ಲೈಫ್‌ಸ್ಟೈಲ್

ಇದು ತುಂಬಾ ರಿಸ್ಕ್​... ಸಮಂತಾ ಪ್ರೊಟೀನ್​ ಚಾಲೆಂಜ್​ಗೆ ತಜ್ಞರು ಹೇಳೋದೇನು? Samantha Prabhu

Samantha Prabhu : ನಟಿ ಸಮಂತಾ ರುತ್​ ಪ್ರಭು ಇತ್ತೀಚೆಗೆ 50 ಕೆಜಿ ದೇಹದ ತೂಕದೊಂದಿಗೆ ದಿನಕ್ಕೆ ಸುಮಾರು 100 ಗ್ರಾಂ ಪ್ರೊಟೀನ್​​ ತಿನ್ನುವುದಾಗಿ ತಿಳಿಸಿದ್ದಾರೆ. ಇದು ಫಿಟ್ನೆಸ್ ಉತ್ಸಾಹಿಗಳಿಗಳಲ್ಲಿ ಮೆಚ್ಚುಗೆ ಮತ್ತು ಗೊಂದಲವನ್ನು ಹುಟ್ಟುಹಾಕಿದ್ದು, ಅವರ ಜೀವನಶೈಲಿಯು ಬಗ್ಗೆ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಪಾಲಕ್ ನಾಗ್ಪಾಲ್ ಕೆಲವೊಂದು ಮಾಹಿತಿಗಳನ್ನು ಹಂಚಿದ್ದಾರೆ.

ನಟಿ ಸಮಂತಾ ಪ್ರತಿನಿತ್ಯ ಪ್ರತಿ ಕಿಲೋಗ್ರಾಂಗೆ 2 ಗ್ರಾಂ ಪ್ರೊಟೀನ್​ನಂತೆ 50 ಕೆಜಿ ತೂಕಕ್ಕೆ 100 ಗ್ರಾಂ ಪ್ರೊಟೀನ್​ ಸೇವಿಸುತ್ತಾರೆ. ಇದು ಹೆಚ್ಚು ಸಕ್ರಿಯರಾಗಿರುವವರಿಗೆ, ಶಕ್ತಿ ತರಬೇತಿ ನೀಡುವವರಿಗೆ, ಸ್ನಾಯುಗಳನ್ನು ಬೆಳೆಸುವ ಗುರಿಯನ್ನು ಹೊಂದಿರುವವರಿಗೆ ಸೂಕ್ತವಾಗಿದೆ ಎಂದು ಪಾಲಕ್ ನಾಗ್ಪಾಲ್ ತಿಳಿಸಿದ್ದಾರೆ.

ಪ್ರೋಟೀನ್ ಸೇವನೆ ಅಗತ್ಯವಾ ಗಿದೆ

ದೇಹದ ತೂಕವು ಕೇವಲ ಆರಂಭಿಕ ಹಂತ. ಇದು ಪೂರ್ಣ ಸಮೀಕರಣವಲ್ಲ ಎಂದು ತಜ್ಞರು ಹೇಳಿದ್ದಾರೆ. ವಾಸ್ತವವಾಗಿ ಪ್ರೊಟೀನ್​, ಅಗತ್ಯಗಳು ಸ್ನಾಯುವಿನ ದ್ರವ್ಯರಾಶಿ, ಚಟುವಟಿಕೆಯ ಮಟ್ಟ, ವಯಸ್ಸು, ಹಾರ್ಮೋನುಗಳ ಸಮತೋಲನ ಮತ್ತು ಕರುಳಿನ ಆರೋಗ್ಯದಂತಹ ಬಹು ಅಂಶಗಳನ್ನು ಅವಲಂಬಿಸಿರುತ್ತದೆ. ಪ್ರೊಟೀನ್​ ಸೇವನೆಯು 30 ರ ಒಳಗಿನ ಮಹಿಳೆಯರಿಗೆ ಶಕ್ತಿಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆ ಸುಧಾರಣೆ, ಹಸಿವು ಕಡಿತವನ್ನು ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.

ನೀವು ಅದನ್ನು ಅತಿಯಾಗಿ ಮಾಡಿದರೆ ಏನಾಗುತ್ತದೆ?

ನೀವೇನಾದರೂ, ಸೆಲೆಬ್ರೆಟಿಗಳಂತೆ ತಿನ್ನುವ ಯೋಚನೆಯೇನಾದರೂ ಮಾಡಿದಲ್ಲಿ ನೀವು ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದೀರಿ ಎಂದು ನೆನಪಿಟ್ಟುಕೊಳ್ಳಿ. ಸೇವನೆಯು ಹಠಾತ್​ ತೂಕ ಏರಿಕೆ, ವಿಶೇಷವಾಗಿ ಶೇಕ್ಸ್​, ಪನೀರ್​ ಅಥವಾ ದ್ವಿದಳ ಧಾನ್ಯಗಳಂತಹ ದಟ್ಟವಾದ ಮೂಲಗಳ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ಅಂದರೆ, ಉಬ್ಬುವುದು, ಆಮ್ಲೀಯತೆ ಅಥವಾ ಆಲಸ್ಯತನಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಪ್ರತಿನಿತ್ಯ ಪ್ರೊಟೀನ್​​ಗಳಲ್ಲಿ ಫೈಬರ್, ದ್ರವಗಳು ಮತ್ತು ಮನೆಯಲ್ಲಿ ತಯಾರಿಸಿದ ಮೊಸರು, ಕಾಂಜಿ ಅಥವಾ ಮಜ್ಜಿಗೆಯಂತಹ ಹುದುಗಿಸಿದ ಆಹಾರಗಳೊಂದಿಗೆ ಸೇವಿಸುವುದರಿಂದ ಇದು ಕರುಳಿನ ಆರೋಗ್ಯವನ್ನು ಸಮತೋಲಿಸಲು ಸಹಾಯ ಮಾಡುತ್ತದೆ.

ನಿಮ್ಮ ಪ್ರೋಟೀನ್ ಅಗತ್ಯಗಳನ್ನು ಹೇಗೆ ಪೂರೈಸಬೇಕು?

ಅನೇಕ ಭಾರತೀಯ ಮಹಿಳೆಯರಿಗೆ ಅದರಲ್ಲೂ ಸಸ್ಯಹಾರಿಗಳಿಗೆ ದುಬಾರಿ ಪೂರಕಗಳನ್ನು ಅವಲಂಬಿಸದೆ ಯಾವ ರೀತಿಯಲ್ಲಿ ಪ್ರೊಟೀನ್​ ಪಡೆಯುವುದು ಎಂದು ಯೋಚಿಸುವ ಮಹಿಳೆಯರಿಗೆ ತಜ್ಞರು ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಲಭ್ಯವಿರುವ ಸರಳ, ಸಮತೋಲಿತ ಆಯ್ಕೆಗಳನ್ನು ಸೂಚಿಸುತ್ತಾರೆ.

ಅವುಗಳೆಂದರೆ, ಮಸೂರ ಮತ್ತು ಹೆಸರುಕಾಳು, ಮಸೂರ್, ರಾಜ್ಮಾ ಮುಂತಾದ ದ್ವಿದಳ ಧಾನ್ಯಗಳು, ರಾಗಿ, ಕ್ವಿನೋವಾ, ಅಮರಂಥ್, ಪನೀರ್, ಗ್ರೀಕ್ ಮೊಸರು, ಬೀಜಗಳು, ದ್ವಿದಳ ಧಾನ್ಯಗಳಿಂದ ತಯಾರಿಸಲ್ಪಟ್ಟ ಪ್ರೊಟೀನ್​ ಲಡ್ಡುಗಳನ್ನು ಸೇವಿಸುವುದು ಉತ್ತಮ ಎಂದು ತಿಳಿಸಿದ್ದಾರೆ.

ಸೆಲೆಬ್ರಿಟಿಗಳ ಆಹಾರಕ್ರಮವನ್ನು ಪಾಲಿಸುವುದು ಅಪಾಯಕಾರಿ?

ಸೆಲೆಬ್ರಿಟಿಗಳ ಆಹಾರಕ್ರಮವನ್ನು ಸಾಮಾನ್ಯವಾಗಿ ಪೌಷ್ಟಿಕತಜ್ಞರು, ತರಬೇತುದಾರರು ಮತ್ತು ವೈದ್ಯಕೀಯ ಸಲಹೆಗಾರರ ​​ಸಂಪೂರ್ಣ ತಂಡಗಳು ಅವರ ದೇಹದ ಆಧಾರದ ಮೇಲೆ ನಿರ್ಧರಿಸುತ್ತವೆ. ಹಾಗಾಗಿ ನೀವೇನಾದರೂ ಯಾವುದೇ ತಜ್ಞರ ಮಾಹಿತಿ ಇಲ್ಲದೇ, ಆಹಾರಕ್ರಮವನ್ನು ಪಾಲಿಸುವುದರಿಂದ ಇದು ದೇಹದಲ್ಲಿ ಪೌಷ್ಟಿಕಾಂಶದ ಅಸಮತೋಲನವನ್ನು ಉಂಟು ಮಾಡುತ್ತದೆ.

ಪ್ರೊಟೀನ್​ ಅಗತ್ಯ ಏಕೆ ಮುಖ್ಯ

ನಾವು ಸೇವಿಸುವ ಪ್ರೋಟೀನ್ ಅಗತ್ಯವು ಋತುಚಕ್ರ, ಗರ್ಭಧಾರಣೆ, ಋತುಬಂಧದಂತಹ ಜೀವನದ ಹಂತಗಳಲ್ಲಿ ಏರಿಳಿತಗೊಳ್ಳುತ್ತದೆ. ಇದು ನಮ್ಮ ಜೀವನಶೈಲಿಯಲ್ಲಿ ಹೆಚ್ಚು ಅವಲಂಬಿತವಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರೋಟೀನ್ ಅನ್ನು ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ನಾರಿನೊಂದಿಗೆ ಸಮತೋಲನಗೊಳಿಸಬೇಕು ಮತ್ತು ಸೇವನೆಯನ್ನು ಹೆಚ್ಚಿಸುವ ಮೊದಲು ಜೀರ್ಣಕ್ರಿಯೆಯನ್ನು ಸುಧಾರಿಸಬೇಕು. (ಏಜೆನ್ಸೀಸ್​)