ಲೈಫ್‌ಸ್ಟೈಲ್

ಚಳಿಗಾಲದಲ್ಲಿ ಕೀಲು ನೋವಿನಿಂದ ಬಳಲುತ್ತಿದ್ದೀರಾ? ತಪ್ಪದೇ ಈ ಸಲಹೆಗಳನ್ನು ಪಾಲಿಸಿ ನೋಡಿ...Joint Pain In Winter

Joint Pain In Winter : ಚಳಿಗಾಲದಲ್ಲಿ ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ದೇಹದ ಸೆಳೆತ ಅಥವಾ ನೋವು ಕೂಡ ಒಂದು. ವಿಶೇಷವಾಗಿ ಅನೇಕ ಜನರು ಈ ಸೀಸನ್​ನಲ್ಲಿ ಕೀಲು ನೋವಿನಿಂದ ಬಳಲುತ್ತಾರೆ. ಹೀಗಾಗಿ ಚಳಿಗಾಲದಲ್ಲಿ ಕೀಲು ನೋವಿನ ಸಮಸ್ಯೆಯನ್ನು ನಿಭಾಯಿಸಲು, ಕೆಲವೊಂದು ಸಲಹೆಗಳನ್ನು ಅನುಸರಿಸಬೇಕು. ಆ ಸಲಹೆಗಳು ಈ ಕೆಳಕಂಡಂತಿವೆ.

ದೇಹವನ್ನು ಬೆಚ್ಚಗಿಡಿ

ಶೀತ ವಾತಾವರಣವು ಕೀಲು ನೋವನ್ನು ಉಂಟುಮಾಡಬಹುದು, ಆದ್ದರಿಂದ ಶೀತ ಬರದಂತೆ ತಡೆಯಲು ದೇಹವನ್ನು ಸದಾ ಬೆಚ್ಚಗೆ ಇಡಬೇಕು. ಇದಕ್ಕಾಗಿ ಸ್ವೆಟರ್‌ಗಳನ್ನು ಧರಿಸುವುದು ಉತ್ತಮ. ತುಂಬಾ ಚಳಿ ಇದ್ದರೆ ಕೈಗೆ ಗ್ಲೌಸ್ ಮತ್ತು ಕಾಲಿಗೆ ಸಾಕ್ಸ್ ಹಾಕಿಕೊಂಡರೆ ಒಳ್ಳೆಯದು.

ದೇಹಕ್ಕೆ ಹೆಚ್ಚಿ ಶ್ರಮ ನೀಡಬಾರದು

ಇಲ್ಲಿ ಕಠಿಣ ಪರಿಶ್ರಮ ಎಂದರೆ ಅತಿಯಾದ ಶ್ರಮ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕೆಲವರು ತಮ್ಮ ದೇಹಕ್ಕೆ ನೋವು ಉಂಟಾಗುವಷ್ಟು ಸಾಮಾನ್ಯ ಕೆಲಸಗಳನ್ನು ಮಾಡುತ್ತಾರೆ. ಅತಿಯಾದ ಕೆಲಸದಿಂದ ನೋವುಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೀಲು ನೋವನ್ನು ತಪ್ಪಿಸಲು ನೀವು ಬಯಸಿದ್ದಲ್ಲಿ ಯಾವುದೇ ಕಾರಣಕ್ಕೂ ಅತಿಯಾಗಿ ಕೆಲಸ ಮಾಡಬಾರದು.

ತೂಕವನ್ನು ನಿಯಂತ್ರಣದಲ್ಲಿಡಿ

ದೇಹದ ತೂಕ ಕೂಡ ಕೀಲು ನೋವಿಗೆ ಪ್ರಮುಖ ಕಾರಣವಾಗಿದೆ. ನಿಮ್ಮ ದೇಹದ ತೂಕವು ತುಂಬಾ ಹೆಚ್ಚಿದ್ದರೆ, ಅದು ನಿಮ್ಮ ಕೀಲುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ನೋವನ್ನು ಉಂಟುಮಾಡುತ್ತದೆ. ಆದ್ದರಿಂದ, ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ.

ವ್ಯಾಯಾಮ ಅತ್ಯಗತ್ಯ

ಯಾವುದೇ ಚಟುವಟಿಕೆ ಅಥವಾ ವ್ಯಾಯಾಮ ಮಾಡದಿದ್ದಾಗ ದೇಹವೂ ಜಡವಾಗುತ್ತದೆ. ಇದರಿಂದ ಕೀಲು ನೋವು ಉಂಟಾಗುತ್ತದೆ. ನಿಮಗೆ ವ್ಯಾಯಾಮ ಮಾಡುವ ಅಭ್ಯಾಸವಿಲ್ಲದಿದ್ದರೆ, ಇಂದೇ ಪ್ರಾರಂಭಿಸಿ. ಏಕೆಂದರೆ, ನಿಮ್ಮ ದೇಹ ಸದೃಢವಾಗಿದ್ದರೆ, ಕೀಲು ನೋವು ಮಾತ್ರವಲ್ಲ, ನಿಮ್ಮ ಹೃದಯದ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ವಿಟಿಮಿನ್​ ಡಿ ತುಂಬಾ ಮುಖ್ಯ

ದೇಹವು ಸಾಕಷ್ಟು ವಿಟಮಿನ್ ಡಿ ಪಡೆಯದಿದ್ದರೆ, ಮೂಳೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇಂತಹ ತೊಂದರೆಗಳನ್ನು ತಪ್ಪಿಸಲು ದೇಹಕ್ಕೆ ಸಾಕಷ್ಟು ವಿಟಮಿನ್ ಡಿ ಒದಗಿಸಬೇಕು. ಅದಕ್ಕಾಗಿ ದಿನದಲ್ಲಿ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲಬೇಕು. ಹಾಗೇ ವಿಟಮಿನ್​ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

ಡಯಟ್​ ತುಂಬಾ ಮುಖ್ಯ

ತರಕಾರಿಗಳು, ಹಣ್ಣುಗಳು, ಸೊಪ್ಪುಗಳು ಮತ್ತು ಸಾಲ್ಮನ್‌ ಮೀನಿನಂತಹ ಪೌಷ್ಟಿಕ ಆಹಾರಗಳನ್ನು ತಿನ್ನುವುದು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.