ಲೈಫ್‌ಸ್ಟೈಲ್

ನವೆಂಬರ್‌ನಲ್ಲಿ ಜನಿಸಿದ ಮಕ್ಕಳು ತುಂಬಾನೆ ಸ್ಪೆಷಲ್; ಇವರ ವಿಶೇಷ ಗುಣಗಳೇನು ಗೊತ್ತಾ?.. November Born

  • ನವೆಂಬರ್‌ನಲ್ಲಿ ಹುಟ್ಟಿದ ಮಕ್ಕಳಲ್ಲಿ ಇರುತ್ತೆ ಅಲ್ಟಿಮೇಟ್ ಕ್ವಾಲಿಟೀಸ್!

  • ಅಕ್ಟೋಬರ್ 23 ರಿಂದ ನವೆಂಬರ್ 21 ರವರೆಗೆ ವೃಶ್ಚಿಕ ರಾಶಿಗೆ ಸೇರಿದವರು

  • ಕ್ರೀಡೆ ಮತ್ತು ಫಿಟ್‌ನೆಸ್‌ನಲ್ಲಿ ಹೆಚ್ಚು ಆಸಕ್ತಿ, ನಂಬಿಕೆಗೆ ಎಂದು ಮೋಸ ಮಾಡದವರು

5 outstanding traits of November born kids: ನವೆಂಬರ್‌ನಲ್ಲಿ ಜನಿಸಿದವರು ತುಂಬಾ ಸ್ಪೆಷಲ್! ಪಂಡಿತ್ ನೆಹರು, ಇಂದಿರಾ ಗಾಂಧಿ, ಶಾರುಖ್ ಖಾನ್, ಐಶ್ವರ್ಯ ರೈ, ಕಮಲ್ ಹಾಸನ್, ವಿರಾಟ್ ಕೊಹ್ಲಿ, ಅನುಷ್ಕಾ ಶೆಟ್ಟಿ, ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ದಿಗ್ಗಜರು ಈ ತಿಂಗಳಿನಲ್ಲಿ ಹುಟ್ಟಿದ್ದಾರೆ. ಹಾಗಿದ್ರೆ ನವೆಂಬರ್‌ನಲ್ಲಿ ಹುಟ್ಟಿದವರು ಯಾಕೆ ಇಷ್ಟೊಂದು ಸ್ಪೆಷಲ್? ಅವರಲ್ಲಿರುವ ವಿಶೇಷ ಗುಣಗಳೇನು? ಇಲ್ಲಿದೆ ನೋಡಿ.

ಯಾವ ರಾಶಿಗೆ ಸೇರುತ್ತಾರೆ?

ನವೆಂಬರ್‌ನಲ್ಲಿ ಜನಿಸಿದವರ ರಾಶಿ ವೃಶ್ಚಿಕ ರಾಶಿ ಅಥವಾ ಧನು ರಾಶಿಯವರಾಗಿರುತ್ತಾರೆ. ಅಕ್ಟೋಬರ್​ 23ರಿಂದ ನವೆಂಬರ್ 21 ರ ನಡುವೆ ಜನಿಸಿದವರು ವೃಶ್ಚಿಕ ರಾಶಿಯವರಾದರೆ, ಉಳಿದವರು ಧನು ರಾಶಿಗೆ ಸೇರುತ್ತಾರೆ.

  • ಗುಣ ಲಕ್ಷಣವೇನು?

ಕ್ರೀಡೆಯೇ ಬಗ್ಗೆ ಹೆಚ್ಚು ಒಲವು

ನವೆಂಬರ್​​ನಲ್ಲಿ ಜನಿಸಿದ ಮಕ್ಕಳಿಗೆ ಕ್ರೀಡೆಯೆಂದರೆ ಬಹಳ ಪ್ರೀತಿ. ಉತ್ತಮ ದೇಹದಾರ್ಢ್ಯ. ಚಟುವಟಿಕೆಗಳ ಮೇಲಿನ ಒಲವು ಮತ್ತು ಒಟ್ಟಾರೆ ಫಿಟ್‌ನೆಸ್ ಕುರಿತಾದ ಉತ್ಸಾಹ ಅವರಲ್ಲಿ ಹೆಚ್ಚೇ ಇರುತ್ತದೆ. ಕ್ರಿಕೆಟ್ ಅಥವಾ ಫುಟ್‌ಬಾಲ್ ಯಾವುದೇ ಆಗಿರಲಿ, ಕ್ರೀಡೆಯಲ್ಲಿ ವೃತ್ತಿಜೀವನ ಮುಂದುವರಿಸಲು ಆಸಕ್ತಿ ಇದ್ದರೆ ಅವರನ್ನು ಪ್ರೋತ್ಸಾಹಿಸಿ.

ಆರೋಗ್ಯಕ್ಕೆ ಒತ್ತು

ನವೆಂಬರ್​ನಲ್ಲಿ ಜನಿಸಿದ ಮಕ್ಕಳಿಗೆ ಆರೋಗ್ಯದ ಮೇಲೆ ಕಾಳಜಿ ಹೆಚ್ಚು. ಫಿಟ್​ನೆಸ್​​ಗಾಗಿ ಏನನ್ನು ಬೇಕಾದರೂ ಮಾಡುತ್ತಾರೆ. ಜನಿಸಿದ ಮಕ್ಕಳು ಆರೋಗ್ಯಕರ ಅಭ್ಯಾಸಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಿತ್ಯ ಸ್ಯಾನಿಟೈಸರ್ ಅಥವಾ ಟಿಶ್ಯೂ ಪೇಪರ್ ಕ್ಯಾರಿ ಮಾಡುತ್ತಾರೆ.

ನಂಬಿಕಸ್ಥರು

ನವೆಂಬರ್​ನಲ್ಲಿ ಜನಿಸಿದ ಮಕ್ಕಳನ್ನು ನೀವು ಕಣ್ಮುಚ್ಚಿ ನಂಬಬಹುದು. ಅವರ ನಿಷ್ಠೆಯ ಬಗ್ಗೆ ಸಂದೇಹಪಡಬೇಡಿ. ಇವರು ನಂಬಿಕೆಗೆ ಅರ್ಹರಾಗಿದ್ದು, ನಿಮ್ಮೊಂದಿಗೆ ಇರಲು ಯಾವುದೇ ಮಟ್ಟಕ್ಕೂ ಹೋಗಬಲ್ಲರು. ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ, ನವೆಂಬರ್‌ನಲ್ಲಿ ಹುಟ್ಟಿದ ಸ್ನೇಹಿತರು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.

ಆಕರ್ಷಕ ರೂಪವುಳ್ಳವರು

ನವೆಂಬರ್​ನಲ್ಲಿ ಜನಿಸಿದವರು ನೋಡಲು ಆಕರ್ಷಕವಾಗಿರುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಬೆಂಬಲವಾಗಿ ಹಲವಾರು ಉದಾಹರಣೆಗಳಿವೆ. ಕೇವಲ ಬಾಹ್ಯ ಸೌಂದರ್ಯ ಮಾತ್ರವಲ್ಲದೆ, ಇವರ ವ್ಯಕ್ತಿತ್ವದಲ್ಲಿ ಜನರನ್ನ ಸೆಳೆಯುವ ಒಂದು ಬೆಚ್ಚಗಿನ ಗುಣವಿರುತ್ತದೆ. ಇವರು ಎಲ್ಲಿಗೆ ಹೋದರೂ ಹೆಚ್ಚಿನ ಗಮನ ಸೆಳೆದು ಕೇಂದ್ರ ಬಿಂದುವಾಗುತ್ತಾರೆ

ರೂಲ್ಸ್​​ಗಳನ್ನು ಗೌರವಿಸಿ, ಪಾಲಿಸುತ್ತಾರೆ

ನವೆಂಬರ್‌ನಲ್ಲಿ ಜನಿಸಿದವರು ಎಂದಿಗೂ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಇವರು ನಿಯಮಗಳನ್ನು ಗೌರವಿಸುತ್ತಾರೆ ಮತ್ತು ಏನೇ ಆದರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಈ ಗುಣವು ಹೆಚ್ಚು ಮೆಚ್ಚಿಕೊಳ್ಳುವಂತಿದ್ದರೂ, ಕೆಲವೊಮ್ಮೆ ಇದರಿಂದ ಅವರಿಗೆ ತೊಂದರೆಗಳೂ ಎದುರಾಗಬಹುದು, (ಏಜೆನ್ಸೀಸ್).