ಸಾಂದರ್ಭಿಕ ಚಿತ್ರ 
ಆರೋಗ್ಯ

15 ಕೆಜಿ ತೂಕ ಇಳಿಸಿಕೊಂಡ ಮಹಿಳೆ; ಅದರ ಹಿಂದಿನ ರಹಸ್ಯ ಕೇಳಿದ್ರೆ ಶಾಕ್ ಆಗೋದಂತೂ ಗ್ಯಾರೆಂಟಿ! Workout

Workout : ತೂಕ ಇಳಿಸಿಕೊಳ್ಳುವ ಕ್ರಮವು ಅತ್ಯಂತ ಕಷ್ಟಕರವಾಗಬಹುದು. ವಿಶೇಷವಾಗಿ , ನಿಧಾನಗತಿಯ ಚಯಾಪಚಯ ಕ್ರಿಯೆ ಇರುವವರಿಗೆ. ದೇಹದಲ್ಲಿ ತೂಕವನ್ನು ಹೆಚ್ಚಿಸುವುದು ಸುಲಭವಾದರೂ, ಮತ್ತೆ ಆಕಾರ ಪಡೆಯಲು ಸಾಕಷ್ಟು ಶ್ರಮ ಮತ್ತು ಆಹಾರ ನಿಯಂತ್ರಣದ ಅವಶ್ಯಕತೆ ತುಂಬಾ ಇರುತ್ತದೆ. ಈ ವೇಳೆ ಆದಷ್ಟು ಜನರು ವ್ಯಾಯಾಮ, ಜಿಮ್​, ಆಹಾರದಲ್ಲಿ ನಿಯಂತ್ರಣ ಈ ರೀತಿಯ ಕ್ರಿಯೆಯಲ್ಲಿ ತೊಡಗುತ್ತಾರೆ. ಆದರೂ ತೂಕದಲ್ಲಿ ಯಾವುದೇ ಬದಲಾವಣೆಯಾಗದೇ ನಿರಾಸೆಯಾಗುತ್ತಾರೆ.
ಆದಾಗ್ಯೂ, ಯಾರಾದರೂ ತಮ್ಮ ತೂಕವನ್ನು ಅದ್ಭುತವಾಗಿ ಇಳಿಸಿಕೊಂಡಾಗ ಅವರ ಕೊಬ್ಬು ಇಳಿಸುವ ಪ್ರಯಾಣವು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯಂತೆ ಹಬ್ಬುತ್ತದೆ. ಇದು ಅನೇಕರಿಗೆ ತಮ್ಮ ಫಿಟ್​ನೆಸ್​ ಪ್ರಯಾಣವನ್ನು ಆರಂಭಿಸಲು ಮತ್ತು ಉತ್ತೇಜಿಸಲು ಸಹಾಯ ಮಾಡುತ್ತದೆ. ಇಲ್ಲೊಬ್ಬ ಮಹಿಳೆಯು 75 ಕೆಜಿಯಿಂದ 60 ಕೆಜಿ ತೂಕವನ್ನು ಇಳಿಸಿಕೊಂಡಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನೀವೇನಾದರೂ ದೇಹದಲ್ಲಿರುವ ಅತಿಯಾದ ಕೊಬ್ಬನ್ನು ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಭವ್ಯಾ ಅವರ ಮೂಲಭೂತ ಅಂಶಗಳು ಹಾಗೂ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.

ಆಹಾರದ ಮೂಲಗಳು

*ಹಣ್ಣುಗಳು ಮತ್ತು ತರಕಾರಿಗಳು

ನೀವು ಪ್ರತಿ ಊಟದಲ್ಲಿಯೂ ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವುದು ಉತ್ತಮ. ಇವು ಪೌಷ್ಟಿಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ. ಆದರಿಂದ ಇವು ದೇಹಕ್ಕೆ ಕಡಿಮೆ ಕ್ಯಾಲೋರಿಗಳನ್ನು ನೀಡುತ್ತವೆ.

*ಕಡಿಮೆ ಕೊಬ್ಬಿನ ಪ್ರೋಟೀನ್‌ಗಳು

ನಿಮ್ಮ ಪ್ರತಿ ಊಟದಲ್ಲಿ ಕೋಳಿ, ಮೀನು, ಬೇಳೆ ಅಥವಾ ತೋಫು ಸೇರಿಸಬೇಕು. ಇದು ದೇಹಕ್ಕೆ ಪ್ರೋಟೀನ್ ಶಕ್ತಿಯನ್ನು ಒದಗಿಸಿ, ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡುತ್ತದೆ.

*ಧಾನ್ಯಗಳು

ಆಹಾರ ಸೇವನೆಯಲ್ಲಿ ಅಕ್ಕಿ, ಕ್ವಿನೋವಾ ಅಥವಾ ಓಟ್ಸ್ ಬಳಸಿ. ಇದು ಸಂಪೂರ್ಣ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವುದರಿಂದ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ ಮತ್ತು ದೀರ್ಘಕಾಲದವರೆಗೆ ನಿಮ್ಮನ್ನು ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ವ್ಯಾಯಾಮದ ಅಗತ್ಯತೆಗಳು

* ವಾರ್ಮ್ ಅಪ್

ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು 5-10 ನಿಮಿಷಗಳ ಕಾಲ ಲಘು ಕಾರ್ಡಿಯೋದಿಂದ ಪ್ರಾರಂಭಿಸಬೇಕು. ಉದಾಹರಣೆಗೆ ಓಡುವುದು, ನಡೆಯುವುದು ಅಥವಾ ಡೈನಾಮಿಕ್ ಸ್ಟ್ರೆಚಿಂಗ್. ಇದು ನಿಮ್ಮ ದೇಹವನ್ನು ವ್ಯಾಯಾಮಕ್ಕೆ ಸಿದ್ಧಪಡಿಸಿ, ನೋವುಗಳು ಆಗದಂತೆ ತಡೆಯುತ್ತದೆ.

*ಶಕ್ತಿ ತರಬೇತಿ

ಪ್ರತಿದಿನಿ 30-40 ನಿಮಿಷಗಳ ಕಾಲ ಪುಷ್-ಅಪ್‌ಗಳು, ಸ್ಕ್ವಾಟ್‌ಗಳು ಮತ್ತು ಲುಂಜ್‌ಗಳಂತಹ ದೇಹದ ತೂಕದ ವ್ಯಾಯಾಮಗಳತ್ತ ಗಮನಹರಿಸಿ ಮಾಡಿ. ಅಗತ್ಯವಿದ್ದರೆ, ಡಂಬ್ಬೆಲ್‌ಗಳನ್ನು ಸಹ ಬಳಸಬಹುದು.

*ಕಾರ್ಡಿಯೋ

ಶಕ್ತಿ ತರಬೇತಿಯ ನಂತರ, 30 ನಿಮಿಷಗಳು ನಡೆಯುವುದು ಓಡುವುದನ್ನು ಮಾಡಿ. ಇದು ನಿಮ್ಮ ದೇಹದಲ್ಲಿ ಹೆಚ್ಚಿರುವ ಕ್ಯಾಲೋರಿಗಳನ್ನು ಸುಡುತ್ತದೆ. ಹಾಗೆಯೇ ಹೃದಯ ರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ.

*ನಮ್ಯತೆ ಮತ್ತು ಸ್ಟ್ರೆಚಿಂಗ್

ದೇಹವು ನಮ್ಯತೆಯನ್ನು ಕಾಪಾಡಿಕೊಳ್ಳಲು ಸ್ಟ್ರೆಚಿಂಗ್ ಅಥವಾ ಯೋಗದೊಂದಿಗೆ ನಿಮ್ಮ ವ್ಯಾಯಾಮವನ್ನು ಮುಗಿಸಿ.

*ಜಲಸಂಚಯನ

ಪ್ರತಿನಿತ್ಯ ಕನಿಷ್ಟ 3-4 ಲೀಟರ್​ ನೀರನ್ನು ಕುಡಿಯುವ ಗುರಿ ಹೊಂದಿರಿ. ಇದು ನೀರಿನಂಶ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಚಯಾಪಚಯ ಕ್ರಿಯೆಯನ್ನು ಬೆಂಬಲಿಸಿ ಜೀರ್ಣಕ್ರಿಯೆ ಸುಧಾರಿಸುತ್ತದೆ.

*ಊಟದ ಸಮಯ

ನಿಮ್ಮ ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಲು ದಿನವಿಡೀ ಸಣ್ಣ ಭಾಗಗಳಲ್ಲಿ ಊಟ ಮಾಡಲು ಪ್ರಯತ್ನಿಸಿ. ಹಾಗೆಯೇ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ಒಳಗೆ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.