ಲೈಫ್‌ಸ್ಟೈಲ್

ನಿಮ್ಮ ಮನೆಯ ಟಾಯ್ಲೆಟ್​ಗಿಂತಲೂ ಕೊಳಕು, ನೀವು ನಿತ್ಯವೂ ಬಳಸುವ ಈ 7 ವಸ್ತುಗಳು..!

ಬೆಂಗಳೂರು: ನಾವೆಲ್ಲರೂ ನಮ್ಮ ಮನೆಯನ್ನು ಹೆಚ್ಚು ಸ್ವಚ್ಛವಾಗಿಟ್ಟುಕೊಳ್ಳಲು ಇಷ್ಟಪಡುತ್ತೇವೆ. ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಚಿಕ್ಕ ಮಕ್ಕಳು ತಮಗೆ ಅರಿವಿಲ್ಲದೆಯೇ ಏನನ್ನಾದರೂ ಮುಟ್ಟುತ್ತಾರೆ ಅಥವಾ ಸುಮ್ಮನೇ ಬಾಯಿಗೆ ಹಾಕಿಕೊಳ್ಳುತ್ತಾರೆ. ಹಾಗಾಗಿ ಸ್ವಚ್ಛತೆಯು ಅಗತ್ಯವಾಗಿದ್ದು, ನಾವು ಬಳಸುವ ಈ 7 ವಸ್ತಗಳು ಕೊಳಕು ಎಂದು ಹಲವಾರು ಸಂಶೋಧನೆಗಳು ಹೇಳಿವೆ.

ಸಹಜವಾಗಿ ಕೊಳಕು ವಸ್ತುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಮಾರ್ಟ್​ಫೋನ್,​​ ವಿವಿಧ ಅಧ್ಯಯನಗಳ ಪ್ರಕಾರ ಟಾಯ್ಲೆಟ್ ಸೀಟ್‌ಗಿಂತ ಸರಾಸರಿ 10 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳ ನೆಲೆಯಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ನೀವು ಯೋಚಿಸುವುದಕ್ಕಿಂತ ಹೆಚ್ಚಿನ ಸೂಕ್ಷ್ಮಾಣುಗಳನ್ನು ಆಶ್ರಯಿಸುತ್ತದೆ. ಹಾಗಾಗಿ ನಿಮ್ಮ ಫೋನ್​ನ್ನು ಆಗಾಗ ಸ್ವಚ್ಛ ಮಾಡುವುದು ಉತ್ತಮ.

ಕೀಬೋರ್ಡ್ ನೀವು ಆಗಾಗ್ಗೆ ಸ್ಪರ್ಶಿಸುವ ಮತ್ತೊಂದು ಸೂಕ್ಷ್ಮ ವಸ್ತುವಾಗಿದ್ದು, ಪ್ರತಿ ಚದರ ಇಂಚಿಗೆ 3000 ಬ್ಯಾಕ್ಟೀರಿಯಾ ಹೊಂದಿದೆ ಎಂದು ಸಂಶೋಧನೆಯೊಂದು ಕಂಡುಹಿಡಿದಿದೆ. ನಿಮ್ಮ ಕೀಬೋರ್ಡ್ ಸ್ವಚ್ಛಗೊಳಿಸಲು ಬ್ರಷ್, ವ್ಯಾಕ್ಯೂಮ್ ಕ್ಲೀನರ್​​ನ್ನು ಬಳಸಬಹುದಾಗಿದೆ.

ನಿಮ್ಮ ಕೀಬೋರ್ಡ್‌ನಂತೆಯೇ ನಿಮ್ಮ ಮೌಸ್ ಎಷ್ಟು ಕೊಳಕು ಆಗಿರಬಹುದು ಎಂಬುದದನ್ನು ನೀವೇ ಯೋಚಿಸಿ. ಹಲವು ಅಧ್ಯಯನದ ಪ್ರಕಾರ ಮೌಸ್​​ ಪ್ರತಿ ಚದರ ಇಂಚಿಗೆ 1500 ಬ್ಯಾಕ್ಟೀರಿಯಾಗಳನ್ನು ಹೊಂದಿದೆ.

ನಿಮ್ಮ ರಿಮೋಟ್ ಕಂಟ್ರೋಲ್ ಖಂಡಿತವಾಗಿಯೂ ಸೂಕ್ಷ್ಮಜೀವಿಗಳ ತಾಣವಾಗಿದ್ದು, ರಿಮೋಟ್ ಕಂಟ್ರೋಲ್ ಪ್ರತಿ ಚದರ ಇಂಚಿಗೆ 200 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಸಂಶೋಧಕರ ತಂಡವು ಕಂಡುಹಿಡಿದಿದೆ. ಇದನ್ನು ಪ್ರತಿದಿನ ಬಳಸಿದರೂ ಇದು ಅಷ್ಟೇನೂ ಸ್ವಚ್ಛವಾಗಿರುವುದಿಲ್ಲ ಎಂಬುದನ್ನು ನಿಮ್ಮ್ ರಿಮೋಟ್ ನೋಡಿ ಹೇಳಬಹುದಾಗಿದೆ.

ವಾಶ್‌ರೂಮ್ ಬಾಗಿಲಿನ ಹ್ಯಾಂಡಲ್​ ಸೂಕ್ಷ್ಮಾಣುಗಳನ್ನು ಹೊಂದಿದ್ದು, ಇವುಗಳನ್ನು ಪ್ರತಿದಿನ ಹಲವಾರು ಜನರು ಬಳಸಿದರೂ ಇವು ಬ್ಯಾಕ್ಟೀರಿಯಾಗಳನ್ನು ಹೊಂದಿದೆ.

ಜನರು ನೀರಿನ ನಲ್ಲಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಕೇವಲ ತಮ್ಮ ಸ್ವಚ್ಛತೆಗೆ ಗಮನ ಕೊಡುವ ಜನರು ನಲ್ಲಿಯ ಸ್ವಚ್ಛತೆಗೆ ಗಮನಕೊಡುವುದಿಲ್ಲ. ಹಾಗಾಗಿಯೇ ಇವು ಸಹಜವಾಗಿ ಕೊಳಕಾಗಿರುತ್ತವೆ.

ರೆಫ್ರಿಜರೇಟರ್‌ನ ಬಾಗಿಲನ್ನು ಪ್ರತಿದಿನ ಬಳಸಿದರೂ ಸಹ ಜನರು ಇದನ್ನು ಬಳಸುವ ವೇಳೆ ಕೈ ತೊಳೆಯದೇ ಹೆಚ್ಚಾಗಿ ಸ್ಪರ್ಶಿಸುತ್ತಾರೆ. ಅಧ್ಯಯನವೊಂದರ ಪ್ರಕಾರ ರೆಫ್ರಿಜರೇಟರ್ ಬಾಗಿಲು ಪ್ರತಿ ಚದರ ಇಂಚಿಗೆ 500 ಬ್ಯಾಕ್ಟೀರಿಯಾಗಳನ್ನು ಹೊಂದಿದೆ.

ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ನೀವು ಆಗಾಗ್ಗೆ ಸ್ಪರ್ಶಿಸುವ ವಸ್ತುಗಳನ್ನು ಶುಚಿಗೊಳಿಸುವುದಕ್ಕೆ ಬೇಸರಪಟ್ಟುಕೊಳ್ಳಬೇಡಿ. ಸೋಂಕುಗಳು ಮತ್ತು ಸಾಮಾನ್ಯ ಕಾಯಿಲೆಗಳಿಂದ ಇದೇ ಬ್ಯಾಕ್ಟಿರಿಯಾದಿಂದ ಹರಡಿ ನಿಮ್ಮನ್ನು ಅನರೋಗ್ಯಕ್ಕೆ ದೂಡುತ್ತವೆ. ಹಾಗಾಗಿ ಸ್ವಚ್ಛತೆ ಅತ್ಯಗತ್ಯವಾಗಿದೆ.(ಏಜೆನ್ಸೀಸ್)