ಲೈಫ್‌ಸ್ಟೈಲ್

ತುಪ್ಪ ಆರೋಗ್ಯಕ್ಕೆ ಒಳ್ಳೆಯದು! ಆದ್ರೆ ಖಾಲಿ ಹೊಟ್ಟೆಯಲ್ಲಿ Ghee ಸೇವಿಸಬಾರದು..

Ghee: ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಕೆಲವರು ಹಸುವಿನ ತುಪ್ಪವನ್ನು ತೆಗೆದುಕೊಂಡರೆ ಮತ್ತೆ ಕೆಲವರು ಎಮ್ಮೆ ತುಪ್ಪವನ್ನು ತಿನ್ನುತ್ತಾರೆ. ಈ ತುಪ್ಪವನ್ನು ಅನೇಕ ರೀತಿಯ ಸಿಹಿತಿಂಡಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.

ತುಪ್ಪ ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ. ಅಲ್ಲದೆ, ತುಪ್ಪದಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಆಂಟಿಆಕ್ಸಿಡೆಂಟ್‌ಗಳು, ಉತ್ತಮ ಕೊಬ್ಬಿನಾಮ್ಲಗಳು ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿವೆ. ಆದ್ದರಿಂದಲೇ ನಮ್ಮ ಪೂರ್ವಜರು ಪ್ರತಿ ಊಟದಲ್ಲೂ ತುಪ್ಪ ಇರಬೇಕೆಂದು ಹೇಳುತ್ತಿದ್ದರು.

ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ತುಪ್ಪ ತಿನ್ನುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ. ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇಷ್ಟೆಲ್ಲಾ ಆರೋಗ್ಯಕಾರಿ ಗುಣಗಳನ್ನು ಹೊಂದಿರುವ ತುಪ್ಪವನ್ನು ಕೆಲವರು ತಿನ್ನಬಾರದು.

ಕೆಲವರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಅಲರ್ಜಿ ಇರುತ್ತದೆ. ಅಂತಹವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ತಿನ್ನಬಾರದು.

ತುಪ್ಪವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಅದರಲ್ಲಿರುವ ಕೊಲೆಸ್ಟ್ರಾಲ್ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ತುಪ್ಪದಲ್ಲಿರುವ ಹೆಚ್ಚಿನ ಕೊಬ್ಬಿನಾಮ್ಲಗಳು ಹೃದಯದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಹೃದಯ ಸಮಸ್ಯೆ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ತಿನ್ನಬಾರದು.

ನಿಮಗೆ ಯಕೃತ್ತಿನ ಸಮಸ್ಯೆ ಇದ್ದರೆ, ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿನ್ನುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಸಮಸ್ಯೆ ಉಲ್ಬಣಗೊಳ್ಳಬಹುದು. ಅಧಿಕ ತೂಕದಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಬಾರದು.

ಊಟದೊಂದಿಗೆ ದಿನಕ್ಕೆ ಒಂದು ಅಥವಾ ಎರಡು ಚಮಚ ತುಪ್ಪವನ್ನು ಮಾತ್ರ ತೆಗೆದುಕೊಳ್ಳಬೇಕೆಂದು ಹೇಳಲಾಗುತ್ತದೆ. ಅದಕ್ಕಿಂತ ಹೆಚ್ಚು ಸೇವಿಸಿದರೆ ತೂಕ ಹೆಚ್ಚುತ್ತದೆ.

ಗರ್ಭಾವಸ್ಥೆಯಲ್ಲಿ ಮಹಿಳೆಯರು ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿನ್ನಬಾರದು. ಏಕೆಂದರೆ ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಲಬದ್ಧತೆ, ಅಜೀರ್ಣ ಮತ್ತು ತೂಕ ಹೆಚ್ಚಾಗುವಂತಹ ಸಮಸ್ಯೆಗಳು ಬರುತ್ತವೆ. ತುಪ್ಪ ಸೇವನೆಯಿಂದ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಜೀರ್ಣಾಂಗ ವ್ಯವಸ್ಥೆಗೆ ತುಪ್ಪ ಉತ್ತಮವಾಗಿದ್ದರೂ, ನೀವು ಆಗಾಗ್ಗೆ ಜೀರ್ಣಕಾರಿ ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸದಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.