- ಕೇರಳಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ದರೆ, ಈ ಪ್ರವಾಸಿ ಸ್ಥಳ ಬೆಸ್ಟ್ ನೋಡಿ
- ಮುನ್ನಾರ್, ವಯನಾಡು, ತೆಕ್ಕಡಿ ಗಿರಿಧಾಮಗಳನ್ನು ವೀಕ್ಷಿಸಿ
- ಫೋಟೋ ಶೂಟ್, ತಂಪಾದ ವಾತಾವರಣ ಆಹ್ವಾದಿಸಲು ಬೆಸ್ಟ್ ಪ್ಲೇಸ್
Kerala Hill Stations: ತಂಪಾದ ಹಸಿರು ಗಿರಿಧಾಮಗಳು, ಅರಬ್ಬೀ ಸಮುದ್ರ ಸೇರಿದಂತೆ ಶ್ರೀಮಂತ ಹಸಿರು ವಾತಾವರಣಕ್ಕೆ ಕೇರಳ ಪ್ರಖ್ಯಾತಿ. ಇದನ್ನು ದೇವರ ನಾಡು ಎಂತಲೂ ಕರೆಯಲಾಗುತ್ತದೆ. ಇಲ್ಲಿರುವ ಚಹಾ ತೋಟ, ಜಲಪಾತ, ತರಹೇವಾರಿ ವನ್ಯ ಜೀವಿಗಳು, ಕಾಡು ಮನಸ್ಸಿಗೆ ಮುದ ನೀಡುವಂತದ್ದು.
ನಿತ್ಯವೂ ಕೆಲಸದ ಮಧ್ಯೆ ಒತ್ತಡ, ಟ್ರಾಫಿಕ್ ಸಮಸ್ಯೆಯಿಂದ ಬೇಸರವಾಗಿ, ಹೊಸದೇನೋ ಬೇಕು ಎನಿಸುತ್ತಿದ್ದರೆ, ಕೇರಳಕ್ಕೆ ಭೇಟಿ ನೀಡಿ. ಇಲ್ಲಿರುವ ಶಾಂತ ವಾತಾವರಣ, ಕಣ್ಣಿಗೆ ಅಚ್ಚರಿ ಎನಿಸುವ ಪ್ರಕೃತಿಯ ಸೊಬಗು ನೀವು ಬೇರೆಯದ್ದೇ ಲೋಕಕ್ಕೆ ಬಂದಿದ್ದೀರ ಎನ್ನುವ ಭಾವನೆಯನ್ನು ಮೂಡಿಸುತ್ತದೆ.
ನೀವು ವೀಕೆಂಡ್ನಲ್ಲಿ ಕೇರಳಕ್ಕೆ ಹೋಗಲು ಬಯಸಿದ್ದೀರಿ ಎಂದರೆ, ಅಲ್ಲಿನ ಹವಾಮಾನದ ಬಗ್ಗೆ ಮಾಹಿತಿ ಪಡೆದು ತೆರಳಿ. ಇದು ಮಾನ್ಸೂನ್ ಕಾಲವಾದ ಕಾರಣ ಅತಿ ಹೆಚ್ಚು ಮಳೆಯಿಂದ ಸಮಸ್ಯೆ ಸಿಲುಕಬಹುದು. ಈ ಮಧ್ಯೆಯು ಮಳೆಯ ವಾತಾವರಣವನ್ನು ಕಣ್ತುಂಬಿಕೊಳ್ಳಲು ಬಯಸಿದರೆ, ಈ ಪ್ರದೇಶಕ್ಕೆ ಭೇಟಿ ನೀಡಿ.
ಮುನ್ನಾರ್
ಕೇರಳದ ಅತ್ಯಂತ ಪ್ರಸಿದ್ಧ ಗಿರಿಧಾಮವಾದ ಮುನ್ನಾರ್ನಲ್ಲಿ ಚಹಾ ತೋಟಗಳು, ಮಂಜಿನ ಬೆಟ್ಟಗಳಿವೆ. ಇಲ್ಲಿನ ತಂಪಾದ ವಾತಾವರಣ, ಪ್ರಕೃತಿಯ ಸೌಂದರ್ಯ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಇಲ್ಲಿನ ಚಹಾತೋಟಗಳಲ್ಲಿ ಉತ್ತಮ ಫೋಟೋ ಶೂಟ್ ಮಾಡಿಸಿಕೊಳ್ಳಬಹುದಾಗಿದೆ.
ವಯನಾಡ್
ವಯನಾಡು ಕಾಡುಗಳು, ಜಲಪಾತ, ಗುಹೆ, ವನ್ಯ ಜೀವಿಗಳಿಂದ ತುಂಬಿದ ವಾತಾವರಣವಾಗಿದೆ. ಸಾಂಸ್ಕೃತಿಕ ಪರಂಪರೆ ಮತ್ತು ಮಸಾಲೆ ಪದಾರ್ಥ ಬೆಳೆಯುವ ತೋಟಗಳಿಗೂ ಹೆಸರುವಾಸಿಯಾಗಿದೆ. ಇಲ್ಲಿ ಪ್ರವಾಸಿಗರು ಬೆಟ್ಟಗಳಿಗೆ ಚಾರಣ ಮಾಡಿ, ಗುಹೆಗಳನ್ನು ಅನ್ವೇಷಿಸಿ, ಜಲಪಾತಗಳಿಗೆ ಭೇಟಿ ನೀಡಿ ಮತ್ತು ವನ್ಯಜೀವಿಗಳನ್ನು ವೀಕ್ಷಿಸಿ ಆನಂದಿಸಬಹುದಾಗಿದೆ.
ತೆಕ್ಕಡಿ
ತೆಕ್ಕಡಿಯುವ ವನ್ಯಜೀವಿ, ಕಾಡು, ಹಚ್ಚ ಹಸರಿಗೆ ಹೆಸರುವಾಸಿ. ಇದು ಪ್ರವಾಸಿಗರಿಗೆ ತಂಪಾದ ಪರ್ವತ ಹವಾಮಾನವನ್ನು ಆನಂದಿಸುತ್ತಾ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಸಾಹಸ ಪ್ರಿಯರು ಮತ್ತು ಪ್ರಕೃತಿ ಉತ್ಸಾಹಿಗಳಿಗೆ ಸೂಕ್ತ ಸ್ಥಳವಾಗಿದೆ. ಇಲ್ಲಿ ಪ್ರವಾಸಿಗರು ದೋಣಿ ವಿಹಾರ, ಮಸಾಲೆ ತೋಟಗಳಿಗೆ ಭೇಟಿ ನೀಡಬಹುದು
ಇಡುಕ್ಕಿ ಮತ್ತು ಕೊಟ್ಟಾಯಂ ಗಡಿಯಲ್ಲಿರುವ ವಾಗಮೋನ್ ಶಾಂತ ಗಿರಿಧಾಮ. ಹುಲ್ಲುಗಾವಲುಗಳು, ಪೈನ್ ಕಾಡುಗಳು ಮತ್ತು ಮಂಜಿನ ಬೆಟ್ಟಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್, ಚಾರಣ, ಪ್ರಕೃತಿ ನಡಿಗೆ ಮತ್ತು ಪೈನ್ ಕಾಡುಗಳನ್ನು ಅನ್ವೇಷಿಸಬಹುದು.
ಪೊನ್ನುಡಿ
ಕೇರಳದ ರಾಜಧಾನಿ ತಿರುವನಂತಪುರಂಗೆ ಸಮೀಪವಿರುವ ಪೊನ್ಮುಡಿ ಆಕರ್ಷಕ ಗಿರಿಧಾಮಗಳುಳ್ಳ ಪ್ರದೇಶವಾಗಿದೆ. ಇಲ್ಲಿನ ಅಂಕುಡೊಂಕಾದ ರಸ್ತೆ, ಹಸಿರು ಬೆಟ್ಟಗಳು ಮತ್ತು ಸುಂದರವಾದ ವೀಕ್ಷಣಾ ಸ್ಥಳಗಳಿಗೆ ಹೆಸರುವಾಸಿ. ಪ್ರಕೃತಿ ಹಾದಿಗಳಲ್ಲಿ ಚಾರಣ ಮಾಡಿ, ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ.
ನೆಲ್ಲಿಯಂಪತಿ
ಕೇರಳದ ಮತ್ತೊಂದು ಪ್ರವಾಸಿ ಸ್ಥಳವೆಂದರೆ ಅದು ನೆಲ್ಲಿಯಂಪತಿ. ಇದು ಚಹಾ ತೋಟ, ಕಿತ್ತಳೆ ತೋಟ ಹಾಗೂ ಕಾಡುಗಳಿಂದ ಆವೃತವಾಗಿದೆ. ತೋಟಗಳ ಮಧ್ಯೆ ಸುತ್ತಾಡುವುದು, ಟ್ರೆಕ್ಕಿಂಗ್ ಮಾಡಬಹುದಾಗಿದೆ, (ಏಜೆನ್ಸೀಸ್).