ಲೈಫ್‌ಸ್ಟೈಲ್

ದಿನಕ್ಕೆ ನಾಲ್ಕು ಗಂಟೆಗೂ ಹೆಚ್ಚು ಕಾಲ ಫೋನ್ ಬಳಸುತ್ತೀರಾ? ನಿಮ್ಮ ಆರೋಗ್ಯಕ್ಕೆ ಇದೆ ಅಪಾಯ!

ಬೆಂಗಳೂರು: ಪ್ರಸ್ತುತ ಯುಗದಲ್ಲಿ ವಯಸ್ಸಿನ ಭೇದವಿಲ್ಲದೆ ಸ್ಮಾರ್ಟ್ ಫೋನ್ ಬಳಕೆ ಮಾಡಲಾಗುತ್ತಿದೆ. ನೀವು ಬಾತ್ರೂಮ್ಗೆ ಹೋಗಲು ಬಯಸಿದರೆ, ನಿಮ್ಮ ಸೆಲ್ ಫೋನ್ ಇಲ್ಲದೆ ನೀವು ಹೋಗಲು ಸಾಧ್ಯವಿಲ್ಲ ಅಷ್ಟೋಂದು ಫೋನ್​ ಬಳಕೆ ಮಾಡುತ್ತೀರಾ ಎಂದು ಅರ್ಥ. ಸ್ಮಾರ್ಟ್ ಫೋನ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಮನುಷ್ಯ ಮೊಬೈಲ್ ಚಟಕ್ಕೆ ಬೀಳುತ್ತಿದ್ದಾನೆ. ಹದಿಹರೆಯದವರು ದಿನಕ್ಕೆ 4 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಸ್ಮಾರ್ಟ್ ಫೋನ್ ನೋಡುತ್ತಾ ಇದ್ದರೆ ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಬನ್ನಿ ಫೋನ್​ ಹೆಚ್ಚಾಗಿ ಬಳಕೆ ಮಾಡುವುದರಿಂದ ಆಗುವ ಸಮಸ್ಯೆಯನ್ನು ತುಳಿದುಕೊಳ್ಳೋಣ...

ಕೊರಿಯಾದ ಹನ್ಯಾಂಗ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಕೇಂದ್ರದ ಗುಂಪು ಹದಿಹರೆಯದವರು ಸ್ಮಾರ್ಟ್ ಫೋನ್‌ಗಳ ಬಳಕೆಯ ಕುರಿತು ಹಲವಾರು ಸಂಶೋಧನೆಗಳನ್ನು ನಡೆಸಿದೆ. ಇದರಲ್ಲಿ 50 ಸಾವಿರಕ್ಕೂ ಹೆಚ್ಚು ಜನರನ್ನು ಅಧ್ಯಯನ ಮಾಡಲಾಗಿದೆ

1)ನಿದ್ರೆಯ ತೊಂದರೆ ಮತ್ತು ಕಣ್ಣಿನ ಸಮಸ್ಯೆಗಳಲ್ಲದೆ ಇತರ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಕಂಡುಬಂದಿದೆ.

2) ದಿನಕ್ಕೆ 4 ಗಂಟೆಗೂ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವುದರಿಂದ ಹೆಚ್ಚು ಒತ್ತಡ, ಆತ್ಮಹತ್ಯಾ ಯೋಚನೆ, ಮಾದಕ ದ್ರವ್ಯ ಸೇವನೆ ಮಾಡುವುದು ಕಂಡು ಬಂದಿದೆ. ಕಡಿಮೆ ಬಾರಿ ಫೋನ್ ಬಳಕೆ ಮಾಡುವವರಲ್ಲಿ ಇಂತಹ ಯೋಚನೆಗಳು ಕಡಿಮೆ ಎಂಬುದು ಬಹಿರಂಗವಾಗಿದೆ.

3) ಫೋನ್‌ನ ಅತಿಯಾದ ಬಳಕೆ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಮಲಗುವ ಮುನ್ನ ಫೋನ್ ಸ್ಕ್ರೀನ್ ನೋಡುವುದರಿಂದ ಚೆನ್ನಾಗಿ ನಿದ್ದೆ ಬರುವುದಿಲ್ಲ. ಇದು ಮೆಲಟೋನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ.

4) ಫೋನಿನ ಬೆಳಕು ಕಣ್ಣಿಗೆ ಹೆಚ್ಚು ಬಿದ್ದರೆ ನಿದ್ದೆ ಕೆಡಿಸುವ ಸಮಸ್ಯೆಗಳು ಎದುರಾಗುತ್ತವೆ. ಇದು ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

5) ಫೋನ್ ನೋಡುವುದರಿಂದ ಕಣ್ಣುಗಳು ಒಣಗುವುದು, ತಲೆನೋವು, ಆಲಸ್ಯ, ಆಯಾಸ ಇತ್ಯಾದಿ. ಇದರಿಂದ ಕಣ್ಣಿನ ಸಮಸ್ಯೆಯೂ ಹೆಚ್ಚಾಗುತ್ತದೆ. ನೀವು ದಿನವಿಡೀ ಫೋನ್ ಬಳಸಿದರೆ ಕುತ್ತಿಗೆ ಮತ್ತು ಬೆನ್ನಿನ ಸಮಸ್ಯೆಗಳು ಸಹ ಉದ್ಭವಿಸುತ್ತವೆ. ಹಾಗಾಗಿ ಸೆಲ್ ಫೋನ್ ಬಳಸುವವರು ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಗಮನಿಸಿ: ಈ ಮಾಹಿತಿಯನ್ನು ತಜ್ಞರು ಮತ್ತು ಅಧ್ಯಯನಗಳಿಂದ ಸಂಗ್ರಹಿಸಲಾಗಿದೆ. ಈ ಲೇಖನವು ಜಾಗೃತಿಗಾಗಿ ಮಾತ್ರ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.