Benefits of Fennel Seeds 
ಮನೆ ಮದ್ದು

ಗ್ಯಾಸ್ಟ್ರಿಕ್​, ಬಾಯಿ ದುರ್ಗಂಧ ಸಮಸ್ಯೆನಾ?; ರಾತ್ರಿ ಊಟವಾದ ನಂತ್ರ ಪ್ರತಿನಿತ್ಯ ಈ ಕಾಳು ತಿನ್ನಿ..Fennel Seeds

ಪ್ರಮುಖ ಮುಖ್ಯಾಂಶಗಳು

  • ಸೋಂಪು ಕಾಳು ರಾತ್ರಿ ಊಟವಾದ ನಂತರ ತಿನ್ನುವುದರಿಂದಾಗುವ ಪ್ರಯೋಜನಗಳೇನು?
  • ಬಾಯಿಯಲ್ಲಿ ದುರ್ವಾಸನೆ ಸೃಷ್ಟಿಸುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡತ್ತೆ ಈ ಸೋಂಪು
  • ಕರುಳಿನ ಒಟ್ಟಾರೆ ಆರೋಗ್ಯಕ್ಕೆ ಸೋಂಪು ತಿನ್ನುವುದು ರೂಢಿಸಿಕೊಳ್ಳುವುದು ಒಳ್ಳೆಯದು ಅಂತಾರೆ ವೈದ್ಯರು
ಸೋಂಪನ್ನು ತಿನ್ನುವುದರಿಂದ ಉತ್ತಮ ಜೀರ್ಣಕ್ರಿಯೆಗೆ, ಹೊಟ್ಟೆ ಉಬ್ಬರ ಸೇರಿದಂತೆ ಒಟ್ಟಾರೆಯಾಗಿ ಕರುಳಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗೆಂದು ಮಾಹಿತಿಯನ್ನು ಹಂಚಿಕೊಂಡಿದ್ದು ಡಾ. ಸೌರಭ್ ಸೇಥಿ. ಸದ್ಯ ಇನ್​ಸ್ಟಾಗ್ರಾಂನಲ್ಲಿ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸಾಕಷ್ಟು ಜನರು ವೀಕ್ಷಿಸಿದ್ದಾರೆ. ಹಾಗಾದ್ರೆ ಊಟವಾದ ಬಳಿಕ ನಿತ್ಯವೂ ಸೋಂಪು ಕಾಳುಗಳನ್ನು ಜಗಿಯುವುದರಿಂದ ಸಿಗುವ ಆರೋಗ್ಯ ಲಾಭಗಳೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಜೀರ್ಣಕ್ರಿಯೆ ಸ್ನೇಹಿ

ಚಿಕನ್, ಮಟನ್​ನಂತಹ ಭಾರಿ ಆಹಾರವನ್ನು ಸೇವಿಸಿದಾಗ ಹೋಟೆಲ್​ಗಳಲ್ಲಿ ಸೋಂಪು ಕೊಡೋದನ್ನು ನೋಡೆ ಇರುತ್ತೇವೆ. ಇದನ್ನು ಬೇಕೆಂತಲೇ ಹೆಚ್ಚೆಚ್ಚು ಸೇವನೆ ಮಾಡುತ್ತೀವಿ ಹೌದು. ಅದು ಒಳ್ಳೆಯದು. ಏಕೆಂದರೆ, ಸೋಂಪು ಹೊಟ್ಟೆ ಉಬ್ಬುವಿಕೆ, ಗ್ಯಾಸ್ ಟ್ರಬಲ್​, ಅಜೀರ್ಣದಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಸೋಂಪಿನಲ್ಲಿರುವ ಫೈಬರ್ ಮತ್ತು ಅನೆಥೋಲ್ ಎಂಬ ಅಂಶವು ಹೊಟ್ಟೆಯ ಉರಿಯೂತ ತಡೆಯುವ ನೈಸರ್ಗಿಕ ಅಂಶಗಳನ್ನು ಹೊಂದಿರುತ್ತವೆ ಎಂದು ಸೌರಭ್​ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಬಾಯಿ ದುರ್ಗಂಧ ಹೋಗಲಾಡಿಕೆಗೆ ಸಹಕಾರಿ
ಸೋಂಪಿನನಲ್ಲಿ ಆರೋಮ್ಯಾಟಿಕ್​ ತೈಲಗಳು ಬಾಯಲ್ಲಿ ದುರ್ಗಂಧ ಉಂಟಾಗುವಂತೆ ಕೆಲಸ ಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ವಾಸನೆಯನ್ನು ಹೋಗಲಾಡಿಸುತ್ತದೆ. ಲಾಲಾರಸ ಹೆಚ್ಚು ಉತ್ಪಾದಿಸುತ್ತದೆ. ಜೊತೆಗೆ ಇದನ್ನು ಜಗಿಯುವುದರಿಂದ ಬಾಯಲ್ಲಿ ನೈಸರ್ಗಿಕ ತಾಜಾತನವನ್ನು ಇರಿಸುತ್ತದೆ.

ಕರುಳ ಸ್ನೇಹಿ ಸೋಂಪು

ಸೋಂಪು ಕಾಳುಗಳು ಆಂಟಿಸ್ಪಾಸ್ಮೊಡಿಕ್ ಎಂಬ ಅಂಶವನ್ನು ಹೊಂದಿದೆ. ಇದು ಕರುಳಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಕರುಳಿನ ಅಸ್ವಸ್ಥತೆ, ಹೊಟ್ಟೆ ಉಬ್ಬುವಿಕೆ, ಹೊಟ್ಟೆ ನೋವು, ಗ್ಯಾಸ್ಟ್ರಿಕ್​ ರಸಗಳ ಸ್ರವಿಕೆ ಕೆಲಸ ಮಾಡುತ್ತದೆ. ಆಹಾರ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಡಾ. ಸೌರಭ್ ಸೇಥಿ ತಮ್ಮ ವಿಡಿಯೋ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಊಟವಾದ ನಂತರ ಒಂದು ಟೀ ಚಮಚದಷ್ಟು ಸೋಂಪು ನಿತ್ಯವೂ ಜಗಿಯುವುದರಿಂದ ಕರುಳು ಮತ್ತು ಬಾಯಿಯ ಆರೋಗ್ಯಕ್ಕೆ ಸಹಕಾರಿ ಎನ್ನುತ್ತಾರೆ ಗ್ಯಾಸ್ಟ್ರೋಎಂಟರಾಲಜಿಸ್ಟ್​, (ಏಜೆನ್ಸೀಸ್​).

ಈ ಮೇಲಿರುವ ಮಾಹಿತಿಯನ್ನು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರ ಇನ್​ಸ್ಟಾಗ್ರಾಂನ ಪೋಸ್ಟ್​ ಆಧರಿಸಿ ಬರೆಯಲಾದ ಮಾಹಿತಿಯಾಗಿದೆ. ಇದನ್ನು ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.