European-Style Destinations 
ಲೈಫ್‌ಸ್ಟೈಲ್

ನೀವು ನೋಡಲೇ ಬೇಕಾದ ಭಾರತದಲ್ಲಿರುವ ಐದು ಯೂರೋಪಿಯನ್​ ಶೈಲಿಯ ಪ್ರವಾಸಿ ತಾಣಗಳಿವು..European-Style Destinations

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿದೆ ಯೂರೋಪಿಯನ್​ ಮಾದರಿಯ ಪ್ರವಾಸಿ ತಾಣಗಳು
  • ಕೂರ್ಗ್​, ಶಿಲ್ಲಾಂಗ್​​​, ಕೊಚ್ಚಿ, ಪುದಚೇರಿಗೆ ಒಮ್ಮೆ ಭೇಟಿ ನೀಡಿ
  • ಪುದುಚೇರಿಯಲ್ಲಿ ಫ್ರಾನ್ಸ್​ ಮಾದರಿಯಾ ಬೀದಿಗಳು, ಮನೆಗಳು ಇನ್ನೂ ಇವೆ
European-Style Destinations: 2026ರ ಶೈಕ್ಷಣಿಕ ವರ್ಷ ಆರಂಭವಾಗೋಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಜೂನ್​​​ಗೆ ಮಕ್ಕಳು ಶಾಲಾ-ಕಾಲೇಜಿಗೆ ತರಳುವ ಮುನ್ನ ಅಥವಾ ಮಳೆಗಾಲ ಶುರುವಾಗುವ ಮುನ್ನ ಪ್ರವಾಸಕ್ಕೆ ಹೋಗಬೇಕು ಎಂದು ಕಾಯುತ್ತಿರುವವರು ಒಂದು ಕಡೆಯಾದರೆ, ವಿದೇಶಕ್ಕೆ ಪ್ರವಾಸ ಹೋಗ್ಬೇಕು ಎಂದು ಮಿಸುಕಾಡೋರು ಮತ್ತೊಂದು ಕಡೆ. ಆದರೆ, ಈ ಚಿಂತೆ ಬಿಡಿ ಈ ಬಾರಿ ಯೂರೋಪಿಯನ್​ ಶೈಲಿಯ ಪ್ರವಾಸಿ ತಾಣಗಳನ್ನು ಭಾರತದಲ್ಲೇ ನೋಡುವ ಪ್ಲ್ಯಾನ್​ ಮಾಡಿಕೊಳ್ಳಿ.
ಸಾಮಾನ್ಯವಾಗಿ ಯೂರೋಪ್​ನ ವಾತಾವರಣವು ಜನರನ್ನು ಮೋಡಿ ಮಾಡುತ್ತದೆ. ಅಲ್ಲಿನ ಬೆಟ್ಟ, ಗುಡ್ಡ, ಬೀಚ್​​​, ಶಾಪಿಂಗ್​​ ಸ್ಟ್ರೀಟ್​ಗಳು, ಕಟ್ಟಡಗಳ ಶೈಲಿ, ಆಹಾರ, ಸಂಸ್ಕೃತಿ, ಇಲ್ಲಿನ ಇತಿಹಾಸ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ. ಯೂರೋಪ್​ಗೆ ಹಣ ಖರ್ಚು ಮಾಡಲು ಸಾಧ್ಯವಾಗದೇ ಹೋದರೆ, ಭಾರತದಲ್ಲೇ ಅಲ್ಲಿನ ​​ ಶೈಲಿ ಹೋಲುವ ಪ್ರವಾಸಿ ತಾಣಗಳನ್ನು ನೋಡಬಹುದು. ಅವು ಯಾವುವು, ಎಲ್ಲಿವೆ ಇದನ್ನು ಯುರೋಪಿಯನ್​ ಪ್ರದೇಶಕ್ಕೆ ಹೋಲಿಕೆ ಮಾಡೋದಾದ್ರು ಯಾಕೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಉತ್ತರಾಖಂಡದಲ್ಲಿರುವ ಔಲಿ

ಔಲಿಯನ್ನು ಉತ್ತರಾಖಂಡದಲ್ಲಿರುವ ಸ್ವಿಜರ್ಲೆಂಡ್​ಗೆ ಹೋಲಿಕೆ ಮಾಡಲಾಗುತ್ತದೆ. ಇಲ್ಲಿ ಎತ್ತರದ ಪರ್ವತ, ಹಿಮದಿಂದ ಆವೃತವಾದ ಇಳಿಜಾರು, ಚಳಿಗಾಲದ ಕ್ರೀಡಾ ಆಕರ್ಷಣೆಯು ಈ ಹೋಲಿಕೆಗೆ ಕಾರಣವಾಗಿದೆ. ಗರ್ವಾಲ್​ ಹಿಮಾಲಯದಲ್ಲಿ ನೆಲೆಸಿರುವ ಇದು ಸ್ಕೀಯಿಂಗ್​​ಗಳಲ್ಲಿ ಒಂದು. ಪರ್ವತದ ಗಾಳಿ, ಹಿಮ ಮತ್ತು ಇಳಿಜಾರಿನಿಂದ ಕೂಡಿದ ಈ ಪ್ರದೇಶಕ್ಕೆ ಚಳಿಗಾಲ ಮತ್ತು ಬೇಸಿಗೆಯಲ್ಲೂ ಭೇಟಿ ನೀಡಬಹುದಾಗಿದೆ.

ಪುದುಚೇರಿಯಲ್ಲಿದೆ ಪುಟ್ಟ ಫ್ರಾನ್ಸ್

ಪುದುಚೇರಿಯಲ್ಲಿನ ಒಂದು ಪುಟ್ಟ ಜಾಗವನ್ನು ಪುಟ್ಟ ಫ್ರಾನ್ಸ್​ ಎಂದು ಕರೆಯಲಾಗುತ್ತದೆ. ಇದು ಭಾರತದ ಆಗ್ನೇಯ ಕರಾವಳಿಯಲ್ಲಿದ್ದು ದೀರ್ಘ ಕಾಲದವರೆಗೂ ಫ್ರೆಂಚ್​​​ ಆಳ್ವಿಕೆಯಲ್ಲಿತ್ತು. 1954ರಲ್ಲಿ ಅಧಿಕೃತವಾಗಿ ಪುದುಚೇರಿಯು ಭಾರತದ ಭಾಗವಾಯಿತು. ಹೀಗಾಗಿ ಇಲ್ಲಿ ಕಲೆ, ವಾಸ್ತುಶಿಲ್ಪ, ಸಂಸ್ಕೃತಿಯಲ್ಲಿ ಫ್ರಾನ್ಸ್​​ನ ಪ್ರಭಾವವಿರುವುದು ಕಾಣಬಹುದು. ಇಲ್ಲಿನ ಬೌಗೆನ್ವಿಲ್ಲಾ ಬೀದಿ, ಕೆಫೆ, ಚರ್ಚು, ಕಡಲ ತೀರವು ಫ್ರಾನ್ಸನಲ್ಲೇ ಇದ್ದೇವೆ ಎನ್ನುವ ಭಾಸ ಮೂಡಿಸುತ್ತದೆ.

ಸ್ಕಾಟ್ಲೆಂಡ್ ಎನಿಸುವ ಶಿಲ್ಲಾಂಗ್​​

ಭಾರತದ ಮೇಘಾಲಯದಲ್ಲಿರುವ ಪೂರ್ವದ ಶಿಲ್ಲಾಂಗ್​ ಅನ್ನು ಸ್ಕಾಟ್ಲೆಂಡ್​ ಎಂದು ಕರೆಯಲಾಗುತ್ತದೆ. ಇದು ಬೆಟ್ಟ, ಹಸಿರು ಪರ್ವತ, ಜಲಪಾತ, ವಾಸ್ತುಶಿಲ್ಪ, ರೋಮಾಂಚಕ ಸ್ಥಳೀಯ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಉಮಿಯಮ್ ಸರೋವರ, ಎಲಿಫೆಂಟ್​ ಜಲಪಾತ ಹಾಗೂ ಎತ್ತರ ಬೆಟ್ಟಗಳನ್ನು ಕಣ್ಮನ ಸೆಳೆಯುತ್ತದೆ.

ವೆನಿಸ್​​ ಎನಿಸುವ ಕೊಚ್ಚಿ

ಕೇರಳದ ಕೊಚ್ಚಿಯ ಹಿನ್ನೀರಿನ ಮೋಡಿಗೆ ಇದನ್ನು ವೆನಿಸ್​ ಎಂದು ಕರೆಯುತ್ತಾರೆ. ಚೀನಿ ಮೀನುಗಾರಿಕಾ ಬಲೆ, ವಸಾಹತು ಶಾಹಿಯ ಕಟ್ಟಡಗಳು, ಹಿನ್ನೀರಿನ ಮಾರ್ಗ, ಹಳಿಗಳು, ಕಾಲುವೆಗಳು, ಪ್ರಸಿದ್ಧ ಚರ್ಚ್​ಗಳು ಪ್ರಸಿದ್ಧವಾಗಿದೆ. ಮಟ್ಟಂಚೇರಿಯ ಅರಮನೆಯನ್ನು ಡಚ್​​​ ಅರಮನೆ ಎಂತಲೂ ಕರೆಯಲಾಗುತ್ತಿದ್ದು, ಇಲ್ಲಿ ಸುಂದರ ವರ್ಣ ಚಿತ್ರಗಳಿವೆ. ಯಹೂದಿಗಳ ಸಿನಗಾಗ್​ ಮರೈನ್​ ಡ್ರೈವ್​​​​ ಇಲ್ಲಿ ನೋಡಬಹುದಾದ ಸ್ಥಳಗಳು.

ಕೂರ್ಗ್​​ ಭಾರತದ ಮತ್ತೊಂದು ಸ್ಕಾಟ್ಲೆಂಡ್

ಕೊಡಗನ್ನು ಭಾರತದ ಸ್ಕಾಟ್ಲೆಂಡ್​ ಎಮದು ಕರೆಯಲಾಗುತ್ತದೆ. ಇಲ್ಲಿನ ಮಂಜಿನ ಕಣಿವೆಗಳುಲ, ಕಾಫಿ ತೋಟಗಳು, ಕಾಡುಗಳು ಪರ್ಸಿದ್ಧ. ಮಡಿಕೇರಿಯ ಐತಿಹಾಸಿಕ ಕೋಟೆ, ಅಬ್ಬೆ ಜಲಪಾತ, ರಾಜಾ ಸೀಟ್​​​, ದುಬಾರೆ ಆನೆ ಶಿಬಿರ, ಬೈಲಕೊಪ್ಪ, ತಲಕಾವೇರಿ ಮೋಡಿ ಮಾಡುವಂತಹ ಪ್ರವಾಸಿ ತಾಣವಾಗಿದೆ, (ಏಜೆನ್ಸೀಸ್).