ಲೈಫ್‌ಸ್ಟೈಲ್

'21 ದಿನಗಳ ಯೋಗ ಚಾಲೆಂಜ್​' ಪೂರ್ಣ; ಗರ್ಭಗುಡಿ ಐವಿಎಫ್​ ಸೆಂಟರ್​ ಆಯೋಜಿಸಿದ್ದ ಕಾರ್ಯಕ್ರಮ

ಬೆಂಗಳೂರು: ವಿಶ್ವ ಐವಿಎಫ್​ ದಿನ ಹಾಗೂ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಗರ್ಭಗುಡಿ ಐವಿಎಫ್​ ಸೆಂಟರ್​ನಿಂದ ಆಯೋಜಿಸಲಾಗಿದ್ದ '21 ದಿನಗಳ ಯೋಗ ಚಾಲೆಂಜ್​' ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಬುಧವಾರ ಆಯೋಜಿಸಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಗರ್ಭಗುಡಿ ಐವಿಎಫ್​ ಸೆಂಟರ್​ನ ಸಂಸ್ಥಾಪಕಿ ಹಾಗೂ ವೈದ್ಯಕಿಯ ನಿರ್ದೇಶಕಿ ಡಾ.ಎಸ್​.ಆಶಾ ವಿಜಯ್​ ಮಾತನಾಡಿ, 'ಜುಲೈ 25ರ ವಿಶ್ವ ಐವಿಎಫ್​ ದಿನದಂದು ಆರಂಭವಾದ ಯೋಗ ಚಾಲೆಂಜ್​ ಮೂಲಕ ಮಕ್ಕಳಿಲ್ಲದ ದಂಪತಿಗಳಲ್ಲಿ ಲವತ್ತತೆ ಹೆಚ್ಚಿಸಲು ಆಯುರ್ವೇದ, ಯೋಗ ಮತ್ತು ಪೌಷ್ಟಿಕಾಂಶ ಒಳಗೊಂಡ ಸಮಗ್ರ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವುದು ಉದ್ದೇಶವಾಗಿತ್ತು. ಈ ಚಿಕಿತ್ಸಾ ವಿಧಾನ ಅನುಸರಿಸುವುದರಿಂದ ಸಂತಾಹೀನ ದಂಪತಿಗಳು ಹೆಚ್ಚಿನ ಲಾಭ ಪಡೆಯಬಹುದಾಗಿದೆ' ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಗ್ರ ಚಿಕಿತ್ಸೆ ಕುರಿತು ನ್ಯೂಟ್ರಿಷನ್​ ಎಕ್ಸ್​ಪರ್ಟ್​ ಡಾ. ಶ್ರೀದೇವಿ, ಹಿರಿಯ ಸಂತಾನೋತ್ಪತ್ತಿ ತಜ್ಞೆಯರಾದ ಡಾ.ರಾಜಂ ಮುರಳಿ, ಡಾ.ಅನಿತಾ ಮನೋಜ್​, ಆಯುರ್ವೇದ ವೈದ್ಯೆ ಡಾ.ಅಶ್ವಿನಿ ಮೋಹನ್​ ಸಂವಾದ ನಡೆಸಿದರು.

ಮಕ್ಕಳಿಲ್ಲದ ದಂಪತಿಗಳು, ಐವಿಎಫ್​ ಚಿಕಿತ್ಸೆ ಪಡೆಯುವ ದಂಪತಿಗಳು ಯೋಗ, ಆಯುರ್ವೇದ ಜೀವನ ಕ್ರಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ರೂಢಿಸಿಕೊಳ್ಳುವುದು ಸಂತಾನಾಭಿವೃದ್ಧಿಗೆ ಸಹಾಯ ಮಾಡುತ್ತದೆ. ಆಯುರ್ವೇದ ಹಾಗೂ ಆಲೋಪತಿ ಎರಡು ಔಷಧಗಳಲ್ಲಿನ ಕೆಲ ಅಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಈ ಅವಧಿಯಲ್ಲಿ ಯೋಗ, ಚಿಕಿತ್ಸೆ, ಮಾನಸಿಕ ಆರೋಗ್ಯ, ಪೋಷಕಾಂಶಯುಕ್ತ ಆಹಾರ ಸೇವನೆ ಮುಖ್ಯ. ಹಲವು ಸಂದರ್ಭದಲ್ಲಿ ಸಮಸ್ಯೆಯ ಮೂಲ ಪತ್ತೆಯಾಗುವುದಿಲ್ಲ. ಈ ಅವಧಿಯಲ್ಲಿ ಆಯುರ್ವೇದ ಹಾಗೂ ಮಾನಸಿಕ ಚಿಕಿತ್ಸೆ ಸಹಾಯ ಮಾಡುತ್ತದೆ ಎಂಬ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು.

ಅನೇಕರು ವಿವಿಧ ಆಸ್ಪತ್ರೆ, ದೇವಸ್ಥಾನ, ಗ್ರಾಮೀಣ ಔಷಧ ಪ್ರಯತ್ನಿಸಿ ಅಂತಿಮವಾಗಿ ಐವಿಎ್​ ಸೆಂಟರ್​ಗೆ ಬರುತ್ತಾರೆ. ಸಂತಾನೋತ್ಪತ್ತಿಯಲ್ಲಿ ಎಲ್ಲಿ ಎಡವುತ್ತಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ದಂಪತಿಗಳು ಮೊದಲು ಮಗು ಪಡೆಯಲು ಎಷ್ಟರ ಮಟ್ಟಿಗೆ ಮಾನಸಿಕವಾಗಿ ಸಿದ್ದವಾಗಿದ್ದಾರೆ. ಅವರಲ್ಲಿನ ತೊಂದರೆ ಏನು ಎಂಬುದನ್ನು ಪತ್ತೆಹಚ್ಚಿದ ನಂತರ ಐವಿಎ್​ಗೆ ಸಲಹೆ ನೀಡಲಾಗುತ್ತದೆ.

- ಡಾ.ಅನಿತಾ ಮೋಹನ್​, ಸಂತಾನೋತ್ಪತ್ತಿ ತಜ್ಞೆ

ಗರ್ಭಗುಡಿ ಐವಿಎಫ್ ಸೆಂಟರ್ ​ಸಿಇಒ ವಿಜಯ್​ ಕುಮಾರ್​, ಜಿಜಿಐಆರ್​ಎಚ್​ಆರ್​ ಸಿಇಒ ಶೀಹರಿ ಶೀನಿವಾಸನ್​, ಅಸೋಸಿಯೆಟ್​ ವೈಸ್​ ಪ್ರೆಸಿಡೆಂಟ್​ ಜಯರಾಮ್​, ಅಸೋಸಿಯೆಟ್​ ವೈಸ್​ ಪ್ರೆಸಿಡೆಂಟ್​-ಮಾರ್ಕೆಟಿಂಗ್​ ಶೃತಿ ರೆಡ್ಡಿ, ಯೋಗ ಥೆರಪಿಸ್ಟ್​ ಬಿ.ಸುರಕ್ಷಾ, ಮೀಡಿಯಾ ಮ್ಯಾನೇಜರ್​ ರವಿ ಅಜ್ಜೀಪುರ ಇತರರಿದ್ದರು.