Fatty liver symptoms in eyes 
ಲೈಫ್‌ಸ್ಟೈಲ್

ಕಣ್ಣಿನಲ್ಲಿ ಕಾಣಿಸುವ ಈ ಐದು ಲಕ್ಷಣವನ್ನು ನಿರ್ಲಕ್ಷ್ಯಿಸಬೇಡಿ; ಇದು ಫ್ಯಾಟಿ ಲಿವರ್​ನ ಮುನ್ಸೂಚನೆ..Fatty Liver Symptoms

ಪ್ರಮುಖ ಮುಖ್ಯಾಂಶಗಳು

  • ಕಣ್ಣುಗಳನ್ನು ನೋಡಿಯೇ ಪತ್ತೆ ಹಚ್ಚಬಹುದು ಫ್ಯಾಟಿ ಲಿವರ್ ಸಮಸ್ಯೆ
  • ಕಣ್ಣಿನಲ್ಲಿ ಕಾಣಿಸುವ ಐದು ಲಕ್ಷಣಗಳ ಮೂಲಕ ಫ್ಯಾಟಿ ಲಿವರ್ ಕಾಯಿಲೆಯ ಬಗ್ಗೆ ತಿಳಿಯಿರಿ
  • ಕಣ್ಣಿನ ಬಿಳಿ ಭಾಗ ಹಳದಿಯಾಗುವುದು ಯಕೃತ್ತಿನ ಕಾರ್ಯಕ್ಷಮತೆ ಕಡಿಮೆಯಾದ ಬಗ್ಗೆ ಮುನ್ಸೂಚನೆ
  • ಕಣ್ಣಿನ ರೆಪ್ಪೆ ಒಣಗುವುದು, ಉರಿಯುವುದು, ನರ ಎದ್ದು ಕಾಣುವುದು ಎಲ್ಲವೂ ಫ್ಯಾಟಿ ಲಿವರ್​​ನ ಸೂಚನೆಯಾಗಿದೆ
Fatty liver symptoms in eyes: ಯಕೃತ್ತು ದೇಹದ ಪ್ರಮುಖವಾದ ಅಂಗ ಇದು ದೇಹಕ್ಕೆ ಸೇರುವ ವಿಷಕಾರಿ ಪದಾರ್ಥವನ್ನು ಫಿಲ್ಟರ್ ಮಾಡಿ ಹೊರಹಾಕುತ್ತದೆ. ಜೊತೆಗೆ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶವುಳ್ಳ ಆಹಾರ ನೀಡಲು ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಂಗವಾಗಿದೆ. ಆದರೆ, ಇದರ ಸರಿಯಾದ ಆರೈಕೆ ಇಲ್ಲದೆ ಹಲವರು ಫ್ಯಾಟಿ ಲಿವರ್​ ಎನ್ನುವ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿರುವ ಶೇ.38.6ರಷ್ಟು ಜನರು ಇದರಿಂದ ಬಳಲುತ್ತಿದ್ದಾರೆ. ಯಕೃತ್ತಿನಲ್ಲಿ ಶೇಖರಣೆಯಾಗುವ ಕೊಬ್ಬಿನ ಬಗ್ಗೆ ಕಣ್ಣು ನೀಡುವ ಮುನ್ಸೂಚನೆ ಪ್ರಕಾರ ಹೇಗೆ ತಿಳಿದುಕೊಳ್ಳುವುದು ಎನ್ನುವದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಇಂಟರ್ನ್ಯಾಷನಲ್ ಜರ್ನಲ್ ಆಫ್ ಹೆಪಟಾಲಜಿ ರಿಸರ್ಚ್ ಪ್ರಕಾರ ಯಕೃತ್ತಿನಲ್ಲಿ ಸಂಗ್ರಹಣೆಯಾಗುವ ಫ್ಯಾಟಿ ಲಿವರ್​ ಬಗ್ಗೆ ಯಾವುದೇ ಆರಂಭಿಕವಾಗಿ ಯಾವುದೇ ಮುನ್ಸೂಚನೆ ಸಿಗೋದಿಲ್ಲ. ಹಾಗಾಗಿ ಇದನ್ನು ಸೈಲೆಂಟ್​ ಕಿಲ್ಲರ್​ ಪ್ರಕ್ರಿಯೆ ಎಂತಲೂ ಕರೆಯಲಾಗುತ್ತದೆ. ಆದರೆ, ನಾವು ನಮ್ಮ ಕಣ್ಣುಗಳಲ್ಲಿ ಕಾಣಿಸಿಕೊಳ್ಳುವ 5 ಪ್ರಮುಖ ಲಕ್ಷಣಗಳ ಮೂಲಕ ಫ್ಯಾಟಿ ಲಿವರ್​​ ಸಮಸ್ಯೆ ಪತ್ತೆ ಹಚ್ಚಬಹುದು.

ಕಣ್ಣುಗಳು ಹಳದಿಯಾಗುವುದು ಮೊದಲ ಮುನ್ಸೂಚನೆ

ಫ್ಯಾಟಿ ಲಿವರ್​ ಸಮಸ್ಯೆ ತೀವ್ರವಾದಾಗ ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸದೆ ದೇಹದಲ್ಲಿ ಬಿಲಿರುಬಿನ್ ಎಂಬ ಅಂಶವು ಅಧಿಕವಾಗಿ ಶೇಖರಣೆಯಾಗಿ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಾಮಾಲೆ ಕೂಡ ಯಕೃತ್ತಿನ ಸಮಸ್ಯೆ ಬಗ್ಗೆ ಮಾಹಿತಿ ಕೊಡುವ ಸೂಚನೆಯಾಗಿದೆ.

ಕಣ್ಣಿನ ರೆಪ್ಪೆ ಸುತ್ತ ಕಾಣಿಸಿಕೊಳ್ಳುವ ಕಪ್ಪು

ನಮ್ಮ ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವ ಸಮಯದಲ್ಲಿ ನೀವು ವಿಶ್ರಾಂತಿ ಪಡೆದರೂ ಸಹ ಕಣ್ಣಿನ ಸುತ್ತ ಕಪ್ಪಾಗಿ ಇರುತ್ತದೆ. ಇದನ್ನು ಕಂಡರೆ ನಿರ್ಲಕ್ಷ್ಯಿಸಬೇಡಿ ಎನ್ನುತ್ತಾರೆ ವೈದ್ಯರು.

ಕಣ್ಣುಗಳು ಒಣಗಿದ ಭಾವನೆ

ಯಕೃತ್ತಿನ ಆರೋಗ್ಯ ಹದಗೆಟ್ಟಾಗ ದೇಹವು ಪೋಷಕಾಂಶವನ್ನು ಹೀರಿಕೊಳ್ಳುವುದು ಕಡಿಮೆಯಾಗುತ್ತದೆ. ಇದು ದೇಹದಲ್ಲಿ ತೇವಾಂಶದ ಕೊರತೆಯನ್ನು ಉಂಡು ಮಾಡುತ್ತದೆ. ಇದರಿಂದ ಕಣ್ಣು ಒಣಗಿದಂತೆ ಭಾಸವಾಗಿ ಉರಿಯಲು ಕಾರಣವಾಗುತ್ತದೆ. ಫ್ಯಾಟಿಲಿವರ್​ಗೆ ಇದು ಒಂದು ಮುನ್ಸೂಚನೆ.

ಕಣ್ಣಿನ ಸುತ್ತ ನರ ಕಾಣುವುದು

ಲಿವರ್​ ಕಾರ್ಯಕ್ಷಮತೆ ಕಡಿಮೆಯಾದಾಗ ದೇಹದಲ್ಲಿ ಹಾರ್ಮೋನ್​ಗಳು ಸಮತೋಲಮ ತಪ್ಪಿ ಇದರಿಂದ ಕಣ್ಣಿ ಸುತ್ತಲಿನ ಚರ್ಮದಲ್ಲಿ ನರವು ಕೆಂಪಾಗಿ ಕಾಣಿಸಿಕೊಳ್ಳುತ್ತದೆ.

ಕಣ್ಣು ಮುಸುಕಾಗುವುದು, ಊತ

ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗುವುದರಿಂದ ಕಣ್ಣುಗಳ ಕೆಳಗೆ ಊತ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ವಿಷಕಾರಿ ಅಂಶ ಹೆಚ್ಚಾಗುವುದರಿಂದ ಕಣ್ಣು ಮಂಜಾಗುವಂತೆ, ಮಸುಕಾದಂತೆ ಕಾಣಿಸುತ್ತದೆ ಎನ್ನಲಾಗಿದೆ, (ಏಜೆನ್ಸೀಸ್).