World Sleep Day (ಸಾಂದರ್ಭಿಕ ಚಿತ್ರ)
- ಮಧ್ಯಾಹ್ನದ ನಿದ್ರೆ ಅಥವಾ 'ಪವರ್ ನ್ಯಾಪ್' ಎಂಬುದು ಕೇವಲ ವಿಶ್ರಾಂತಿಯಲ್ಲ
- ಅದು ನಮ್ಮ ಮೆದುಳನ್ನು ಮತ್ತೆ ಕೆಲಸವನ್ನು ಚುರುಕುಗೊಳಿಸುವ ಒಂದು ನೈಸರ್ಗಿಕ ವಿಧಾನ
- 20 ನಿಮಿಷ ಮಲಗಿ ಎದ್ದಾಗ ನಮಗೆ ಹುಮ್ಮಸ್ಸು ಬರುವ ಬದಲು, ತಲೆ ಭಾರವಾದಂತೆ ಅನಿಸುತ್ತದೆ
World Sleep Day: ಮಧ್ಯಾಹ್ನದ ನಿದ್ರೆ ಅಥವಾ 'ಪವರ್ ನ್ಯಾಪ್' (Power Nap) ಎಂಬುದು ಕೇವಲ ವಿಶ್ರಾಂತಿಯಲ್ಲ, ಅದು ನಮ್ಮ ಮೆದುಳನ್ನು ಮತ್ತೆ ಕೆಲಸವನ್ನು ಚುರುಕುಗೊಳಿಸುವ ಒಂದು ನೈಸರ್ಗಿಕ ವಿಧಾನ. ಆದಾಗ್ಯೂ, ನಾವು ಹಲವು ಬಾರಿ 20 ನಿಮಿಷ ಮಲಗಿ ಎದ್ದಾಗ ನಮಗೆ ಹುಮ್ಮಸ್ಸು ಬರುವ ಬದಲು, ತಲೆ ಭಾರವಾದಂತೆ ಅನಿಸುತ್ತದೆ. ಈ ವಿಚಿತ್ರ ವಿದ್ಯಮಾನಕ್ಕೆ ವಿಜ್ಞಾನದಲ್ಲಿ 'ಸ್ಲೀಪ್ ಇನರ್ಶಿಯಾ' ಎಂದು ಕರೆಯುತ್ತಾರೆ.
ಒಂದು ಸಣ್ಣ ನಿದ್ರೆ ಜಾಗರೂಕತೆ ಮತ್ತು ಕೆಂದ್ರೀಕರಿಸುವ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಒಂದು ತಪ್ಪಾದ ನಿದ್ರೆಯು ಇಡೀ ದಿನವನ್ನು ಹಾಳು ಮಾಡಬಹುದಾಗಿದೆ.
ನಿದ್ರೆಯ ನಂತರ ನೀವು ಏಕೆ ಕೆಟ್ಟದಾಗಿ ಭಾವಿಸಬಹುದು
ಹೆಚ್ಚಿನ ಜನರು ಮಲಗಿ ಎದ್ದ ನಂತರ ಕೆಟ್ಟದಾಗಿ ಅನುಭವಿಸಲು ಪ್ರಾರಂಭಿಸುತ್ತಾರೆ ಸಾಮಾನ್ಯವಾಗಿ ಇದನ್ನು ನಿದ್ರಾ ಜಡತ್ವ ಎಂದು ಕರೆಯುತ್ತಾರೆ. ಆಳವಾದ ನಿದ್ರೆಯಿಂದ ಎದ್ದಾಗ ಈ ರೀತಿಯ ಅನುಭವ ಉಂಟಾಗುತ್ತದೆ. ಆದಾಗ್ಯೂ, ನೀವು 30 ನಿಮಿಷಗಳಿಗಿಂತ ಹೆಚ್ಚು ಕಾಲ ನಿದ್ರೆ ಮಾಡಿದರೆ, ಅದು ನಿಮ್ಮನ್ನು ಆಳವಾದ ನಿದ್ರಾ ವ್ಯವಸ್ಥೆಗೆ ಕೊಂಡೊಯ್ಯಬಹುದು. ಇದರಿಂದ ನಿಮ್ಮ ಮೆದುಳು ಎಚ್ಚರಗೊಳ್ಳಲು ಕಷ್ಟವಾಗುತ್ತದೆ.
ಆಕಸ್ಮಾತ್ ನೀವೇನಾದರೂ, 30 ನಿಮಿಷಕ್ಕಿಂತ ಹೆಚ್ಚು ಮಲಗಿದಾಗ ಗೊಣಗುವುದು, ಚಿಂತನೆಯಲ್ಲಿ ನಿಧಾನತೆ, ಶಕ್ತಿಯ ಕೊರತೆ ಮತ್ತು ಕೇಂದ್ರೀಕರಿಸುವಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಇದು ತಾತ್ಕಾಲಿಕ ಸ್ಥಿತಿಯಾಗಿದ್ದು, ಸುಮಾರು 30 ನಿಮಿಷಗಳವರೆಗೆ ಈ ರೀತಿಯ ಅನುಭವ ಉಂಟಾಗುತ್ತದೆ.
ತಡವಾಗಿ ನಿದ್ದೆ ಮಾಡುವುದರಿಂದ ರಾತ್ರಿ ನಿದ್ರೆಗೆ ಹೇಗೆ ಅಡ್ಡಿಯಾಗಬಹುದು
ನೀವು ನಿದ್ದೆ ಮಾಡುವ ಸಮಯವು ದಿನದ ನಂತರ ನೀವು ಎಷ್ಟು ಉಲ್ಲಾಸದಿಂದ ಇರುತ್ತೀರಿ ಎಂಬುದರ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ. ಮಧ್ಯಾಹ್ನ ತಡವಾಗಿ ಮಲಗುವುದರಿಂದ ದೇಹವು ಅಡ್ಡ ಪರಿಣಾಮಗಳನ್ನು ಎದುರಿಸಲು ಪ್ರಾರಂಭಿಸುತ್ತದೆ. ಜೊತೆಗೆ ಇದು ರಾತ್ರಿ ನಿದ್ರೆಯನ್ನು ತಡೆಯಬಹುದು. ಇದು ಕಳಪೆ ನಿದ್ರೆಯ ಅಭ್ಯಾಸಕ್ಕೆ ಕಾರಣವಾಗಬಹುದು.
ತಜ್ಞರ ಪ್ರಕಾರ ಸಂಜೆ ಮಲಗುವ ಪದ್ಧತಿಯು ದೇಹದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುವುದಾಗಿ ತಿಳಿಸುತ್ತದೆ. ಹಾಗಾಗಿ ಬೇಗನೇ ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡುತ್ತಾರೆ.
ಆದರ್ಶ ನಿದ್ರೆಯ ಅವಧಿ ಎಷ್ಟು?
ಸಂಶೋಧನೆಯ ಪ್ರಕಾರ, ನೀವು ಮಧ್ಯಾಹ್ನ ಮಲಗುವ ಅಭ್ಯಾಸ ಹೊಂದಿದ್ದರೆ, ಆ ನಿದ್ರೆ 15 ರಿಂದ 20 ನಿಮಿಷಗಳಷ್ಟು ಮಾತ್ರ ಇರಬೇಕು. ಇದನ್ನು 'ಪವರ್ ನ್ಯಾಪ್' ಎನ್ನಲಾಗುತ್ತದೆ. ಈ ನಿದ್ರೆಯು ದೇಹವು ಆಳವಾದ ನಿದ್ರೆಗೆ ಮುಂದುವರಿಯಲು ಅವಕಾಶ ನೀಡದೆ, ಜಾಗರೂಕತೆಯನ್ನು ಹೆಚ್ಚಿಸಲು, ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, 30 ನಿಮಿಷಕ್ಕಿಂತ ಹೆಚ್ಚಾದರೆ ಅದು ರಾತ್ರಿಯ ನಿದ್ರೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಎದ್ದ ನಂತರ ಆಲಸ್ಯ ಉಂಟುಮಾಡಬಹುದು.
ಆಗಾಗ ಸ್ವಲ್ಪ ನಿದ್ದೆ ಮಾಡುವುದು ಸಾಮಾನ್ಯವಾದರೂ, ಇದರಿಂದ ರಾತ್ರಿ ದೇಹಕ್ಕೆ ಬೇಕಾದ ನಿದ್ದೆ ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಒತ್ತಡ, ಆಯಾಸ, ನಿದ್ರಾಹೀನತೆ ಮತ್ತು ಜೀವನಶೈಲಿಯ ಅಂಶಗಳಿಂದ ಈ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಮಧ್ಯಾಹ್ನದ ನಿದ್ರೆಯನ್ನು ಸರಿಯಾಗಿ ಮಾಡಿದಾಗ ಅದು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಆದಾಗ್ಯೂ, ದಿನದ ಆರಂಭದಲ್ಲಿ ಸ್ವಲ್ಪ ನಿದ್ರೆಯನ್ನು ಮಾಡುವುದರಿಂದ ಶಕ್ತಿಯನ್ನು ಮರಳಿ ಪಡೆಯಲು ಸಹಾಯವಾಗುತ್ತದೆ. ನೀವೇನಾದರೂ, ಹಗಲಿನಲ್ಲಿ ತಡವಾಗಿ ನಿದ್ರೆ ಮಾಡಿದರೆ ಆಯಾಸ ಮತ್ತು ನಿದ್ರೆಯಲ್ಲಿ ಅಡಚಣೆ ಉಂಟಾಗಬಹುದು. ಹಾಗಾಗಿ ನೀವು ಪ್ರತಿನಿತ್ಯ ಉಲ್ಲಾಸದಿಂದ ಇರಬೇಕೆಂದು ಬಯಸಿದರೆ, ಸಣ್ಣ ಮತ್ತು ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.