Ancient Indian Beauty Secrets 
ಲೈಫ್‌ಸ್ಟೈಲ್

ರಾಣಿಯರ ಸೌಂದರ್ಯದ ಸೀಕ್ರೇಟ್​ ಹೀಗಿತ್ತು; ನೈಸರ್ಗಿಕ ವಸ್ತುಗಳಿಂದ ಮುಖದ ಹೊಳಪು ಹೆಚ್ಚಿಸಲು ಹೀಗೆ ಮಾಡಿ.. Glowing Skin

ಪ್ರಮುಖ ಮುಖ್ಯಾಂಶಗಳು

  • ದುಬಾರಿ ಕ್ರೀಂ ಬಳಕೆ ಮಾಡೋದು ಬಿಡಿ ರಾಣಿಯರ ಕಾಲದ ಈ ಬ್ಯೂಟಿ ಸೀಕ್ರೇಟ್​​ ಒಮ್ಮೆ ನೋಡಿ
  • ಕುಂಕುಮಾದಿ ತೈಲ, ರೋಸ್​ ವಾಟರ್​​, ಅರಿಶಿನ ಇವೇ ಅವರ ನೈಸರ್ಗಿಕ ಚರ್ಮ ಒಳಪಿಗೆ ಕಾರಣ
  • ಚರ್ಮದ ಸೋಂಕು, ಸಮಸ್ಯೆಯಿಂದ ದೂರ ಉಳಿಯಲು ಆಯುರ್ವೇದದ ವಸ್ತು ಬೆಸ್ಟ್
Ancient Indian Beauty Secrets: ಈ ಆಧುನಿಕ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಭಾರಿ ಬದಲಾವಣೆಗಳಾಗುತ್ತಿವೆ. ಕೆನ್ನೆಗೊಂದು, ಹಣೆಗೊಂದು, ಮೂಗಿಗೆ ಹಾಗೂ ಕತ್ತಿಗೆ ಬೇರೆ ಬೇರೆ ಕ್ರೀಮ್​ಗಳನ್ನು ಬಳಕೆಗೆ ತರಲಾಗುತ್ತಿದೆ. ಸನ್​ಸ್ಕ್ರೀನ್​, ಸಿರಮ್​​​, ಬಾಡಿ ಲೋಷನ್​ ಅಬ್ಬಬ್ಬಾ ಒಂದಾ, ಎರಡಾ ವೆರೈಟಿ ಲೋಷನ್​ಗಳು ದಿನದಿಂದ ದಿನಕ್ಕೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಆದರೆ, ರಾಣಿಯರ ಕಾಲದಲ್ಲಿ ಇದ್ಯಾವುದು ಇರಲಿಲ್ಲ. ಅವರು ಸಾಮಾನ್ಯವಾಗಿ, ನೈಸರ್ಗಿಕ ವಸ್ತುವನ್ನು ಬಳಕೆ ಮಾಡುತ್ತಿದ್ದರು. ಇದರಿಂದ ಚರ್ಮದ ಮೇಲೆ ಪರಿಣಾಮವೂ ಬೀರೋದಿಲ್ಲ. ಹಾಗಾದ್ರೆ ರಾಣಿಯರ ಸೌಂದರ್ಯ ಸೀಕ್ರೇಟ್​ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಕುಂಕುಮಾದಿ ತೈಲ

ಕುಂಕುಮಾದಿ ತೈಲ ಹಳೆಯದಾದ ಹಾಗೂ ಹೆಚ್ಚು ಬೆಲೆ ಬಾಳುವ ಆಯುರ್ವೇದದ ಎಣ್ಣೆಯಾಗಿದೆ. ಕೇಸರಿ, ಮೇಕೆ ಹಾಲು, ಶ್ರೀಗಂಧ ಮತ್ತು ಮಂಜಿಷ್ಟದಿಂದ ತಯಾರಾಗುವ ಎಣ್ಣೆಯಾಗಿದೆ. ಇದು ಚರ್ಮದ ಕಾಂತಿಯನ್ನು ಆಳದಿಂದ ಹೊಳಪು ಮಾಡಲು ಸಹಾಯ ಮಾಡುತ್ತದೆ. ಮುಖದ ಮೇಲಿರುವ ಮೊಡವೆ, ಕಲೆ, ಸುಕ್ಕುಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಇದನ್ನು ಪೃಥ್ವಿರಾಜ್​​​ ಚೌಹಾಣ್​ ಅವರ ಪತ್ನಿ ರಾಣಿ ಸಂಯುಕ್ತಾ ಇದನ್ನು ಬಳಕೆ ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ.

ಉಬ್ಟಾನ್​ ಫೇಸ್​ ಪ್ಯಾಕ್

ಹರ್ಬಲ್​ ಮತ್ತು ಉಬ್ಟಾನ್​ ಫೇಸ್​ ಫ್ಯಾಕ್​ ಎಂದು ಕರೆಯಲ್ಪಡುವ ಇದು ಚರ್ಮ ಹೊಳೆಯಲ್ಪಡುವಂತೆ ಮಾಡುವ ಹಳೆ ಕಾಲದ ಒಂದು ವಿಧಾನ. ಈ ಫೇಸ್​ ಮಾಸ್ಕ್​​ ಅನ್ನು ರೋಸ್​ವಾಟರ್​, ಕಡಲೇ ಹಿಟ್ಟು ಹಾಗೂ ಅರಿಶಿನ ನಮಿಕ್ಸ್​ ಮಾಡಿ ಹಚ್ಚಿಕೊಳ್ಳಬೇಕು. ವಾರಕ್ಕೊಮ್ಮೆ ಅಥವಾ ನಿಮ್ಮ ಬಿಡುವಿನ ವೇಳೆ ಮಾಸ್ಕ್​​ ಬಳಕೆ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ಒರಟು ಚರ್ಮವನ್ನು ಮೃದುಗೊಳಿಸಲು ಇದು ಸಹಾಯ ಮಾಡುತ್ತದೆ.

ಮುಖದ ಕಾಂತಿಗೆ ಆಯುರ್ವೇದ ತೈಲ ಬಳಸಿ

ಭೃಂಗರಾಜ, ಆಮ್ಲಾ ಮತ್ತು ಬೇವಿನ ಎಣ್ಣೆಗಳು ಮುಖದ ಕಾಂತಿಗೆ ಮಾತ್ರವಲ್ಲ, ನಿಮ್ಮ ಕೂದಲ ಆರೈಕೆಗೂ ಸಹಾಯ ಮಾಡುತ್ತದೆ. ಈ ತೈಲಗಳನ್ನು ಮುಖ ಅಥವಾ ತಲೆಗೆ ಹಚ್ಚಿ ಮಸಾಜ್​ ಮಾಡುವುದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ. ಬಿಳಿ ಕೂದಲು, ಕೂದಲು ಉದರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೂದಲು ದಪ್ಪಗಾಗಿಸಿ, ಕಪ್ಪಾಗುವಂತೆ ಮಾಡುತ್ತದೆ.

ಕಣ್ಣಿನ ಕಪ್ಪು

ಕಣ್ಣಿಗೆ ಕಾಡಿಗೆ ಹಚ್ಚಲು ಸಾಕಷ್ಟು ಪ್ರಾಡಕ್ಟ್​ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಹಿಂದಿನ ಕಾಲದಲ್ಲಿ ರಾಣಿಯರಿಗಾಗಿ ನ್ಯಾಚುರಲ್​ ಆಗೆ ತಯಾರಿಸಲಾಗುತ್ತಿತ್ತು. ಬಾದಾಮಿ ಎಣ್ಣೆ ಹಾಗೂ ಕರ್ಪೂರವನ್ನು ಸುಟ್ಟು ಅದರಿಂದ ಹೊರಬರುವ ಮಸಿಯನ್ನು ಬಳಕೆ ಮಾಡಿ ಕಾಜಲ್​ ತಯಾರಿಸಿ ಹಚ್ಚಿಕೊಳ್ಳುತ್ತಿದ್ದರು. ಇದು ಕಣ್ಣಿನ ಸೋಂಕನ್ನು ದೂರ ಮಾಡಿ ಹೊಳಪನ್ನು ಹೆಚ್ಚಿಸುತ್ತದೆ.

ಚರ್ಮದ ಹೈಡ್ರೇಟ್ ಮುಖ್ಯ

ದೇಹಕ್ಕೆ ನೀರು ಎಷ್ಟು ಮುಖ್ಯವೋ ಹಾಗೆಯೇ ಮುಖ ಹೈಡ್ರೇಟ್​ ಆಗಿರುವುದು ಅಷ್ಟೇ ಮುಖ್ಯ. ಹೀಗಾಗಿ ನಿಮ್ಮ ಚರ್ಮಕ್ಕೆ ರೋಸ್​ ವಾಟರ್​ ಸ್ಪರ್ಶಿಸಿ. ಇದು ಡ್ರೈ ಫೇಸ್​ ಅನ್ನು ಹೈಡ್ರೇಟ್​​ ಆಗಿ ಇಡಲು ಸಹಯಾ ಮಾಡುತ್ತದೆ, (ಏಜೆನ್ಸೀಸ್).