ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿಹಣ್ಣುಗಳು ವಿಟಮಿನ್ ಸಿ ಯಿಂದ ಸಮೃದ್ಧವಾಗಿವೆ. ಇವು ದೇಹದಲ್ಲಿ ಇನೋಸಿಟಾಲ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಇವುಗಳ ಸೇವನೆಯು ಇನ್ಸುಲಿನ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಾಲಾನಂತರ ದೇಹದಲ್ಲಿ ಉತ್ಪತ್ತಿಯಾಗುವ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಸಿಟ್ರಸ್ ಹಣ್ಣುಗಳನ್ನು ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಚರ್ಮವನ್ನು ಸುರಕ್ಷವಾಗಿ ಇರಿಸುತ್ತದೆ.
3. ದಾಲ್ಚಿನ್ನಿ ನೀರು
ಊಟದ ನಂತರ ಒಂದು ಲೋಟ ಬೆಚ್ಚಗಿನ ನೀರಿಗೆ ದಾಲ್ಚಿನ್ನಿ ಬೆರೆಸಿ ಅದರ ನೀರು ಕುಡಿಯುವುದರಿಂದ ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ನೀರು ಉತ್ತಮ ಇನ್ಸುಲಿನ್ ಆಗಿದ್ದು, ಆರೋಗ್ಯಕರ ಆಂಡ್ರೋಜನ್ಗಳ ನಿಯಂತ್ರಿಸುತ್ತದೆ. ಇದು ಮುಖದಲ್ಲಾಗುವ ಹೆಚ್ಚುವರಿ ಕೂದಲನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತದೆ.
4. ಕುಂಬಳಕಾಯಿ ಬೀಜ
ಕುಂಬಳಕಾಯಿ ಬೀಜಗಳಲ್ಲಿ ಸತುವು ಹೇರಳವಾಗಿದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಕಾರಣವಾಗುವ ಕಿಣ್ವಗಳನ್ನು ನಿರ್ಬಂಧಿಸುತ್ತದೆ. ಹಾಗಾಗಿ ಅವುಗಳನ್ನು ನಿಯಮಿತವಾಗಿ ಸೇವಿಸುವುರಿಂದ ಇದು ಹಾರ್ಮೋನುಗಳನ್ನು ಬೆಂಬಲಿಸುತ್ತದೆ. ಹಾಗೆಯೇ ದೇಹಕ್ಕೆ ಕೊಬ್ಬುಗಳು ಮತ್ತು ಪ್ರೊಟೀನ್ಗಳನ್ನು ಒದಗಿಸುತ್ತದೆ. ಹಾಗಾಗಿ ಇವುಗಳನ್ನು ಊಟದಲ್ಲಿ ಬಳಸುವುದರಿಂದ ದೇಹಕ್ಕೆ ಪೌಷ್ಟಿಕಾಂಶಗಳು ದೊರೆಯುತ್ತದೆ.
5. ಬೇಯಿಸಿದ ಕ್ರೂಸಿಫೆರಸ್ ತರಕಾರಿಗಳು
ಆಹಾರ ತಯಾರಿಸುವಾಗ ಆದಷ್ಟು ಬ್ರೊಕೊಲಿ, ಹೂಕೋಸು ಮತ್ತು ಎಲೆಕೋಸುಗಳನ್ನು ಬೇಯಿಸಿ ಸೇವಿಸಿ. ಇವುಗಳ ಸೇವನೆಯಿಂದ ದೇಹವು ಈಸ್ಟ್ರೊಜೆನ್ ಅನ್ನು ಪರಿಣಾಮಕಾರಿಯಾಗಿ ಚಯಾಪಚಯಗೊಳಿಸುವ ಸಾಮರ್ಥ್ಯವನ್ನು ಉತ್ತೇಜಿಸುತ್ತದೆ. ಇದರಿಂದ ಮುಖದ ಮೇಲೆ ಆಗುವಂತಹ ಕೂದಲುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.