Panic attack: ನಮ್ಮ ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಮನಸ್ಥಿತಿ ಸರಿಯಾಗಿದ್ದರೆ ಮಾತ್ರ ಒಟ್ಟಾರೆ ಆರೋಗ್ಯ ಚೆನ್ನಾಗಿರಲು ಸಾಧ್ಯವಾಗುತ್ತದೆ. ಅದೇನಾದರೂ ಹದಗೆಟ್ಟರೆ, ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಅದೇನೆಂದರೆ, ಪ್ಯಾನಿಕ್ ಅಟ್ಯಾಕ್ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪ್ಯಾನಿಕ್ ಅಟ್ಯಾಕ್ ಎಂದರೇನು?
ಒಂದು ವಿಚಾರದ ಬಗ್ಗೆ ಭಯ ಅಥವಾ ಆತಂಕ ಇದ್ದಾಗ ಇದು ಪ್ಯಾನಿಕ್ ಅಟ್ಯಾಕ್ಗಳು ಸಂಭವಿಸುತ್ತವೆ. ಇದು ಅನೇಕರಿಗೆ ದೈಹಿಕ ಸಮಸ್ಯೆಯಾಗಿ ಕಾಡುತ್ತದೆ. ಯಾವುದೇ ಅಪಾಯಕಾರಿ ಪರಿಸ್ಥಿತಿ ಇಲ್ಲದಿದ್ದರೂ ಸಹ, ವ್ಯಕ್ತಿಯ ಮೆದುಳು ತೀವ್ರವಾದ ಭಯದ ಸಂಕೇತಗಳನ್ನು ಕಳುಹಿಸುತ್ತಲೇ ಇರುತ್ತದೆ. ಇದರಿಂದ ಸುತ್ತ ಮುತ್ತ ಯಾವುದೇ ಭಯಾನಕ ಸನ್ನವೇಶಗಳು ಇಲ್ಲದಿದ್ದರೆ, ದೇಹವು ಅಪಾಯವಿದೆ ಎಂಬ ಸಂಕೇತವನ್ನು ಪಡೆದು, ಹಾಗೆಯೇ ಪ್ರತಿಕ್ರಿಯಿಸುತ್ತದೆ.
ದೇಹವು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಎಂಬ ಹಾರ್ಮೋನುಗಳನ್ನು ಬಿಡುಗಡೆ ಮಾಡಿದಾಗ, ಒತ್ತಡವನ್ನು ಅನುಭವಿಸುವಂತೆ ಮಾಡುತ್ತದೆ. ಅತಿಯಾದ ಭಯವು ದೇಹಕ್ಕೆ ಹೆಚ್ಚಿನ ರಕ್ತದ ಹರಿವನ್ನು ಉಂಟುಮಾಡುತ್ತದೆ. ಈ ಸಂದರ್ಭದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗುವುದರಿಂದ ಉಸಿರಾಡಲು ಕಷ್ಟವಾಗಲು ಪ್ರಾರಂಭಿಸುತ್ತದೆ. ಇದರಿಂದ ಸ್ನಾಯುಗಳ ಮೇಲೆ ಒತ್ತಡ ಪ್ರಾರಂಭವಾಗುತ್ತದೆ.
ಕೆಲವೊಂದು ಸಂದರ್ಭದಲ್ಲಿ ಜನರು ಯಾವುದೋ ವಿಚಾರಗಳಿಂದ ತಪ್ಪಿಸಿಕೊಳ್ಳಲು ಪ್ಯಾನಿಕ್ ಅಟ್ಯಾಕ್ ಆದಂತೆ ನಟಿಸಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ಪ್ಯಾನಿಕ್ ಅಟ್ಯಾಕ್ ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನವಾಗಿರುತ್ತದೆ. ಈ ವೇಳೆ ಯಾವುದೇ ವ್ಯಕ್ತಿಯು ಈ ಸಮಸ್ಯೆಗೆ ಒಳಗಾಗಿದ್ದರೆ, ಏನನ್ನೂ ಯೋಚಿಸದೇ ತಕ್ಷಣವೇ ಹೋಗಿ ಅವರಿಗೆ ಸಹಾಯ ಮಾಡಿ.
ಪ್ಯಾನಿಕ್ ಅಟ್ಯಾಕ್ ಸಂಭವಿಸಿದಾಗ ಏನು ಮಾಡಬೇಕು?
* ಯಾವುದೇ ವ್ಯಕ್ತಿಗೆ ಪ್ಯಾನಿಕ್ ಅಟ್ಯಾಕ್ ಸಂಭವಿಸಿದಾಗ ನೀವು ಮೊದಲು ನಿಧಾನವಾಗಿ ಮಾತನಾಡುವ ಅಭ್ಯಾಸವನ್ನು ಮಾಡಿಕೊಳ್ಳಿ.
* ನೀವು ಸುರಕ್ಷಿತರಾಗಿದ್ದೀರಿ, ನಿಮ್ಮ ಸುತ್ತಲೂ ಏನೂ ಭಯಾನಕವಾಗಿಲ್ಲ ಎಂದು ಹೇಳುವುದನ್ನು ಮರೆಯಬೇಡಿ
* ಕೆಲ ನಿಮಿಷಗಳ ಕಾಲ ನಿಧಾನವಾದ ಉಸಿರಾಟವನ್ನು ಮಾಡುವ ಅಭ್ಯಾಸವನ್ನು ಮಾಡಿರಿ
* ಮೊದಲು, 4 ಸೆಕೆಂಡುಗಳ ಕಾಲ ಉಸಿರಾಡಿ, 2 ಸೆಕೆಂಡುಗಳ ಕಾಲ ನಿಮ್ಮ ಉಸಿರನ್ನು ಹಿಡಿದುಕೊಳ್ಳಿ ಮತ್ತು 4 ಸೆಕೆಂಡುಗಳ ಕಾಲ ಉಸಿರಾಡಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.