ಲೈಫ್‌ಸ್ಟೈಲ್

ಡಿಜಿಟಲ್​ ಮಾಧ್ಯಮದ ವ್ಯಸನಿಗಳಾಗಿದ್ದೀರಾ? ಹಾಗಿದ್ದರೆ ಅದನ್ನು ತಪ್ಪಿಸಲು ಈ ರೀತಿ ಮಾಡಿ..| Digital Addiction

Digital Addiction: ಸಮಕಾಲೀನ ಸಮಾಜದಲ್ಲಿ ಡಿಜಿಟಲ್​ ಸಾಧನಗಳು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಂವಹನ, ಶಿಕ್ಷಣ ಮತ್ತು ಮನರಂಜನೆಯ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ಮಕ್ಕಳು, ಹದಿಹರೆಯದವರ ಮೇಲೆ ಈ ಡಿಜಿಟಲ್​ ಸಾಧನಗಳು ಸವಾಲನ್ನು ಒಡ್ಡಿದ್ದು, ಇದನ್ನು ಡಿಜಿಟಲ್​ ವ್ಯಸನ ಎಂದು ಕರೆಯಲಾಗುತ್ತದೆ.

ಯುವಕರು ಅತಿಯಾಗಿ ಡಿಜಿಟಲ್​ ಸಾಧನಗಳನ್ನು ಅಳವಡಿಸಿಕೊಂಡಂತೆ ಗಂಭೀರವಾದ ನರವೈಜ್ಞಾನಿಕ ಪರಿಣಾಮಗಳು ಪ್ರಾರಂಭವಾಗುತ್ತದೆ. . ಇನ್ನು ಯುವಜನರು ಸತತವಾಗಿ ಡಿಜಿಟಲ್​ ಸಾಧನಗಳಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಿನ ಖಿನ್ನತೆಯನ್ನು ಅನುಭವಿಸಬೇಕಾಗುತ್ತದೆ. ಇನ್ನು ಹೀಗೆ ಮುಂದುವರೆದಲ್ಲಿ ಒಂಟಿತನದಂತಹ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ.

ಡಿಜಿಟಲ್​ ಮಾಧ್ಯಮಗಳನ್ನು ಬಳಸುವವರು ಎಥೇಚ್ಚವಾಗಿ ಇಂಟರ್ನ್​ನೆಟ್​ ವ್ಯಸನಿಗಳಾಗಿ ಹೊರಹೊಮ್ಮುತ್ತಾರೆ. ಇಲ್ಲಿ ಗೇಮಿಂಗ್​ ನಂತಹ ಆ್ಯಪ್​ಗಳ ಹಿಂದೆ ಮಾರಿ ಹೋಗುತ್ತಾರೆ. ಇದರಿಂದ ಜೂಜು, ಬೆಟ್ಟಿಂಗ್​ನಂತಹ ಆಟವಾಡಲು ಪ್ರಾರಂಭಿಸಿ ವ್ಯಸನಿಗಳಾಗಿ ಪರಿವರ್ತನೆಯಾಗುತ್ತಾರೆ. ಇನ್ನು ಆನ್​ಲೈನ್​ನಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಆತಂಕ, ಭಯ, ಕಿರಿಕಿರಿ ಅನುಭವಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.

ಯುವ ಮನಸ್ಸಿನ ಮೇಲೆ ಬೀರುವ ಪರಿಣಾಮಗಳನ್ನು ತಗ್ಗಿಸುವುದು ಹೇಗೆ?

* ಶಿಕ್ಷಣ ಹಾಗೂ ಜಾಗೃತಿ ನೀಡುವುದು

ಪಾಲಕರು, ಶಿಕ್ಷಕರು ಹಾಗೂ ಯುವ ಜನರು ಅತಿಯಾದ ಡಿಜಿಟಲ್​ ಮಾಧ್ಯಮದ ಅಪಾಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಅಂದರೆ ಎಲ್ಲವನ್ನೂ ತ್ಯಜಿಸಬೇಕೆಂದಲ್ಲ, ಬದಲಿಗೆ ಡಿಜಿಟಲ್​ ಪರಿಕರಗಳೊಂದಿಗೆ ಸಮತೋಲಿತ, ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಡಿಜಿಟಲ್​ ಮಾಧ್ಯಮದ ಬಳಕೆಯನ್ನು ಕಡಿಮೆ ಮಾಡಿಸಲು ಅವರೊಂದಿಗೆ ಬೆರೆತು ಸಮಯ ಕೊಡಬೇಕು. ಇನ್ನು ವಿದ್ಯಾರ್ಥಿಗಳಿಗೆ ಈ ಪರಿಕರಗಳನ್ನು ಬಳಸುವುದರಿಂದ ಏನಾಗುತ್ತದೆ ಎಂಬುದನ್ನು ಶಾಲೆಯಲ್ಲಿ ಶಿಕ್ಷಕರು ತಿಳಿಸಿಕೊಡಬೇಕು.

* ದಿನಚರಿಗಳನ್ನು ನಿರ್ಮಿಸುವುದು

ಸಾಧನಗಳ ಬಗ್ಗೆ ಸ್ಪಷ್ಟ ಮಾಹಿತಿಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಹಾಗೆಯೇ, ಮನೆಗಳಲ್ಲಿ ಡಿಜಿಟಲ್​ ಮಾಧ್ಯಮಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಎಲ್ಲರೊಂದಿಗೆ ಕಾಲ ಕಳೆಯಬೇಕು. ಇನ್ನು ಊಟದ ಸಮಯದಲ್ಲಿ ಮಲಗುವ ಕೋಣೆಯಲ್ಲಿ ಆದಷ್ಟು ಈ ಸಾಧನಗಳನ್ನು ಬಳಕೆ ಕಡಿಮೆ ಮಾಡುವುದನ್ನು ಪ್ರಯತ್ನಿಸಬೇಕು.

* ಇನ್ನಿತರ ಚಟುವಟಿಕೆಗಳಲ್ಲಿ ತೊಡಗುವುದು

ವೈವಿಧ್ಯಮಯ ಆನ್​ಲೈನ್​ ಚಟುವಟಿಕೆಗಳಲ್ಲಿ ಭಾಗವಹಿಸುವದನ್ನು ನಿಯಂತ್ರಿಸಿ, ದೈಹಿಕ ಮನರಂಜನೆಯನ್ನು ಪ್ರೊತ್ಸಾಹಿಸುವುದು ಅತ್ಯಗತ್ಯವಾಗಿದೆ. ಅನ್ವೇಷಣೆಗಳು, ಪುಸ್ತಕ ಓದುವುದು, ಮುಖಾಮುಖಿ ಸಂಭಾಷಣೆಯಲ್ಲಿ ತೊಡಗಿಕೊಳ್ಳುವಿಕೆ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ನಮ್ಮ ಅಭಿವೃದ್ಧಿ ಕೌಶಲ್ಯಗಳನ್ನು ಉತ್ತೇಜಿಸುತ್ತದೆ. ಈ ಚಟುವಟಿಕೆಗಳು ಒಂಟಿತನವನ್ನು ನಿಯಂತ್ರಿಸುತ್ತದೆ.

* ಡಿಜಿಟಲ್ ಸಾಕ್ಷರತೆ ಹಾಗೂ ವಿಮರ್ಶಾತ್ಮಕ ಚಿಂತನೆ ಬೆಳೆಸುವುದು

ಯುವಜನರು ಆನ್​ಲೈನ್​ ಜಗತ್ತಿನಲ್ಲಿ ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಲ್ಲಿ ಮಾಹಿತಿ ಪರಿಶೀಲನೆ, ಗೌಪ್ಯತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇನ್ನು ಆನ್​ಲೈನ್​ ಪರಿಕರಗಳು ವೇಗವಾಗಿ ಯುವ ಮನಸ್ಸುಗಳ ಮೇಲೆ ಪರಿಣಾಮ ಬೀರುತ್ತದೆ. ಆದರಿಂದ ಇವುಗಳ ಬಗ್ಗೆ ತಿಳಿದು ನಂತರ ಉಪಯೋಗಿಸುವುದು ಉತ್ತಮವಾಗಿರುತ್ತದೆ.( ಏಜೆನ್ಸೀಸ್​)