ಲೈಫ್‌ಸ್ಟೈಲ್

ಒಡೆದ ಚರ್ಮಕ್ಕೆ ಹೇಳಿ ಗುಡ್​ ಬೈ; ಮನೆಯಲ್ಲೇ ತಯಾರಿಸಿ ನ್ಯಾಚುರಲ್ ಬಾಡಿ ಲೋಷನ್..Homemade Body Lotions

  • ಚಳಿಗಾಲಕ್ಕೆ ಒಡೆದ ಚರ್ಮಕ್ಕೆ ಹಚ್ಚಲು ಬಳಕೆ ಮಾಡಿ ಬಾಡಿ ಲೋಷನ್​.

  • ಮನೆಯಲ್ಲಿಯೇ ನೈಸರ್ಗಿಕವಾಗಿ ಬಾಡಿ ಲೋಷನ್​ ತಯಾರಿಸುವುದು ಹೇಗೆ?.

  • ನೈಸರ್ಗಿಕವಾಗಿ ಚರ್ಮದ ರಕ್ಷಣೆ ಮಾಡಲು ಆದಷ್ಟು ಮನೆಯಲ್ಲಿ ತಯಾರಿಸುವ ಮಾಯಿಶ್ಚರೈಸರ್ ಬಳಕೆ ಮಾಡಿ.

Homemade Body Lotions : ಚಳಿಗಾಲದಲ್ಲಿ ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳುವುದು, ತುರಿಕೆಯುಂಟಾಗುವುದು ಸಾಮಾನ್ಯ. ಹೀಗಾಗಿಯೇ ನವೆಂಬರ್​​ ಮತ್ತು ಡಿಸೆಂಬರ್​ನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಕರಿದ ತಿಂಡಿ, ಎಳ್ಳು, ಸೇರಿದಂತೆ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದು ವಾಡಿಕೆಯಲ್ಲಿದೆ. ದೇಹದ ಒಳಗಿನಿಂದ ಚರ್ಮವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರ ಜತೆಗೆ ಬಾಹ್ಯವಾಗಿಯೂ ಕಾಪಾಡಿಕೊಳ್ಳುವುದು ಅಗತ್ಯ. ಇದಕ್ಕಾಗಿ ಹಲವಾರು ರೀತಿಯ ಮಾಯಿಶ್ಚರೈಸರ್​ ಮಾರುಕಟ್ಟೆಯಲ್ಲಿ ಸಿಗುತ್ತದೆ.

ಆದರೆ, ಇವು ಹೆಚ್ಚು ರಾಸಾಯನಿಕದಿಂದ ಕೂಡಿದ್ದು, ಚರ್ಮದ ಸೂಕ್ಷ್ಮತೆಯನ್ನು, ನೈಸರ್ಗಿಕ ರಕ್ಷಣೆ, ಚರ್ಮರೋಗಕ್ಕೆ ಕಾರಣವಾಗುತ್ತದೆ. ಹೀಗಾಗಿ ಮನೆಯಲ್ಲಿಯೇ ಸುಲಭವಾಗಿ ಬಾಡಿಲೋಶನ್​ ತಯಾರಿ ಮಾಡುವುದು ಹೇಗೆ ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.

  • ಬಾಡಿಲೋಶನ್​ ತಯಾರಿಸಲು ಬೇಕಾದ ಸಾಮಗ್ರಿ

  • ಕೋಕೋ ಬಟರ್- 2 ಚಮಚ

  • ವಿಟಮಿನ್​​ ಇ - 2 ಚಮಚ

  • Virgin Olive Oil- ಅರ್ಧ ಕಪ್

  • ರೋಸ್ ವಾಟರ್​​- 4 ಚಮಚ

ತಯಾರಿಸುವುದು ಹೇಗೆ?

ಮೊದಲಿಗೆ ಕೊಕೋ ಬಟರ್ ಅನ್ನು ಮತ್ತು ಆಲಿವ್ ಎಣ್ಣೆಯನ್ನು ಡಬಲ್​ ಬಾಯ್ಲರ್​ನಲ್ಲಿ ಕರಗಿಸಿ..ಮಿಶ್ರಣ ತಣ್ಣಗಾದ ನಂತರ ವಿಟಮಿನ್​ ಇ ಅದಕ್ಕೆ ಸೇರಿಸಿ. ಎಲ್ಲವೂ ತಣ್ಣಗಾದಾಗ ಅದಕ್ಕೆ ರೋಸ್ ವಾಟರ್ ಸೇರಿ ಸ್ಪಲ್ಪ ಮಿಶ್ರಣ ಮಾಡಿ. ಅದು ಕೆನೆಭರಿತ ಹಾಲಿನಂತಾಗುವರೆಗೆ ಮಿಶ್ರಣ ಮಾಡಿ. ರೋಸ್​ ವಾಟರ್​ನಿಂದ ಮಿಶ್ರಣವಾದ ಮಾಯಿಶ್ಚರೈಸರ್​ ಅನ್ನು ನಾವು ಆರೋಗ್ಯಕರವಾಗಿ ತಯಾರಿಸಿಕೊಳ್ಳಬೇಕಾಗುತ್ತದೆ. ಇದು ಯಾವುದೇ ವಾಣಿಜ್ಯ ಟೆಸ್ಟಿಂಗ್ ಪಡೆದುಕೊಳ್ಳದ ಕಾರಣ ಅದರ ಸುರಕ್ಷತೆ ಬಗ್ಗೆ, ಯಾವುದೇ ಕಲುಷಿತವಾಗದ ಬಗ್ಗೆ ಹೆಚ್ಚು ಗಮನಹರಿಸುವುದು ಅಗತ್ಯವಾಗಿರುತ್ತದೆ.

ತೆಂಗಿನ ಎಣ್ಣೆ- ಶಿಯಾ ಬಟರ್​ನಿಂದಲೂ ಲೋಷನ್ ತಯಾರಿಸಿ

ಇಷ್ಟೇ ಅಲ್ಲ ತೆಂಗಿನ ಎಣ್ಣೆ ಮತ್ತು ಶಿಯಾ ಬಟರ್​ನಿಂದಲೂ ನಾವು ಬಾಡಿ ಲೋಷನ್ ತಯಾರಿಸಿಕೊಳ್ಳಬಹುದಾಗಿದೆ. ಆದರೆ, ಅಲರ್ಜಿ ಸಮಸ್ಯೆ ಉಳ್ಳವರು ಈ ಬಗ್ಗೆ ಗಮನ ಹರಿಸಬೇಕು. ಮೊಡವೆ ಹೆಚ್ಚಿಸುವ ಕಾರಣ ವೈದ್ಯರ ಸಲಹೆ ಮೇರೆಗೆ ಇದನ್ನು ಬಳಕೆ ಮಾಡಿ.

  • ತಯಾರಿಸುವ ವಿಧಾನ

  • ಶಿಯಾ ಬಟರ್​; ಅರ್ಧ ಕಪ್

  • ತೆಂಗಿನ ಎಣ್ಣೆ; ಕಾಲು ಕಪ್

  • ಅವಾಕಾಡೋ ಎಣ್ಣೆ; ಕಾಲು ಕಪ್

  • ಎಸೆನ್ಶಿಯಲ್​ ಎಣ್ಣೆ - 8-10 ಹನಿ

  • ಆರೋರೂಟ್ ಪುಡಿ- 3 ಚಮಚ

ಶಿಯಾ ಬಟರ್​ ಮತ್ತು ತೆಂಗಿನ ಎಣ್ಣೆ, ಅವಾಕಾಡೊ ಎಣ್ಣೆಯನ್ನು ಬಾಯ್ಲರ್​ನಲ್ಲಿ ಕರಗಿಸಿ ಮಿಶ್ರಣ ಮಾಡಿ. ಅದನ್ನು ತೆಗೆದು ತಣ್ಣಗಾಗಲು ಬಿಡಿ. ನಿಮ್ಮ ಮಾಯಿಶ್ಚರೈಸರ್​ಗೆ ಪರ್ಫ್ಯೂಮ್ ಬಳಸಲು ಬಯಸಿದರೆ, ಅದು ನಿಮ್ಮ ಚರ್ಮಕ್ಕೆ ಸರಿಯಾದರೆ ಬಳಕೆ ಮಾಡಿ. ಇಲ್ಲದಿದ್ದರೆ ಮಿಶ್ರಣ ತಣ್ಣಗಾದ ನಂತರ ಆರೋರೂಟ್ ಪುಡಿ ಸೇರಿಸಿ ನಿಮ್ಮ ಮಾಯ್​ಶ್ಚರೈಸರ್​​​ ಬಳಕೆಗೆ ಸಿದ್ಧ

ಅಲೋವೆರಾ ಜೆಲ್, ಬಾದಾಮಿ ಎಣ್ಣೆಯ ಬಾಡಿ ಲೋಷನ್​​

ಚರ್ಮವನ್ನು ಹೈಡ್ರೇಟ್ ಆಗಿಡಲು ಆಲೋವೆರಾ ಜೆಲ್ ಬಳಕೆ ಮಾಡಲಾಗುತ್ತದೆ. ಬಾದಾಮಿ ಎಣ್ಣ ಒಣ ಚರ್ಮವನ್ನು ತಡೆಯಲು ಸಹಾಯ ಮಾಡುತ್ತದೆ. ಇವುಗಳನ್ನು ಬಳಕೆ ಮಾಡಿಕೊಂಡು ಬಾಡಿಲೋಷನ್ ತಯಾರಿ ಮಾಡುವುದು ಹೇಗೆ ನೋಡೋಣ ಬನ್ನಿ

  • ಬೇಕಾಗುವ ಪದಾರ್ಥ

  • ಅಲೋವೆರಾ ಜೆಲ್: 1 ಕಪ್

  • ಟೀ ಟ್ರೀ ಎಣ್ಣೆ: 15 ಹನಿ

  • ವಿಟಮಿನ್​ ಇ ಎಣ್ಣೆ; 1 ಚಮಚ

  • ಬಾದಾಮಿ ಎಣ್ಣೆ; 4-6 ಸ್ಪೂನ್

  • ಜೇನುಮೇಣ (Beeswax); ಅರ್ಧ ಕಪ್​

ಜೇನುಮೇಣ (Beeswax) ಮತ್ತು ಬಾದಾಮಿ ಎಣ್ಣೆಯನ್ನು ಡಬಲ್ ಬಾಯ್ಲರ್​ನಲ್ಲಿ ಬಿಸಿ ಮಾಡಿ ಆ ಮಿಶ್ರಣ ತಣ್ಣಗಾಲು ಬಿಡಿ ಆನಂತರ ಅದಕ್ಕೆ ಅಲೋವೆರಾ ಜೆಲ್​ ಹಾಗೂ ವಿಟಮಿನ್ ಇ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಟೀ ಟ್ರೀ ಆಯ್ಲ್​ ಚರ್ಮಕ್ಕೆ ಕಿರಿಕಿರಿ ಮಾಡಬಹುದು. ಹೀಗಾಗಿ ವೈದ್ಯರ ಸಲಹೆ ಪಡೆದು ಚರ್ಮಕ್ಕೆ ಬಳಕೆ ಮಾಡಿ, (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.