Clove water 
ಮನೆ ಮದ್ದು

Benefits of Clove water: 10 ದಿನಗಳ ಕಾಲ ಲವಂಗ ನೀರು ಕುಡಿದ್ರೆ ಏನಾಗುತ್ತದೆ?

ಬೆಂಗಳೂರು: ಅಡುಗೆ ಮಸಾಲೆಯಲ್ಲಿ ಸಾಮಾನ್ಯವಾಗಿ ಬಳಸುವ ಲವಂಗ (ಕ್ಲೋವ್) ಇತ್ತೀಚೆಗೆ ಆರೋಗ್ಯ ಪಾನೀಯವಾಗಿ ಜನಪ್ರಿಯತೆ ಗಳಿಸುತ್ತಿದೆ. ಲವಂಗವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಹೊಟ್ಟೆ ಶುದ್ಧೀಕರಣ, ಚರ್ಮದ ಹೊಳಪು ಮತ್ತು ಇತರ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಲವಂಗ ನೀರನ್ನು ಕುಡಿದರೆ ಏನಾಗುತ್ತದೆ?

ಲವಂಗದಲ್ಲಿ ಯೂಜಿನಾಲ್ ಎಂಬ ಶಕ್ತಿಯುತ ಆಂಟೀಆಕ್ಸಿಡೆಂಟ್ ಇದ್ದು, ಇದು ಉರಿಯೂತ ನಿವಾರಣೆ, ಜೀರ್ಣಕ್ರಿಯೆ ಸುಧಾರಣೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಪ್ರತಿದಿನ 2-3 ಲವಂಗವನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಸಿ ಕುಡಿದರೆ, ಹೊಟ್ಟೆಯ ಊತ, ಅಜೀರ್ಣ ಮತ್ತು ಅಪಚನ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೊಟ್ಟೆ ಶುದ್ಧವಾಗಿ, ಟಾಕ್ಸಿನ್‌ಗಳು ಹೊರಹೋಗುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಚರ್ಮದ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆಂಟೀಆಕ್ಸಿಡೆಂಟ್‌ಗಳು ಫ್ರೀ ರ್ಯಾಡಿಕಲ್‌ಗಳನ್ನು ನಿಯಂತ್ರಿಸಿ, ಚರ್ಮದ ಹೊಳಪು ಹೆಚ್ಚಿಸಿ, ಮೊಡವೆಗಳನ್ನು ಕಡಿಮೆ ಮಾಡುತ್ತವೆ. 10 ದಿನಗಳಲ್ಲಿ ಚರ್ಮ ಆರೋಗ್ಯಕರವಾಗಿ ಕಾಣುತ್ತದೆ ಎಂದು ಅನೇಕರು ಅನುಭವ ಹಂಚಿಕೊಂಡಿದ್ದಾರೆ.
ಇದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ, ಒಳ್ಳೆಯ ನಿದ್ರೆ, ಬಾಯಿಯ ಆರೋಗ್ಯ ಸುಧಾರಣೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳವೂ ಸಾಧ್ಯ. ಕೆಲವು ಅಧ್ಯಯನಗಳು ಲವಂಗದ ಎಕ್ಸ್‌ಟ್ರಾಕ್ಟ್ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ ಎಂದು ತೋರಿಸಿವೆ.ಆದರೆ, ವೈಜ್ಞಾನಿಕವಾಗಿ ಲವಂಗ ನೀರಿನ ಪ್ರಯೋಜನಗಳು ಸಂಪೂರ್ಣ ಸಾಬೀತಾಗಿಲ್ಲ.
ಇನ್ನು ಅತಿಯಾಗಿ ಕುಡಿದರೆ ಹೊಟ್ಟೆ ತೊಂದರೆ, ರಕ್ತ ತೆಳ್ಳಗಾಗುವಿಕೆ ಅಥವಾ ಅಲರ್ಜಿ ಉಂಟಾಗಬಹುದು. ಗರ್ಭಿಣಿಯರು, ರಕ್ತದೊತ್ತಡ ಔಷಧ ಸೇವಿಸುವವರು ವೈದ್ಯರ ಸಲಹೆ ಪಡೆಯಿರಿ.ಲವಂಗ ನೀರು ಸರಳ ಆರೋಗ್ಯ ಪಾನೀಯವಾಗಿದ್ದು, ಸಮತೋಲಿತ ಆಹಾರದೊಂದಿಗೆ ಸೇವಿಸಿ ಪ್ರಯೋಜನ ಪಡೆಯಿರಿ,(ಏಜೆನ್ಸೀಸ್).