Kotte Kadubu ಸಾಂದರ್ಭಿಕ ಚಿತ್ರ
Kotte Kadubu: ಕೊಟ್ಟೆ ಕಡುಬು ಮಲೆನಾಡು ಮತ್ತು ಕರಾವಳಿ ಭಾಗದ ಅತ್ಯಂತ ಸಾಂಪ್ರದಾಯಿಕ ಹಾಗೂ ಜನಪ್ರಿಯ ಬ್ರೇಕ್‌ಫಾಸ್ಟ್ ರೆಸಿಪಿ. ಹಲಸಿನ ಎಲೆಗಳನ್ನು ಬಳಸಿ ಸಣ್ಣ ಸಣ್ಣ ಬುಟ್ಟಿಗಳಂತಹ ಆಕಾರವನ್ನು ಮಾಡಿ, ಅದರೊಳಗೆ ಇಡ್ಲಿ ಹಿಟ್ಟನ್ನು ಹಾಕಿ ಹಬೆಯಲ್ಲಿ ಬೇಯಿಸಲಾಗುತ್ತದೆ. ಹಲಸಿನ ಎಲೆಯ ವಿಶಿಷ್ಟ ಸುವಾಸನೆ ಈ ಕಡುಬಿನ ರುಚಿಯನ್ನು ದುಪ್ಪಟ್ಟುಗೊಳಿಸುತ್ತದೆ. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೇ ಮಾಡಿ..
ಬೇಕಾಗುವ ಪದಾರ್ಥಗಳು
ಮಾಡುವ ವಿಧಾನ
ಉದ್ದಿನಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು, ಪ್ರತ್ಯೇಕವಾಗಿ 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಉದ್ದಿನ ಬೇಳೆಯನ್ನು ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಎರಡನ್ನೂ ಒಂದು ಪಾತ್ರೆಗೆ ಸೇರಿಸಿ ಚೆನ್ನಾಗಿ ಕಲಸಿ. ರಾತ್ರಿಯಿಡೀ ನೆನೆಯಲು ಬಿಡಿ. ಮರುದಿನ ಬೆಳಗ್ಗೆ, ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹದವಾಗಿ ಕಲಸಿಡಿ.
ಒಂದೇ ಅಳತೆಯ ನಾಲ್ಕು ಮೃದುವಾದ ಹಲಸಿನ ಎಲೆಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸಿ ಸ್ವಚ್ಛಗೊಳಿಸಿ. ನಂತರ ಎಲೆಗಳ ತೊಟ್ಟಿನ ಭಾಗವನ್ನು ಒಳಗಡೆ ಬರುವಂತೆ ಒಂದರ ಮೇಲೊಂದು ಸ್ವಲ್ಪ ಭಾಗ ಓವರ್‌ಲ್ಯಾಪ್ ಆಗಿ ಇಟ್ಟು, ಕಡ್ಡಿ ಅಥವಾ ಟೂತ್‌ಪಿಕ್ ಬಳಸಿ ಚೌಕಾಕಾರದ ಕಪ್ ಅಥವಾ ಬುಟ್ಟಿಯ ಆಕಾರಕ್ಕೆ ಜೋಡಿಸಿ. (ತಳಭಾಗದಲ್ಲಿ ಹಿಟ್ಟು ಸೋರಿಹೋಗದಂತೆ ಗಟ್ಟಿಯಾಗಿ ಜೋಡಿಸುವುದು ಮುಖ್ಯ)
ಇಡ್ಲಿ ಪಾತ್ರೆ ಅಥವಾ ಸ್ಟೀಮರ್‌ನಲ್ಲಿ ನೀರು ಹಾಕಿ ಕಾಯಲು ಬಿಡಿ. ನಂತರ ಸಿದ್ಧಪಡಿಸಿದ ಹಲಸಿನ ಎಲೆಯ ಕೊಟ್ಟೆಗಳ ಮುಕ್ಕಾಲು ಭಾಗದವರೆಗೆ ಇಡ್ಲಿ ಹಿಟ್ಟನ್ನು ತುಂಬಿಸಿ. ಇಡ್ಲಿ ಪಾತ್ರೆಯಲ್ಲಿ ನೆಟ್ಟಗೆ ನಿಲ್ಲಿಸಿಡಿ. ಪಾತ್ರೆಯ ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ಹಬೆಯಲ್ಲಿ ಚೆನ್ನಾಗಿ ಬೇಯಿಸಿ ನಂತರ ಒಲೆಯನ್ನು ಆಫ್ ಮಾಡಿ. 5 ನಿಮಿಷ ತಣ್ಣಗಾದ ನಂತರ ಕೊಬ್ಬರಿ ಚಟ್ನಿಯೊಂದಿಗೆ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.