Amrita Khanvilkar: ನಟಿ ಅಮೃತಾ ಖಾನ್ವಿಲ್ಕರ್ ಮರಾಠಿ ಜಗತ್ತಿನ ಚಂದ್ರಮುಖಿ ಎಂದು ಕರೆಯಲಾಗುತ್ತದೆ. ಇವರು ತಮ್ಮ ನಟನೆ ಜೀವನಶೈಲಿಯಲ್ಲಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಇವರು ನಟನೆ ಮಾತ್ರವಲ್ಲದೇ, ಫಿಟ್ನೆಸ್ ಹಾಗೂ ಜೀವನಶೈಲಿಯಲ್ಲಿ ಆಕರ್ಷಿತರಾಗಿದ್ದಾರೆ. ಇವರ ಫಿಟ್ನೆಸ್ ಗೆ ಕಾರಣ ಏನೆಂಬುದರ ಬಗ್ಗೆ ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯವನ್ನು ಸುಧಾರಿಸಲು ಸರಿಯಾದ ಸಮಯದಲ್ಲಿ ತಿನ್ನುವುದು, ನಿಯಮಿತ ಯೋಗ ಮತ್ತು ಉಪವಾಸ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಅಮೃತಾ ಅವರು ತಿಳಿಸಿದ್ದಾರೆ.
ಅಮೃತಾ ಹೇಳುವಂತೆ ದಿನಕ್ಕೆ 4-5 ಲೀಟರ್ ನೀರು ಕುಡಿಯುವುದು ಅವಶ್ಯಕವಾಗಿದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಹಾಗೆಯೇ ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅತಿಯಾಗಿ ನೀರು ಸೇವಿಸುವುದರಿಂದ ಚರ್ಮಕ್ಕೆ ಹೊಳಪನ್ನು ನೀಡುತ್ತದೆ, ಕೂದಲನ್ನು ಬಲಿಷ್ಟವಾಗಿಸುತ್ತದೆ. ಹಾಗೆಯೇ ಯಕೃತ್ ಮತ್ತು ಮೂತ್ರಪಿಂಡವನ್ನು ಬಲಪಡಿಸುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಎಂದು ತಿಳಿಸಿದ್ದಾರೆ.
ಸೌತೆಕಾಯಿ , ಪಾಲಕ್, ಹಸಿರು ಸೇಬು ಮತ್ತು ಸ್ವಲ್ಪ ಶುಂಠಿ ಸೇರಿಸಿ ಮಿಕ್ಸಿ ಮಾಡಿ ಜ್ಯೂಸ್ ಮಾಡಿ ಕುಡಿಯುತ್ತಾರಂತೆ. ಇದನ್ನು ಬೆಳಿಗ್ಗೆ ಎದ್ದು ಕುಡಿಯುವುದರಿಂದ ಬೊಜ್ಜು ಕರಗಿಸಲು ಸಹಾಯವಾಗುತ್ತದೆ. ಹಾಗೆಯೇ, ಇದು ಸದೃಢ ಮೈಕಟ್ಟನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾಳೆ.
ಅಮೃತಾ ಊಟ ಆದ ನಂತರ ಸಬ್ಬಸಿಗೆ ಮತ್ತು ಜೀರಿಗೆ ನೀರನ್ನು ಸೇವಿಸುತ್ತಾರಂತೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಹಾಗೆಯೇ ತೂಕ ಇಳಿಸಿಕೊಳ್ಳಲು ಉತ್ತಮವಾಗಿದೆ ಆದರಿಂದ ಪ್ರತಿ ನಿತ್ಯ ಊಟ ಮಾಡಿದ ನಂತರ ಇದನ್ನು ಸೇವಿಸಿ ಎಂದು ತಿಳಿಸಿದ್ದಾರೆ.
ಅಮೃತಾ ಸಕ್ಕರೆ ಸೇರಿಸದೆ ಕಪ್ಪು ಕಾಫಿ ಕುಡಿಯುತ್ತಾರಂತೆ. ಇದು ದಿನವನ್ನು ಉತ್ತಮ ಕೊಬ್ಬಿನೊಂದಿಗೆ ಪ್ರಾರಂಭಿಸುತ್ತದೆ. ಹಾಗೆಯೇ ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಜಾಗರೂಕತೆಯನ್ನು ಹೆಚ್ಚಿಸುವುದರ ಜೊತೆಗೆ ಮನಸ್ಥಿತಿಯನ್ನು ಸುಧಾರಿಸುತ್ತದೆ. ಹಾಗಾಗಿ ದಿನಕ್ಕೆ ಎರಡು ಬಾರಿ ಕುಡಿಯುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾನಿಲ್ಲಿ ಬಯಸುತ್ತಿರುವುದು ಕೇವಲ ಇದನ್ನು ಮಾತ್ರ… ಸರ್ಕಾರಕ್ಕೆ ಕಿರಣ್ ಮಜುಂದಾರ್ ಶಾ ತಿರುಗೇಟು! Kiran Mazumdar Shaw
ಅಮೃತಾ ಅವರು ಸೂಚಿಸಿದಂತೆ, ಪಿಸಿಒಡಿ ನಂತರ, ಅವರು ತಮ್ಮ ಸಂಪೂರ್ಣ ಜೀವನಶೈಲಿಯನ್ನು ಬದಲಾಯಿಸಿದರು. ಬೇಗನೆ ಊಟ ಮಾಡುವುದು, ಬೆಳಿಗ್ಗೆ ಸರಿಯಾದ ಆಹಾರ ಸೇವಿಸುವುದು. ಹಾಗೆಯೇ, 12 ರಿಂದ 16 ಗಂಟೆಗಳ ಕಾಲ ಉಪವಾಸ ಮಾಡುವುದರಿಂದ ಅವರ ಜೀರ್ಣಕ್ರಿಯೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು. ಈ ಉಪವಾಸದ ಅವಧಿಯಲ್ಲಿ ನೀರು, ಹಸಿರು ಚಹಾ, ಕಪ್ಪು ಕಾಫಿ ಅಥವಾ ನಿಂಬೆ ನೀರು ಕುಡಿಯುವುದರಿಂದ ದೇಹವು ವಿಶ್ರಾಂತಿಯನ್ನು ಪಡೆಯಿತು ಎಂದು ತಿಳಿಸಿದರು.
ಅಮೃತಾ ಈ ಹಿಂದೆ ಪಿಸಿಒಡಿ ಸಮಸ್ಯೆಯನ್ನು ಅನುಭವಿಸಿದ್ದಾರಂತೆ. ಹಾಗಾಗಿ ಅವರು ಸರಿಯಾದ ಸಮಯಕ್ಕೆ ಊಟ ಮಾಡುವುದು, ಸರಿಯಾದ ಸಮಯದವರೆಗೆ ಉಪವಾಸ ಮಾಡುವುದು ಮತ್ತು ಪಾನೀಯಗಳನ್ನು ಸೇವಿಸುವುದನ್ನು ಮಾಡಿದ್ದರಿಂದ ಆಕೆಯ ದೇಹದಲ್ಲಿರುವ ಹಾರ್ಮೋನುಗಳು ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು ಎಂದು ತಿಳಿಸಿದ್ದಾರೆ. (ಏಜೆನ್ನೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ