Winter Season: ಚಳಿಗಾಲ ಆರಂಭವಾಗುತ್ತಿದ್ದಂತೆ, ನಮ್ಮ ದೇಹ, ಮನಸ್ಸು ಸ್ವಾಭಾವಿಕವಾಗಿ ಬೆಚ್ಚಗಿನ ವಾತಾವರಣ ಮತ್ತು ಪದಾರ್ಥಗಳನ್ನು ಬಯಸುತ್ತದೆ. ಚಹಾ, ಕಾಫಿ ಸೇರಿದಂತೆ ಇತರ ತಿಂಡಿಗಳತ್ತ ನಮ್ಮೆಲ್ಲರ ಚಿತ್ತ ನೆಟ್ಟಿರುತ್ತದೆ. ಈ ಸಂದರ್ಭದಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೆ ಮುಖ್ಯವಾಗಿರುತ್ತದೆ.
ಇಂತಹ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ತಂಪು ವಾತಾವರಣದಲ್ಲಿ ಆರೋಗ್ಯದಿಂದ ಇರುವ ಜೊತೆಗೆ, ನಾಲಿಗೆಗೂ ನ್ಯಾಯ ಒದಗಿಸುವ ಕೆಲ ಹಳೆಯ ಪಾಕವಿಧಾನಗಳನ್ನು ಭಾರತ ಅಳವಡಿಸಿಕೊಂಡಿದ್ದು, ಅವುಗಳು ಇಲ್ಲಿವೆ.
ಇದನ್ನೂ ಓದಿ:ಭಾರತ, ಅಫ್ಘಾನ್ ವಿರುದ್ಧ ಎರಡು ಯುದ್ಧಕ್ಕೆ ನಾವು ಸಿದ್ಧ: ಪಾಕ್ ಸಚಿವ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆ | Pakistan
1. ಮಸಾಲಾ ಚಾಯ್
ಏಲಕ್ಕಿ, ಶುಂಠಿ, ದಾಲ್ಚಿನ್ನಿ ಮತ್ತು ಲವಂಗಗಳಂತಹ ಪರಿಮಳಯುಕ್ತ ಮಸಾಲೆಗಳೊಂದಿಗೆ ಕಪ್ಪು ಚಹಾವನ್ನು ಮಿಶ್ರಣ ಮಾಡುತ್ತದೆ. ಇದು ಉಷ್ಣತೆ ಮತ್ತು ಮಸಾಲೆಗಳ ಪರಿಪೂರ್ಣ ಸಮತೋಲನವನ್ನು ಸಾಧಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರುಚಿಯನ್ನು ಹೆಚ್ಚಿಸಲು ಹಾಲು ಮತ್ತು ಬೆಲ್ಲವನ್ನು ಸೇರಿಸುವುದು ಉತ್ತಮ.
2. ಅರಿಶಿಣ ಹಾಲು
ಅರಿಶಿಣ ತಲೆ ತಲೆಮಾರುಗಳಿಂದ ಮನೆಮದ್ದಾಗಿ ಬಳಸಲ್ಪಡುತ್ತಿದೆ. ಇದನ್ನು ಬೆಚ್ಚಗಿನ ಹಾಲು ಮತ್ತು ಕರಿಮೆಣಸಿನೊಂದಿಗೆ ಬೆರೆಸಿ ಸೇವಿಸುವುದರಿಂದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಶೀತವನ್ನು ತಡೆಗಟ್ಟುತ್ತದೆ. ಉತ್ತಮ ನಿದ್ರೆಗಾಗಿ ಮಲಗುವ ಮುನ್ನ ಇದನ್ನು ಕುಡಿಯುವುದು ಉತ್ತಮ.
3. ಕಹ್ವಾ
ಕಹ್ವಾ, ಇದು ಕಾಶ್ಮೀರಿಗಳ ನೆಚ್ಚಿನ ಚಹಾ, ಕೇಸರಿ ಎಳೆಗಳು, ದಾಲ್ಚಿನ್ನಿ, ಏಲಕ್ಕಿ ಮತ್ತು ಬಾದಾಮಿಗಳಿಂದ ತಯಾರಿಸಲಾಗುವ ಈ ಪಾನೀಯವನ್ನು ಉಲ್ಲಾಸಕರ ಮತ್ತು ಪುನಶ್ಚೈತನ್ಯಕಾರಿಯಾಗಿದೆ ನೋಡಲಾಗುತ್ತದೆ. ಕಹ್ವಾ ಜೀರ್ಣಕ್ರಿಯೆಯನ್ನು ಸಹ ಸುಧಾರಿಸಿ, ಒತ್ತಡವನ್ನು ನಿವಾರಿಸುತ್ತದೆ ಮತ್ತು ಬೆಚ್ಚಗಿರಿಸುತ್ತದೆ.
4. ಬೆಲ್ಲದ ಚಹಾ
ಸಕ್ಕರೆಯನ್ನು ಬದಲು, ಬೆಲ್ಲವನ್ನು ಸೇರಿಸುವುದರಿಂದ ಆಹ್ಲಾದಕರ ಮತ್ತು ಪೋಷಣೆ ನೀಡುತ್ತದೆ. ಬೆಲ್ಲವು ಉಷ್ಣತೆಯನ್ನು ಸಹ ನೀಡುವುದರಿಂದ, ಚಯಾಪಚಯ ಕ್ರಿಯೆಯನ್ನು ಸುಧಾರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹಿಂದಿನ ಕಾಲದಲ್ಲಿ ಅಜ್ಜಿಯರ ನೆಚ್ಚಿನ ಪಾನೀಯವಾಗಿತ್ತು.
5. ಬಜ್ರಾ ರಾಬ್
ರಾಜಸ್ಥಾನದ ಸಾಂಪ್ರದಾಯಿಕ ಪಾನೀಯವಾದ ಬಜ್ರಾ ರಾಬ್, ರಾಗಿ ಹಿಟ್ಟು, ತುಪ್ಪ, ಬೆಲ್ಲ ಮತ್ತು ಕರಿಮೆಣಸನ್ನು ಒಳಗೊಂಡಿದ್ದು. ಚಳಿಗಾಲದ ರಾತ್ರಿಗಳಿಗೆ ಇದು ಪರಿಪೂರ್ಣ ಪದಾರ್ಥ ಎಂದರೆ ತಪ್ಪಾಗುವುದಿಲ್ಲ. ಕಬ್ಬಿಣ ಮತ್ತು ಕೊಬ್ಬಿನ ಅಂಶವಿರುವುದರಿಂದ ಆರೋಗ್ಯಕ್ಕೆ ಸಹಕಾರಿ.
6. ಕಾಂಜಿ
ಉತ್ತರ ಭಾರತದ ಈ ಪ್ರಸಿದ್ಧ ಪಾನೀಯವು ಕ್ಯಾರೆಟ್, ಸಾಸಿವೆ ಮತ್ತು ಬೀಟ್‌ರೂಟ್ ಬಳಸಿ ತಯಾರಿಸಲಾಗುತ್ತದೆ. ಮಸಾಲೆ ಪದಾರ್ಥಗಳನ್ನೊಳಗೊಂಡಿರುವ ಕಾಂಜಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಚಳಿಗಾಲದಲ್ಲಿ ಚಯಾಪಚಯ ಕ್ರಿಯೆ ನಿಧಾನವಾದಾಗ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.