ಸಾಂದರ್ಭಿಕ ಚಿತ್ರ 
ಆರೋಗ್ಯ

ಮಲಗುವ ಮುನ್ನ ಈ ಕೆಲಸ ಮಾಡಿ ಸಾಕು, ಅಲಾರಾಂ ಇಲ್ಲದೇಯೇ ಬೆಳಗ್ಗೆ ಬೇಗನೆ ಏಳುತ್ತೀರಿ! Wake up

Wake up: ತುಂಬಾ ಜನರಿಗೆ ಬೆಳಿಗ್ಗೆ ಬೇಗನೆ ಏಳುವುದು ಬಹಳ ಕಷ್ಟವಾಗಿರುತ್ತದೆ. ಇನ್ನು ಕೆಲವು ಎಷ್ಟೇ ಪ್ರಯತ್ನ ಪಟ್ಟರೂ ಬೇಗ ಏಳಲು ಸಾಧ್ಯವಾಗುವುದೇ ಇಲ್ಲ. ಅಲ್ಲದೆ, ಕೆಲವರು ಬೆಳಿಗ್ಗೆ ಬೇಗ ಏಳಬೇಕೆಂದು ರಾತ್ರಿ ಬೇಗನೆ ಮಲಗುತ್ತಾರೆ. ಆದ್ರೆ, ಅವರಿಗೆ ನಿದ್ರೆ ಬರುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಅನೇಕರು ಬೇಸತ್ತು ಹೋಗಿರುತ್ತಾರೆ. ಹಾಗಾಗಿ ಇಂತಹ ಘಟನೆಯಿಂದ ಹೊರಬರಲು ಮಲಗುವ ಮುನ್ನ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಈಗ ಅಲಾರಾಂ ಇಲ್ಲದೇ ಬೇಗನೇ ಏಳಬಹುದು.

ನಿದ್ರೆಯ ಕೊರತೆಯಿಂದ ಒತ್ತಡ ಉಂಟಾಗುತ್ತದೆ

ಅನಿಯಮಿತ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾರೆ. ಇದು ಒತ್ತಡವನ್ನು ಹೆಚ್ಚಿಸುವುದಲ್ಲದೇ, ಮಾನಸಿಕ ಆಯಾಸಕ್ಕೂ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ದೈನಂದಿನ ದಿನಚರಿಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

ಬೆಳಿಗ್ಗೆ ಬೇಗ ಏಳಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ನೀವೇನಾದರೂ ಬೆಳಿಗ್ಗೆ ಬೇಗ ಏಳಬೇಕೆಂದು ತೀರ್ಮಾನ ಮಾಡಿದರೆ, ರಾತ್ರಿ ಸಮಯಕ್ಕೆ ಸರಿಯಾಗಿ ಮಲಗುವುದು ಬಹಳ ಮುಖ್ಯವಾಗಿರುತ್ತದೆ. ಹಾಗೆಯೇ ಮಲಗುವ ಮುನ್ನ ಚಿಂತೆ, ಒತ್ತಡವನ್ನು ಬಿಟ್ಟುಬಿಡಬೇಕು. ಹಾಗಾಗಿ ಮಲಗುವ 30 ನಿಮಿಷಗಳ ಮುಂಚೆ ಮೊಬೈಲ್​ಗಳನ್ನು ದೂರವಿಡಿ, ಶಾಂತಿಯುತವಾಗಿ ಬುಕ್​ಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ನಂತರ ಕೆಲವು ನಿಮಿಷಗಳ ಕಾಲ ಧ್ಯಾನವನ್ನು ಮಾಡಿ. ಇದು ಮನಸ್ಸನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಜಾರುವಂತೆ ಮಾಡುತ್ತದೆ.
ರಾತ್ರಿ ಬೇಗ ಮಲಗಬೇಕೆಂದರೆ, ಬೇಗನೇ ಊಟ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಬೇಗ ಊಟ ಮಾಡಿದಾಗ ಅದು ಜೀರ್ಣವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಹಾಗಾಗಿ ರಾತ್ರಿ 8 ಗಂಟೆಯ ಒಳಗೆ ಊಟವನ್ನು ಮಾಡಿಕೊಳ್ಳುವ ಅಭ್ಯಾಸ ಮಾಡಿರಿ. ಇದು ನಿಮ್ಮ ದೇಹದ ಗಡಿಯಾರವನ್ನು ಹೊಂದಿಸಲು ಸಹಾಯ ಮಾಡುತ್ತದೆ.
ಈ ಎಲ್ಲಾ ವಿಧಾನವನ್ನು ಅಳವಡಿಸಿಕೊಳ್ಳುವ ಮುಂಚೆ ನೀವು ಮಲಗುವ ಸಮಯವನ್ನು ನಿರ್ಧರಿಸಿಕೊಳ್ಳಿ. ನೀವು ಒಂದು ನಿರ್ದಿಷ್ಟ ಸಮಯದಲ್ಲಿ ಮಲಗಲು ಪ್ರಾರಂಭಿಸಿದರೆ, ನಿಮ್ಮ ಕಣ್ಣುಗಳು ನಿರ್ದಿಷ್ಟ ಸಮಯಕ್ಕೆ ಎಚ್ಚರವಾಗಲು ಪ್ರಯತ್ನಿಸುತ್ತವೆ. ಹಾಗಾಗಿ ಪ್ರತಿದಿನ ಮಲಗುವ ಮುನ್ನ 10-15 ನಿಮಿಷಗಳ ಕಾಲ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ವೇಗವಾಗಿ ನಿದ್ರಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ಸಮಯಕ್ಕೆ ಸರಿಯಾಗಿ ಮಲಗಲು ಪ್ರಾರಂಭಿಸಿದರೆ, ವೇಗವಾಗಿ ಎಚ್ಚರಗೊಳ್ಳಲು ಸಹಾಯವಾಗುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.