Jeera Water vs Saunf Water Which Is Better At Controlling Blood Sugar
- ಜೀರಿಗೆ ನೀರು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುವ ಮೂಲಕ ಸಕ್ಕರೆಯನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ
- ಸೋಂಪು ನೀರು ಜೀರ್ಣಕ್ರಿಯೆ ಸುಧಾರಿಸುವ ಜೊತೆಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿರ್ವಹಿಸುತ್ತದೆ
- ಎರಡು ಸಾಂಬಾರ್ ಪದಾರ್ಥಗಳು ತಮ್ಮದೇ ಆದ ವಿಶಿಷ್ಟ ಔಷಧೀಯ ಗುಣಗಳನ್ನು ಹೊಂದಿವೆ
Jeera Water vs Saunf Water : ನಿತ್ಯ, ಅನ್ನ, ಚಪಾತಿ, ಇಡ್ಲಿಯಂತಹ ತಿಂಡಿಯನ್ನೇ ಸೇವಿಸೋದನ್ನು ಬಿಟ್ಟು, ತರಕಾರಿ, ಮಸಾಲೆಗಳಿಂದ ಕೂಡಿದ ಸಮತೋಲಿತ ಆಹಾರವನ್ನು ಸೇವನೆ ಮಾಡುವುದರಿಂದ ಯಾವುದೇ ಕಾಯಿಲೆ ಹತ್ತಿರವೂ ಸುಳಿಯೋದಿಲ್ಲ ಎನುತ್ತಾರೆ ಹಿರಿಯರು. ಆದರೆ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಬದಲಾದ ಜೀವನಶೈಲಿ ಆಹಾರದಿಂದಾಗಿ ಮಧುಮೇಹ, ಬಿಪಿ, ಬೊಜ್ಜಿನಂತಹ ದೀರ್ಘಾವಧಿ ಕಾಯಿಲೆಯಿಂದ ಬಳಲುವ ಸ್ಥಿತಿ ಇದೆ.
ಜಾಗತಿಕ ಆರೋಗ್ಯ ವರದಿ ಪ್ರಕಾರ 540ಕ್ಕೂ ಹೆಚ್ಚು ಮಿಲಿಯನ್ ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಎನ್ನುವುದು ತಿಳಿದುಬಂದಿದೆ. ಆರನೇ ಒಂದು ಭಾಗದಷ್ಟು ಜನರು ಭಾರತದವರು. ಹೆಚ್ಚಿನ ಜನರು ಟ್ಯಾಬ್ಲೆಟ್ಗಳಿಗಿಂತ ನೈಸರ್ಗಿಕವಾಗಿ ಹೇಗೆ ಮಧುಮೇಹಕ್ಕೆ ಮದ್ದು ಕೊಟ್ಟುಕೊಳ್ಳುವುದು ಎಂದು ಯೋಚಿಸುತ್ತಿರುತ್ತಾರೆ. ಜೀರಿಗೆ ನೀರು ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಜೀರಿಗೆಯಲ್ಲಿ ಥೈಮೋಕ್ವಿನೋನ್ ಮತ್ತು ಕ್ಯುಮಿನಾಲ್ಡಿಹೈಡ್‌ನಿಂದ ಕೂಡಿದೆ. ಸೋಂಪಿನಲ್ಲಿ ಅನೆಥೋಲ್ ಮತ್ತು ಕ್ವೆರ್ಸೆಟಿನ್‌ನಲ್ಲಿ ಸಮೃದ್ಧವಾಗಿದೆ ಎಂದು ತಜ್ಞರು ಹೇಳುತ್ತಾರೆ. ಎರಡು ಸಹ ಆರೋಗ್ಯಕ್ಕೆ ಹಿತಕಾರಿ ಆದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನುನಿಯಂತ್ರಿಸಲು ಇವೆರಡರಲ್ಲಿ ಯಾವುದು ಬೆಸ್ಟ್ ಅನ್ನೋದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಜೀರಿಗೆ ಹೇಗೆ ಕೆಲಸ ಮಾಡುತ್ತೆ?
ಜೀರಿಗೆಯಲ್ಲಿ ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿದ್ದು, ಆ ಅಂಶ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹೆಚ್ಚೋಗದನ್ನು ಉತ್ತೇಜಿಸುತ್ತದೆ. ಇನ್ನು ಜೀರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗೋದನ್ನು ತಡೆಹಿಡಿಯುತ್ತದೆ. ತೂಕ ಇಳಿಕೆಗೂ ಜೀರಿಗೆ ನೀರು ಪರಿಣಾಮಕಾರಿ.
ಸೋಂಪು ನೀರು ಹೇಗೆ ಉಪಯುಕ್ತ
ಸೋಂಪಿನಲ್ಲಿರುವ ಫೈಟೊಕೆಮಿಕಲ್‌ಗಳು ಮಧುಮೇಹಿಗಳಿಗೆ ವರದಾನ. ದೇಹದಲ್ಲಿ ಆಗಾಗ ಕಾಣಿಸುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ಪ್ರತಿರೋಧವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಊಟವಾದ ನಂತರ ನಿತ್ಯ ಸೋಂಪು ಕಾಳನನ್ನು ಒಂದು ಟೀ ಸ್ಪೂನ್ನಷ್ಟು ಜಗಿಯುವುರಿಂದ ಜೀರ್ಣಕ್ರಿಯೆ ಸರಾಗವಾಗಿ ಸಕ್ಕರೆ ಅಂಶ ರಕ್ತಕ್ಕೆ ನಿಧಾನವಾಗಿ ಸೇರ್ಪಡೆಯಾಗುತ್ತದೆ.
ಜೀರಿಗೆ-ಸೋಂಪು ಯಾವುದು ಬೆಸ್ಟ್?
ಜೀರಿಗೆ ಮತ್ತು ಸೋಂಪು ಎರಡು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೇರವಾಗಿ, ವೇಗವಾಗಿ ಸೇರೋದನ್ನು ತಡೆಹಿಡಿಯುತ್ತದೆ. ಮಧುಮೇಹ ನಿಯಂತ್ರಿಸುವಲ್ಲಿ ಜೀರಿಗೆ ನೀರು ಕೊಂಚ ಹೆಚ್ಚಾಗಿಯೇ ಪರಿಣಾಮವನ್ನು ಬೀರುತ್ತದೆ. ದೇಹಕ್ಕೆ ಅನುಗುಣವಾಗಿ ಎರಡರ ನೀರನ್ನು ಕುಡಿಯಬಹುದು.
ಜೀರಿಗೆ ಅಥವಾ ಸೋಂಪಿನ ನೀರನ್ನು ಕುಡಿಯೋದು ಹೇಗೆ?
- ಒಂದು ಚಮಚ ಜೀರಿಗೆ ಅಥವಾ ಸೋಂಪನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ
- ಬೆಳಿಗ್ಗೆ ಆ ನೀರನ್ನು ಕುದಿಸಿ, ಉಗುರು ಬೆಚ್ಚಗಿರುವಾಗ ಖಾಲಿ ಹೊಟ್ಟೆಯಲ್ಲಿ ಸೇವಿಸಿ(ಏಜೆನ್ಸೀಸ್).