Immunity-Boosting Foods for Monsoon Diet 
ಲೈಫ್‌ಸ್ಟೈಲ್

ಮುಂಗಾರಿನಲ್ಲಿ ಕಾಡುವ ವೈರಲ್​ ಜ್ವರಕ್ಕೆ ಮುಕ್ತಿ ಬೇಕಾ?; ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಈ 7 ಆಹಾರ ತಿನ್ನಿ..Immunity-Boosting Foods..Immunity-Boosting Foods

ಪ್ರಮುಖ ಮುಖ್ಯಾಂಶಗಳು

  • ಮುಂಗಾರಿನಲ್ಲಿ ಅತಿಯಾಗಿ ಕಾಡುವ ವೈರಲ್​ ಫೀವರ್​​, ಸೋಂಕುಗಳು
  • ಮಳೆಗಾಲದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋದು ಹೇಗೆ
  • ರಾಗಿ, ನುಗ್ಗೆ ಸೊಪ್ಪು, ನೆಲ್ಲಿ ಕಾಯಿ ಸೇರಿದಂತೆ 7 ಪದಾರ್ಥ ತಿನ್ನುವುದನ್ನು ರೂಢಿಸಿಕೊಳ್ಳಿ
Immunity-Boosting Foods: ಬೇಸಿಗೆಯಲ್ಲಿ  ತೀವ್ರ ಬಿಸಿಲಿನಿಂದ ಕೂಡಿದ್ದ ಪ್ರದೇಶವು, ಮಳೆಗಾಲದಲ್ಲಿ ತೇವಾಂಶ ಹಾಗೂ ಥಂಡಿ ವಾತಾವರಣಕ್ಕೆ ಬದಲಾಗುತ್ತದೆ. ಇದರಿಂದ ಸಾಮಾನ್ಯವಾಗಿ ದೇಹವು ನಾನಾ ರೀತಿಯಲ್ಲಿ ಸೋಂಕು ಹಾಗೂ ಕಾಯಿಲೆಗೆ ಒಳಗಾಗುತ್ತದೆ. ಚರ್ಮ ತುರಿಕೆ, ತಲೆ ಕೂದಲು ಜಿಗುಟಾಗುವುದು, ಡೆಂಗ್ಯೂ ಸೇರಿಂದ ತರಹೇವಾರಿ ವೈರಲ್ ಫೀವರ್​ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದರಿಂದ ನಾವು ನಮ್ಮ ದೇಹದಲ್ಲಿ ಸಂಪದ್ಭರಿತ ರೋಗ ನಿರೋಧಕ ಶಕ್ತಿಯನ್ನು ತುಂಬಿಕೊಳ್ಳಲು ಏನು ಮಾಡಬೇಕು, ಯಾವ ಆಹಾರ ನಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಎಂಬುದಕ್ಕೆ ಮಾಹಿತಿ ಈ ಲೇಖನದಲ್ಲಿ ಇದೆ.

'ಹರಿವೆ ಸೊಪ್ಪು'  ಅಥವಾ ದಂಟು

ಪಾಲಾಕ್​​ ಸೊಪ್ಪಿಗಿಂತ ಹೆಚ್ಚಿನ ಮಟ್ಟದಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ಕಬ್ಬಿಣಾಂಶ ಹೇರಳವಾಗಿರುವ ಕಾರಣ ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು  ಪ್ರಮುಖ ಪಾತ್ರ ವಹಿಸುತ್ತದೆ. ಮಳೆಗಾಲದಲ್ಲಿ ಸ್ಟಿರ್-ಫ್ರೈಸ್, ದಾಲ್ ಮತ್ತು ಸೂಪ್‌ಗಳನ್ನು ತಯಾರಿಸಲು ಉತ್ತಮ ಪದಾರ್ಥವಾಗಿದೆ. 

ಕೋಕನ್​ ಹಣ್ಣು

ಭಾರತದ ಪಶ್ಚಿಮ ಕರಾವಳಿಯಲ್ಲಿ ಬೆಳೆಯಲಾಗುವ ಕೋಕಮ್  ಜನಪ್ರಿಯ ಹಣ್ಣು. ಇದರಲ್ಲಿ  ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ  ಸಮೃದ್ಧವಾಗಿದೆ.  ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರ ಸಿಹಿ ಮಳೆಗಾಲದಲ್ಲಿ ತಿನ್ನುವ ಭಾರೀ ಆಹಾರ ಪದಾರ್ಥಗಳೊಂದಿಗೆ ಅತ್ಯುತ್ತಮ ಸಂಯೋಜನೆಯಾಗಿದೆ. ಕೋಕಮ್ ನಿಮ್ಮ ಆಹಾರಕ್ಕೆ ರುಚಿಯನ್ನು ನೀಡುವ ಹಣ್ಣು.

ಮೆಂತ್ಯೆ

ನುಗ್ಗೆ ಸೊಪ್ಪಿನಲ್ಲಿ ಔಷಧೀಯ ಗುಣವು ಹೇರಳವಾಗಿದೆ.  ಇದರಲ್ಲಿ ವಿಟಮಿನ್​ ಎ ಹಾಗೂ ಸಿ ಮತ್ತು ಕ್ಯಾಲ್ಸಿಯಂ ಅಂಶವಿದೆ. ಕಬ್ಬಿಣದಂತಹ ಪೋಷಕಾಂಶ ಇದರಲ್ಲಿ ಹೇರಳವಾಗಿದೆ. ರೋಗನಿರೋಧ ಶಕ್ತಿ ಹೆಚ್ಚು ಮಾಡಲು ಹಾಗೂ  ಉರಿಯೂತ ಕಡಿಮೆ ಮಾಡಲು ಇದು ರಾಮಬಾಣ. ಇದರಲ್ಲಿರುವ ಪ್ರೋಟೀನ್​​. ಪೊಟ್ಯತಾಸಿಯಂ ಮತ್ತು ಅಮೈನೋ ಆಮ್ಲ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಸೂಪ್,  ಎಗ್​ಬುರ್ಜಿ, ಸಾರು ಹಾಗೂ ಬೋಂಡಾ ತಯಾರಿಸಲಾಗುತ್ತದೆ.  

ಕಪ್ಪು ಬೆಳ್ಳುಳ್ಳಿ 

ಸಾಮಾನ್ಯ ಬೆಳ್ಳುಳ್ಳಿಗಿಂತ ಕಪ್ಪು ಬೆಳ್ಳುಳ್ಳಿ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನವಾಗೊಳಿಸುತ್ತದೆ. ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವ ಸಂಯುಕ್ತಗಳ ಸಮೃದ್ಧ ಮೂಲವಾಗಿರುವುದರ ಜೊತೆಗೆ, ಕಪ್ಪು ಬೆಳ್ಳುಳ್ಳಿ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತದೆ, ಇದು ದೇಹದ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. 

ಬೇಲದ ಹಣ್ಣು 

ಬೇಲದ ಹಣ್ಣಿನಲ್ಲಿ  ವಿಟಮಿನ್​ ಸಿ, ಫೈಬರ್​​​​ ಹಾಗೂ ಆಂಟಿ ಆಕ್ಸಿಡೆಂಟ್​​ ಸಮೃದ್ಧವಾಗಿದೆ. ಇದು ಬೇಸಿಗೆ ಶಾಖ ತಣಿಸಲು ಹಾಗೂ ಜೀರ್ಣಕ್ರಿಯೆಗೆ ಉತ್ತಮ ಆಯ್ಕೆ. ರೋಗನಿರೋಧಕ ಶಕ್ತಿ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. 

ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿಯಲ್ಲಿರುವ ವಿಟಮಿನ್​ ಸಿ  ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.  ಇದು ಉತ್ಕರ್ಷಣ ನಿರೋಧಕಗಗಳ ಆಗರವಾಗಿರುವ ಈ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.  ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ. ಇದರಿಂದ  ಚಟ್ನಿಗಳು, ಉಪ್ಪಿನಕಾಯಿ, ರಸ ತಯಾರಿಸಬಹುದು.

ರಾಗಿ

ರಾಗಿಯಲ್ಲಿ ಕಬ್ಬಿಣ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಗಂಜಿ, ರೊಟ್ಟಿ, ದೋಸೆ, ಮುದ್ದೆ ತಯಾರಿಸಬಹುದು. ರಾಗಿಯಿಂದ ತಯಾರಿಸಿದ ಆಹಾರವು ಮಳೆಗಾಲಕ್ಕೆ ಪರಿಪೂರ್ಣವಾಗಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಯನ್ನು ಬಲಪಡಿಸಲು ಹಲ್ಲಿನ ಆರೋಗ್ಯಕ್ಕೆ ಸಹಕಾರಿ.  ಇದರಲ್ಲಿರುವ ನಾರಿನಾಂಶ ಹಾಗೂ ಆರ್ಬೋಹೈಡ್ರೇಟ್​​​​  ಜೀರ್ಣಕ್ರಿಯೆ ಹಾಗೂ ಸಕ್ಕರೆ ಮಟ್ಟ ಏರಿಕೆಯನ್ನು ನಿಯಂತ್ರಿಸಲು ಸಹಕಾರಿ