Methi Water Benefits 
ಮನೆ ಮದ್ದು

Grade-1 ಫ್ಯಾಟಿ ಲಿವರ್ ಸಮಸ್ಯೆ ಇದ್ಯಾ?; ಬೆಳಗ್ಗೆ ಎದ್ದ ತಕ್ಷಣ ಈ ಕಾಳಿನ ನೀರು ಕುಡಿಯಿರಿ..Methi Water

Methi Water: ಇತ್ತೀಚಿನ ದಿನಗಳಲ್ಲಿ ಭಾರತೀಯರಲ್ಲಿ ಕಾಡುತ್ತಿರುವುದು ಏನಂದರೆ ಅದು ಯಕೃತ್ತಿನ ಜೀವಕೋಶದಲ್ಲಿ ಅತಿಯಾಗಿ ಸಂಗ್ರಹವಾಗುವ ಕೊಬ್ಬು. ಅಂದರೆ ಫ್ಯಾಟಿ ಲಿವರ್​. ಅದರಲ್ಲು ಗ್ರೇಡ್​ 1 ಫ್ಯಾಟಿ ಲಿವರ್​​ ಆರಂಭದ ಹಂತವಾಗಿದ್ದು ಇದನ್ನು ನಿರ್ಲಕ್ಷ್ಯಿಸಿದರೆ ಅಪಾಯ ತಪ್ಪಿದ್ದಲ್ಲ. ಇದು ವಿವಿಧ ಹಂತಗಳಲ್ಲಿ ಪರಿಣಾಮ ಬೀರುತ್ತದೆ. ಗಾಯ ಸಣ್ಣದಿರುವಾಗಲೇ ಅದನ್ನ ವಾಸಿ ಮಾಡಿಕೊಳ್ಳಬೇಕು ಎನ್ನುವ ಮಾತಿದೆ ಅದರಂತೆ ಆರೋಗ್ಯ ಕೆಡುತ್ತಿದೆ ಎನ್ನುವ ಮುನ್ಸೂಚನೆ ಸಿಗುತ್ತಲೇ ಅದರ ಬಗ್ಗೆ ನಿಗಾ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ.
ಆರಂಭಿಕ ಹಂತದಲ್ಲೇ ಫ್ಯಾಟಿ ಲಿವರ್​​ ಅನ್ನು ಕ್ಲಿಯರ್ ಮಾಡೋದು ಹೇಗೆ? ವೈದ್ಯರು ಏನಂತಾರೆ, ಯಾವ ಮನೆ ಔಷಧಿ ಇದಕ್ಕೆ ಸಹಕಾರಿ ಅನ್ನೋದನ್ನು ತಜ್ಞ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಾಂಡುರಂಗನ್ ಬಸುಮಣಿ ವಿವರಿಸಿದ್ದಾರೆ.

ಗ್ರೇಡ್​ 1 ಫ್ಯಾಟಿ ಲಿವರ್​ ಎಂದರೇನು?

ಯಕೃತ್ತಿನಲ್ಲಿ ಅಲ್ಪ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ಗ್ರೇಡ್​ 1 ಫ್ಯಾಟಿ ಲಿವರ್​ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ತನ್ನ ಲಕ್ಷಣಗಳನ್ನು ಮುನ್ಸೂಚನೆ ಕೊಡೋದಿಲ್ಲ ಆದರೆ, ನಿಮ್ಮ ಜೀವನ ಶೈಲಿಯ ಈ ಅಂಶಗಳಿಂದ ಕೊಬ್ಬು ಸಂಗ್ರಹವಾಗುತ್ತದೆ.
  • ಇನ್ಸುಲಿನ್ ಪ್ರತಿರೋಧ
  • ದೇಹದಲ್ಲಿ ಕಾಣಿಸಿಕೊಳ್ಳುವ ಬೊಜ್ಜು
  • ಜಡ ಜೀವನಶೈಲಿ
  • ಪೌಷ್ಟಿಕಾಂಶವಿಲ್ಲದ ಆಹಾರ ಪದ್ಧತಿ

ಮೆಂತ್ಯೆ ಕಾಳುಗಳಿಂದ ಸಿಗುವ ಪ್ರಯೋಜನವೇನು?

ಬೆಳಗ್ಗೆ ಎದ್ದ ತಕ್ಷಣ ನೆನಸಿದ ಮೆಂತ್ಯೆ ಕಾಳಿನ ನೀರನ್ನು ಕುಡಿಯುವುದರಿಂದ ಅದರಲ್ಲಿರುವ ಅಧಿಕ ಪ್ರಮಾಣದ ನಾರಿನಾಂಶ ಮತ್ತು ಆ್ಯಂಟಿ-ಆಕ್ಸಿಡೆಂಟ್‌ ಅಂಶ ದೇಹಕ್ಕೆ ಸೇರುತ್ತದೆ. ಇದು ಯಕೃತ್ತಿನ ಆರೋಗ್ಯವನ್ನು ವೃದ್ಧಿ ಮಾಡಲು ಸಹಕಾರಿ. ಲಿವರ್​ನಲ್ಲಿ ಶೇಖರಣೆಯಾಗುವ ಕೊಬ್ಬಿನೊಂದಿಗೆ ಹೋರಾಡುವ ಗ್ಲೂಕೋಸ್​ ಮತ್ತು ಲಿಪಿಡ್​​​ ಅಂಶವನ್ನು ಇವು ಹೊಂದಿದೆ. ಉತ್ಕರ್ಷಣ ನಿರೋಧಕವನ್ನು ಹೊಂದಿರುವ ಲಿವರ್​ ದೇಗದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಮೆಂತ್ಯೆ ಕಾಳುಗಳು ಹಸಿವನ್ನು ನಿಯಂತ್ತಿಸುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಮೆಂತೆಯಲ್ಲಿರುವ ಕರಗುವ ನಾರಿನಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದರಲ್ಲಿರುವ ಆ್ಯಂಟಿ-ಆಕ್ಸಿಡೆಂಟ್‌ಗಳು ಯಕೃತ್ತಿನ ಅಂಗಾಂಶಗಳ ಹಾನಿಯನ್ನು ತಡೆಯುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಇದು ಸಹಕಾರಿ.

ಫ್ಯಾಟಿ ಲಿವರ್​​ ಸಮಸ್ಯೆಗೆ ಮೆಂತ್ಯೆ ಒಂದೇ ಪರಿಹಾರವಲ್ಲ.

ವೈದ್ಯರ ಪ್ರಕಾರ ಫ್ಯಾಟಿ ಲಿವರ್​​ ಸಮಸ್ಯೆ ಹೋಗಲಾಡಿಸಲು ಮೆಂತ್ಯೆ ನೀರನ್ನು ಮಾತ್ರ ಕುಡಿಯೋದರಿಂದ ಲಿವರ್ ಸಂಪೂರ್ಣ ಗುಣವಾಗುವುದಿಲ್ಲ. ಇದು ಗುಣಪಡಿಸುವ ಔಷಧಿಯಲ್ಲ, ಬದಲಿಗೆ ಚಿಕಿತ್ಸೆಗೆ ಪೂರಕವಾದ ಮನೆಮದ್ದು ಅಷ್ಟೇ.

ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡ್ಬೇಕು?

  • ದೇಹದ ಒಟ್ಟು ತೂಕದಲ್ಲಿ ಕನಿಷ್ಠ 10% ತೂಕವನ್ನು ಇಳಿಸಿಕೊಳ್ಳಬೇಕು
  • ನಿತ್ಯವೂ 40 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು.
  • ವಾರದಲ್ಲಿ 5 ದಿನವಾದರೂ ವ್ಯಾಯಾಮ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
  • ಕಾರ್ಬೋಹೈಡ್ರೇಟ್ ಹೆಚ್ಚಾಗಿ ಇರುವ ಅಕ್ಕಿ, ಗೋಧಿ, ಆಲೂಗಡ್ಡೆಯಂತಹ ಪಿಷ್ಟ ಪದಾರ್ಥಗಳನ್ನು ಕಡಿಮೆ ಮಾಡಬೇಕು. ಇದರ ಜೊತೆಗೆ ಮೆಂತೆ ನೀರು ಮತ್ತು ಬ್ಲ್ಯಾಕ್ ಕಾಫಿ ಸೇವನೆ ಪೂರಕವಾಗಿ ಕೆಲಸ ಮಾಡುತ್ತದೆ.

ಮೆಂತ್ಯೆ ಕಾಳು ಬಳಸೋದು ಹೇಗೆ?

  • 1 ರಿಂದ 2 ಚಮಚ ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ
  • ಬೆಳಿಗ್ಗೆ ಆ ನೀರನ್ನು ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
  • ಗರ್ಭಿಣಿಯರು ಮತ್ತು ಮಧುಮೇಹಕ್ಕೆ ಔಷಧ ತೆಗೆದುಕೊಳ್ಳುವವರು ವೈದ್ಯರ ಸಲಹೆ ಪಡೆಯುವುದು ಕಡ್ಡಾಯ, (ಏಜೆನ್ಸೀಸ್​)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.