- ಕೂದಲು ಉದುರುವಿಕೆ ಸಮಸ್ಯೆಗೆ ಅಲಿವ್ ಬೀಜಗಳ ರಾಮಬಾಣ.
- ಆರೋಗ್ಯಕರ ಕೂದಲಿಗಾಗಿ ಸುಲಭವಾದ ಪೌಷ್ಟಿಕಾಂಶಯುಕ್ತ ಆಲಿವ್ ಬೀಜ ಸೇವಿಸಿ.
- ಕ್ಯಾಲ್ಸಿಯಂ, ಐರನ್, ಫೈಬರ್ ಮತ್ತು ವಿಟಮನ್‌ಗಳು ಸಮೃದ್ಧವಾಗಿದೆ.
ಮಳೆಗಾದಲ್ಲಂತೂ ಹೆಚ್ಚು ಕೂದಲು ಉದುರುತ್ತದೆ. ನೀರಿನ ಬದಲಾವಣೆ, ಆಹಾರದ ಕ್ರಮ, ಧೂಳು ತುಂಬಿದ ವಾತಾವರಣ ಮಾತ್ರ ಇದಕ್ಕೆ ಕಾರಣ ಅಲ್ಲ. ಅಲೋಪೇಷಿಯಾ ಹಾರ್ಮೋನ್ ಬದಲಾವಣೆಗಳು, ಕಳಪೆ ಪೋಷಣೆ, ಮಾನಸಿಕ ಒತ್ತಡವೂ ಕಾರಣ. ಇಷ್ಟೇ ಅಲ್ಲದೆ ಕಬ್ಬಿಣಾಂಶ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ವಿಟಮನ್‌ಗಳು ಮತ್ತು ಖನಿಜಗಳ ಅವಶ್ಯಕತೆಯಿಂದಲೂ ಕೂದಲು ಉದರುವಿಕೆ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.
ಈ ಸಮಸ್ಯೆಗೆ ಪರಿಹಾರವಾಗಿ, ಖ್ಯಾತ ಪೌಷ್ಟಿಕತಜ್ಞೆ ಪಾಲಕ್ ನಾಗ್ಪಾಲ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕೂದಲು ಉದುರುವಿಕೆಯಿಂದ ಮುಕ್ತಿ ಪಡೆದುಕೊಳ್ಳುವ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ ಗಾರ್ಡನ್ ಕ್ರೆಸ್ ಮತ್ತು ಹಳೀಮ್, ಆಲಿವ್ ಬೀಜ ಎಂದು ಕರೆಸಿಕೊಳ್ಳುವ ಈ ಪದಾರ್ಥವು ಕೂದಲಿನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಿದ್ದಾರೆ.
ಹಾಗಾದ್ರೆ ಆಲಿವ್ ಬೀಜಗಳಿಂದ ಕೂದಲಿನ ಆರೋಗ್ಯವನ್ನು ಮಾಡಿಕೊಳ್ಳುವುದು ಹೇಗೆ?, ಇದು ಹೇಗೆ ಎಷ್ಟು ಪ್ರಯೋಜನಕಾರಿ ಎಂಬುದರ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಆಲಿವ್ ಬೀಜದಿಂದ ಸಿಗುವ ಪ್ರಯೋಜನಗಳೇನು?
ಕ್ಯಾಲ್ಸಿಯಂ, ನಾರಿನಾಂಶ, ವಿಟಮಿನ್ ಎ, ಸಿ ಮತ್ತು ಇ ಅಂಶವು ಇದ್ದು, ಕೂದಲಿನ ಆರೋಗ್ಯವನ್ನು ಕಾಪಾಡಲು ಸಹಕಾರಿ.
ಬೀಜಗಳನ್ನು ಸೇವಿಸುವ ವಿಧಾನ ಹೀಗೆ
ಕಾಲು ಚಮಚ (1/4 tsp) ಅಳಿವ್ ಬೀಜಗಳನ್ನು 6 ರಿಂದ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನೆನೆಸಿದ ಬೀಜಗಳನ್ನು ಒಂದು ಕಪ್ ಹಾಲಿಗೆ ಸೇರಿಸಿ ಸೇವಿಸಿ.
ಇದು ನೆನಪಿರಲಿ
ಎಂದಿಗೂ ಆಲಿವ್ ಬೀಜಗಳನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಅಥವಾ ಯಾವುದರೊಂದಿಗೂ ಬೆರಸದೆ ಸೇವಿಸಬೇಡಿ; ಯಾವಾಗಲೂ ಆರೋಗ್ಯಕರ ಕೊಬ್ಬಿನ ಮೂಲದೊಂದಿಗೆ ಉದಾಹರಣೆಗೆ ಹಾಲಿನೊಂದಿಗೆ ಸೇವಿಸುವುದು ಉತ್ತಮ.
ಹಾಲಿನ ಅಲರ್ಜಿ ಅಥವಾ ಜೀರ್ಣಕ್ರಿಯೆ ಸಮಸ್ಯೆ ಇರುವವರು ಡೈರಿ-ಮುಕ್ತ ಪರ್ಯಾಯ ಮಾರ್ಗಗಳನ್ನು ಆಯ್ದುಕೊಳ್ಳಬಹುದು, (ಏಜೆನ್ಸೀಸ್).