Internet: ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ನಮ್ಮ ಅವಿಭಾಜ್ಯ ಅಂಗವಾಗಿದೆ. ದಿನನಿತ್ಯದ ಕೆಲಸ ಸೇರಿದಂತೆ ಒಂದು ರೀತಿಯಲ್ಲಿ ಸಂಗಾತಿಯಾಗಿ ದಿನನಿತ್ಯದಲ್ಲಿ ಹಾಸುಹೊಕ್ಕಿದೆ. ಹೀಗಾಗಿ, ಕೆಲವರಿಗೆ ಈ ಅವಲಂಬನೆಯೂ ಪೂರ್ಣ ಪ್ರಮಾಣ ಇಂಟರ್ನೆಟ್ ವ್ಯಸನವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ:Muda Scam| ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ; ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾದ ದೂರುದಾರ
ಇದು ಮಾನಸಿಕ ಆರೋಗ್ಯ ಮತ್ತು ಮನುಷ್ಯ ಜೀವನದ ಬೆಳವಣೆಗೆಯಲ್ಲಿ ನಕಾರತ್ಮಾಕ ಪರಿಣಾಮ ಬೀರುತ್ತದೆ. ನಿಯಮಿತ ವ್ಯಾಯಾಮ ಮಾಡುವುದರಿಂದ ಇಂಟರ್ನೆಟ್ ವ್ಯಸನದಿಂದ ತಪ್ಪಿಸಿಕೊಳ್ಳಬಹುದು ಅಥವಾ ವ್ಯಸನ ಕಡಿಮೆ ಮಾಡಲು ಹಾಗೂ ಯೋಗಕ್ಷೇಮ ಸುಧಾರಿಸಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಅತಿಯಾದ ಮತ್ತು ಅನಿಮಿಯತ ಇಂಟರ್ನೆಟ್ ಬಳಕೆಯಿಂದ ಇಂಟರ್ನೆಟ್ನಿಂದಾಗಿ ಸೋಷಿಯಲ್ ಮೀಡಿಯಾದ ಗೀಳು ಸೇರಿದಂತೆ ಆನ್-ಲೈನ್ಗೇಮಿಂಗ್, ರೀಲ್ಸ್ ಸ್ಕ್ರೋಲಿಂಗ್ ಮತ್ತು ಅನಿಮಿಯತ ವೆಬ್ ಬ್ರೌಸಿಂಗ್ಗಳು ಈ ಡಿಜಿಟಲ್ ಯುಗದಲ್ಲಿ ವ್ಯಸನವಾಗಿ ಮಾರ್ಪಟ್ಟಿದೆ. ಅಲ್ಲದೆ, ಇಂಟರ್ನೆಟ್ ವ್ಯಸನದಿಂದಾಗಿ ನಿದ್ದೆಭಂಗ, ಏಕಾಗ್ರತೆ ಮತ್ತು ಮಾನಸಿಕ ಆರೋಗ್ಯದಲ್ಲಿ ಕುಸಿತವನ್ನು ಕಂಡಿದ್ದಾರೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಕೆಲ ವ್ಯಾಯಮ ಸೇರಿದಂತೆ ಇನ್ನಿತರ ಪಾಸಿಟಿವ್ ಚಟುವಟಿಕೆಗಳ ಅಭ್ಯಾಸದಿಂದ ಇಂಟರ್ನೆಟ್ ವ್ಯಸನದಿಂದ ತಪ್ಪಿಸಿಕೊಳ್ಳಬಹುದು.
ನಿಯಮಿತ ದೈಹಿಕ ಚಟುವಟಿಕೆಯು ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅಧ್ಯನದ ವರದಿ.ಈ ಅಧ್ಯಯನಕ್ಕೆಂದೆ ಇಂಟರ್ನೆಟ್ ವ್ಯಸನ ಹೊಂದಿರುವ 780 ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ವರದಿ ಸಿದ್ದಪಡಿಸಿದೆ.
ಚಲನೆ ಶಕ್ತಿ ವ್ಯಾಯಾಮ: ಯಾವ ರೀತಿಯ ವ್ಯಾಯಾಮ ಉತ್ತಮ ಕಾರ್ಯನಿರ್ವಹಿಸುತ್ತದೆ? ಸಂಶೋಧಕರರು ಮೂರು ವಿಭಾಗಳಲ್ಲಿ ವಿಂಗಡಿಸಿದ್ದಾರೆ.
1.ತ್ವರಿತಗತಿ ವ್ಯಾಯಾಮ: ಬಾಕ್ಸೆಟ್ಬಾಲ್, ಟೆನ್ನಿಸ್ ನಂತಹ ಆಟಗಳು ತ್ವರಿತಗಳು ಆಟಗಳಲ್ಲಿ ಭಾಗವಹಿಸಬೇಕು.
2.ಒಳಗಡೆ ವ್ಯಾಯಾಮ: ಓಟ ಈಜು, ಭಾರ ಎತ್ತುವಿಕೆ ಕ್ರೀಡೆಗಳಲ್ಲಿ ಭಾಗವಹಿಸಬಹುದು.
3.ಎರಡು ವ್ಯಾಯಾಮಗಳ ಮಿಶ್ರಣ ಸೇರಿ ದೈನಂದಿನ ಜಿಮ್ ಮಾಡಬೇಕು
ಇಂತಹ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಇಂಟರ್ನೆಟ್ ವ್ಯಸನವನ್ನು ಕಡಿಮೆ ಮಾಡುವುದನ್ನು ಮಾತ್ರ ಎತ್ತಿ ತೋರಿಸಲಿಲ್ಲ, ವ್ಯಾಯಾಮದ ವಿಶಾಲ ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಸಹ ಈ ಅಧ್ಯಯನವು ಬಹಿರಂಗಪಡಿಸಿದೆ.(ಏಜೆನ್ಸೀಸ್)