ಬೆಂಗಳೂರು: ( throat) ಊಟ ಮಾಡುವಾಗ ಆಕಸ್ಮಿಕವಾಗಿ ಗಂಟಲಿನಲ್ಲಿ ಮೀನಿನ ಮುಳ್ಳು ಅಥವಾ ಮತ್ಯಾವುದೇ ಸಣ್ಣ ಮುಳ್ಳು ಸಿಕ್ಕಿಕೊಂಡರೆ ಗಾಬರಿಯಾಗುವುದು ಸಹಜ. ಅಂತಹ ಸಮಯದಲ್ಲಿ ತಕ್ಷಣ ಈ ಕೆಳಗಿನ ಸರಳ ಮನೆಮದ್ದುಗಳನ್ನು ಅನುಸರಿಸಿ ಈ ಸಮಸ್ಯಗೆ ನೀವು ಮುಕ್ತಿ ಪಡೆಯಬಹುದಾಗಿದೆ.
ಒಂದು ದೊಡ್ಡ ಬಾಳೆಹಣ್ಣಿನ ತುಂಡನ್ನು ನಿಮ್ಮ ಬಾಯಿಯಲ್ಲಿ ಇಟ್ಟು, ಅದು ಮೃದುವಾದ ತಕ್ಷಣ ಅದನ್ನು ನುಂಗಿ. ಬಾಳೆಹಣ್ಣಿನ ಜಿಗುಟಾದ ಸ್ವಭಾವದಿಂದಾಗಿ, ಮುಳ್ಳು ಅದರೊಂದಿಗೆ ಒಳಗೆ ಹೋಗುತ್ತದೆ.
ಎರಡು ಚಮಚ ಜೇನುತುಪ್ಪವನ್ನು ನೇರವಾಗಿ ನುಂಗುವುದು ಸಹ ಪರಿಣಾಮಕಾರಿಯಾಗಿದೆ. ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಗಂಟಲಿನ ಸ್ನಾಯುಗಳು ನಿಧಾನವಾಗಿ ಸಡಿಲಗೊಳ್ಳುತ್ತವೆ, ಇದರಿಂದಾಗಿ ಮುಳ್ಳು ಕೆಳಗೆ ಜಾರುವುದು ಸುಲಭವಾಗುತ್ತದೆ.
ನಿಮ್ಮ ಗಂಟಲಿನಲ್ಲಿ ಮುಳ್ಳು ಸಿಲುಕಿಕೊಂಡಂತೆ ನಿಮಗೆ ಅನಿಸಿದರೆ, ಮೊದಲು ಗಟ್ಟಿಯಾಗಿ ಕೆಮ್ಮಲು ಪ್ರಯತ್ನಿಸಿ. ಕೆಮ್ಮಿನಿಂದ ಉಂಟಾಗುವ ಒತ್ತಡವು ಮುಳ್ಳನ್ನು ಸ್ಥಳಾಂತರಿಸಬಹುದು.
ಒಣಗಿದ ಬ್ರೆಡ್ ತುಂಡನ್ನು ಅಥವಾ ರೊಟ್ಟಿಯನ್ನು ಸ್ವಲ್ಪ ನೀರು ಅಥವಾ ಹಾಲಿನಲ್ಲಿ ಅದ್ದಿ ನುಂಗಿ. ಇದು ಮುಳ್ಳನ್ನು ಕೆಳಕ್ಕೆ ತಳ್ಳುವಂತೆ ಮಾಡುತ್ತದೆ.
ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಗಾರ್ಗಲ್ ಮಾಡಿ. ಇದು ಗಂಟಲಿನಲ್ಲಿರುವ ಸ್ನಾಯುಗಳನ್ನು ಸಡಿಲಗೊಳಿಸಿ ಮುಳ್ಳು ಬಿಡುಗಡೆಯಾಗಲು ಸಹಾಯ ಮಾಡುತ್ತದೆ.
ವೈದ್ಯರನ್ನು ಕಾಣಬೇಕೆ?
- ಒಂದು ವೇಳೆ ಮೇಲಿನ ಪ್ರಯತ್ನಗಳ ನಂತರವೂ ಮುಳ್ಳು ಹೊರಬರದಿದ್ದರೆ.
- ಅತಿಯಾದ ನೋವು ಅಥವಾ ರಕ್ತಸ್ರಾವ ಕಂಡುಬಂದರೆ.
- ಉಸಿರಾಡಲು ಅಥವಾ ಆಹಾರ ನುಂಗಲು ತೊಂದರೆಯಾದರೆ.
- ಮುಳ್ಳನ್ನು ಹೊರತೆಗೆಯಲು ಗಂಟಲಿನ ಒಳಗೆ ಬೆರಳು ಹಾಕಬೇಡಿ ಅಥವಾ ಗಟ್ಟಿಯಾಗಿ ಕೆಮ್ಮಬೇಡಿ, ಇದರಿಂದ ಗಂಟಲಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ.