ಆನ್ಲೈನ್ ಶಾಪಿಂಗ್ ವೆಬ್ಸೈಟ್ ಹಾಗು ಲಕ್ಷೂರಿ ಬ್ರ್ಯಾಂಡ್ಗಳಲ್ಲಿ ಸಿಗುವಂತಹ ವಿಚಿತ್ರ ಬಟ್ಟೆ, ಶೂ ಹೀಗೆ ಸಾಕಷ್ಟು ಹೊಸ ಐಟಮ್ಗಳನ್ನ ನಾವೆಲ್ಲರೂ ನೋಡಿರ್ತೇವೆ. ಅವುಗಳಲ್ಲಿ ಕೆಲವು ವಸ್ತುಗಳು ನೋಡುಗರಿಗೆ ಇಂಥಹ ವಸ್ತುಗಳು ಸಿಗುತ್ತವೆಯೇ ಎಂಬ ಪ್ರಶ್ನೆಯನ್ನ ಹುಟ್ಟುಹಾಕುತ್ತೆ.
ಹರಿದು ಚಿಂದಿಯಾಗಿರೋ ಜೀನ್ಸ್ ದುಬಾರಿ ಬ್ರ್ಯಾಂಡೆಡ್ ಜೀನ್ಸ್ ಅಂತೆ. ಆದ್ರೆ ಇವುಗಳಿಗೆ ಬೇರೆ ರೇಟ್ ಫಿಕ್ಸ್ ಮಾಡಿ ಅದನ್ನ ಮಾರಾಟ ಮಾಡಿ, ಟೋಪಿ ಹಾಕೋ ರೀತಿ ಮಾಡ್ತಾ ಇದ್ದಾವೆ ಕೆಲವು ಆನ್ಲೈನ್ ವೆಬ್ಸೈಟ್ಗಳು. ಇದೀಗ ಆನ್ಲೈನ್ನಲ್ಲಿ ಸಿಗುತ್ತಿರುವ ಶೂ ನೋಡುಗರ ಹುಬ್ಬೇರಿಸಿದೆ. ಯಸ್, ಈ ಶೂ ನೋಡಿ..ಇದನ್ನ ಶೂ ಅನ್ಬೇಕಾ ಬೇಡ್ವಾ ಅನಿಸುತ್ತೆ.
ಶೂ ಥರಾ ಇರೋ ಈ ಫುಟ್ವೇರ್ ಬಗ್ಗೆ ಹೇಳ್ತೀವಿ ಕೇಳಿ. ಇದು ಫೇಮಸ್ ಫ್ಯಾಷನ್ ಬ್ರ್ಯಾಂಡ್ ಬ್ಯಾಲೆನ್ಸಿಯಾಗಾ ಪರಿಚಯಿಸಿರೊ ದಿ ಝೀರೋ ಅನ್ನೋ 3-ಡಿ ಮೋಡ್ ಫುಟ್ವೇರ್.
ಶೂನ ನೀವು ಧರಿಸಿದ್ರೆ ನಿಮಗೆ ಯಾವುದೇ ರೀತಿ ಶೂ ಧರಿಸಿರೋ ಫೀಲ್ ಇರಲ್ಲ. ಬದಲಾಗಿ ನೀವು ಬರೀ ಕಾಲಲ್ಲಿ ನಡೆಯೋ ಫೀಲ್ ಕೊಡುತ್ತಂತೆ. ಜೊತೆಗೆ EVA ಫೋಮ್ ಟೆಕ್ನಾಲಜಿ ಹೊಂದಿದ್ಯಂತೆ. ಅಂದ್ರೆ ಬರೀಗಾಲಲ್ಲಿ ನಡೆಯೋ ಫಿಲ್ ಕೊಟ್ರೂ ನೀವು ಯಾವುದೇ ಕಲ್ಲು ಮುಳ್ಳುಗಳನ್ನು ತುಳಿದ್ರೂ.. ನಿಮಗೆ ಅದರ ಅನುಭವ ಉಂಟಾಗೋದಿಲ್ಲ.
ಆದ್ದರಿಂದ ನೀವು ಈ ಶೂನ ಧರಿಸಿದ್ರೂ ಕೂಡ ಬರೀ ಸೋಲ್ ಹಾಕಿಕೊಂಡು ಓಡಾಡೋ ಫೀಲ್ ಸಿಗಲಿದೆ.
ಶೂನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!
ಬ್ಯಾಲೆನ್ಸಿಯಾಗಾ ತಂದಿರೋ ಈ ಝೀರೋ ಶೂನ ಬೆಲೆ ಝೀರೋಗಳಿಗೆ ಸೀಮಿತವಲ್ಲ. ಇದರ ಮಾರಕಟ್ಟೆ ದರ ಬರೋಬ್ಬರಿ 450 ಡಾಲರ್‌ಗಳಷ್ಟಿದೆ. ಭಾರತದ ರೂಪಾಯಿಗೆ ಅದರ ಬೆಲೆ ಹೇಳುವುದಾದರೆ 40,000 ಸಾವಿರದಷ್ಟಿದೆ.