ಸಾಂದರ್ಭಿಕ ಚಿತ್ರ 
ಆರೋಗ್ಯ

ರೂಟ್ ಕೆನಾಲ್ ಮಾಡಿಸಿಕೊಂಡವರು MRI ಮಾಡಿಸಬಹುದೇ? ನಿಮ್ಮೆಲ್ಲಾ ಗೊಂದಲಗಳಿಗೆ ಇಲ್ಲಿದೆ ವೈಜ್ಞಾನಿಕ ಉತ್ತರ!

MRI: ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರಿಗೂ ಅನೇಕ ರೀತಿಯ ದಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಜನರು ತಮ್ಮ ಹಲ್ಲುಗಳನ್ನು ಉಳಿಸಿಕೊಳ್ಳುವ ಸಲುವಾಗಿ ರೂಟ್​ ಕೆನಾಲ್​ ಮಾಡಿಸಿಕೊಳ್ಳುತ್ತಾರೆ. ಇದರಿಂದ ಹಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ, ರೂಟ್​ ಕೆನಾಲ್​ ಮಾಡಿಸಿಕೊಂಡವರು ಎಂಆರ್​ಐ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದೇ? ಇಲ್ಲವೇ ತಪ್ಪಿಸಬೇಕೇ? ಇದು ನಿಜವಾಗಿಯೂ ಅಪಾಯಕಾರಿಯೇ ಎಂಬುದು ಹಲವಾರು ಜನರಲ್ಲಿ ಪ್ರಶ್ನೆ ಮಾಡಿರುತ್ತದೆ. ಹಾಗಾಗಿ ನೀವೇನಾದರೂ ಈ ಬಗ್ಗೆ ಯೋಚಿಸ್ತಾ ಇದ್ದರೆ, ಇಲ್ಲಿದೆ ಸರಿಯಾದ ಮಾಹಿತಿ..

ರೂಟ್ ಕೆನಾಲ್ ನಂತರ ಎಂಆರ್​ಐ ಸ್ಕ್ಯಾನ್​ ಮಾಡುವುದು ಸುರಕ್ಷಿತವೇ?

ರೂಟ್​ ಕೆನಾಲ್​ ಮಾಡಿಸಿಕೊಂಡ ಯಾವುದೇ ವ್ಯಕ್ತಿಯು ಎಂಆರ್​ಐ ಯಂತ್ರಗಳು ಕಬ್ಬಿಣವನ್ನು ಹೀರಿಕೊಳ್ಳುವುದರಿಂದ ಸಾವಿಗೆ ಕಾರಣವಾಗಬಹುದು ಎಂದು ಹೆಚ್ಚಾಗಿ ಹೇಳಲಾಗುತ್ತದೆ. ಹಾಗಾದ್ರೆ ರೂಟ್​ ಕೆನಾಲ್​ಗೆ ಒಳಪಟ್ಟವರಿಗೆ ಇದು ಅಪಾಯಕಾರಿಯೇ? ಪರೀಕ್ಷೆಗಳು ಬಲವಾದ ಕಾಂತೀಯ ತರಂಗಗಳನ್ನು ಬಳಸುವುದರಿಂದ ಏನಾದರೂ ಅಪಾಯವಾಗುತ್ತದೆಯೇ ಎಂಬುದಕ್ಕೆ ವೈದ್ಯಕೀಯ ವಿಜ್ಞಾನವೇ ಉತ್ತರ ನೀಡುತ್ತದೆ.

ರೂಟ್ ಕೆನಾಲ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಏನಾಗುತ್ತದೆ?

ರೂಟ್ ಕೆನಾಲ್ ಚಿಕಿತ್ಸೆಯಲ್ಲಿ, ಹಲ್ಲಿನ ನರಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಭರ್ತಿ ಮಾಡುವ ವಸ್ತುವಿನಿಂದ ತುಂಬಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ವಸ್ತುವು ಪ್ಲಾಸ್ಟರ್ ಆಫ್ ಪ್ಯಾರಿಸ್, ಅಥವಾ ಕೆಲವೊಮ್ಮೆ ರಾಳ ಅಥವಾ ಸೆರಾಮಿಕ್ ಆಧಾರಿತವಾಗಿದ್ದು, ಇವು MRI ಯಂತ್ರದಲ್ಲಿನ ಆಯಸ್ಕಾಂತಗಳಿಂದ ಪ್ರಭಾವಿತವಾಗುವುದಿಲ್ಲ.

ಹಲ್ಲುಗಳಲ್ಲಿ ಲೋಹವಿದ್ದರೂ MRI ಸಾಧ್ಯವೇ?

ಕೆಲವು ಸಂದರ್ಭಗಳಲ್ಲಿ, ರೂಟ್ ಕೆನಾಲ್ ನಂತರ ಲೋಹದ ಕ್ಯಾಪ್​ಗಳನ್ನು ಹಲ್ಲುಗಳಲ್ಲಿ ಇರಿಸಲಾಗುತ್ತದೆ. ಇದು ಸೆರಾಮಿಕ್ ಲೇಪನದ ಅಡಿಯಲ್ಲಿರುವ ಲೋಹವು MRI ಗೆ ಅಪಾಯಕಾರಿಯಾಗಬಹುದು ಎಂದು ಜನರು ಭಯಪಡುತ್ತಾರೆ. ಆದರೆ, ಇಂದು ಬಳಸಲಾಗುವ ಹೆಚ್ಚಿನ ದಂತ ಲೋಹಗಳು ಟೈಟಾನಿಯಂ ಆಗಿರುವುದರಿಂದ ಕ್ಯಾಪ್‌ಗಳನ್ನು ಸ್ಟೇನ್​ಲೆಸ್​ ನಿಂದ ಮಾಡಲಾಗಿರುತ್ತದೆ. ಇವು ಎಂಆರ್​ಐ ಗೆ ಸುರಕ್ಷಿತ ಎಂದು ಹೇಳಲಾಗುತ್ತದೆ. ಇವು ಸ್ಕ್ಯಾನ್​ ಮಾಡುವ ವೇಳೆ ಸ್ವಲ್ಪ ಹಾನಿ ಮಾಡಬಹುದೇ ಹೊರತು ಇದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ.
ನೀವೇನಾದರೂ ಬಹಳ ವರ್ಷಗಳ ಹಿಂದೆಯೇ ದಂತ ಚಿಕಿತ್ಸೆಯನ್ನು ಪಡೆದಿದ್ದರೆ, ಅಥವಾ ಹಲ್ಲುಗಳಿಗೆ ಕ್ಯಾಪ್​ಗಳನ್ನು ಬಳಸಿದ್ದರೆ, ವೈದ್ಯರ ಬಳಿ ಹೇಳುವುದು ಉತ್ತಮ. ಈ ಸಂದರ್ಭದಲ್ಲಿ ಅವರು ತಲೆ ಅಥವಾ ದವಡೆಯ MRI ಅಗತ್ಯವಿರುವ ಸಂದರ್ಭಗಳಲ್ಲಿ, ವಿಕಿರಣ ಶಾಸ್ತ್ರಜ್ಞರು ಮೊದಲು ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಪರಿಶೀಲಿಸುತ್ತಾರೆ.

ಲೋಹ-ಮುಕ್ತ ಮತ್ತು MRI ಯುಗ

ರೂಟ್ ಕೆನಾಲ್ ಶಸ್ತ್ರಚಿಕಿತ್ಸೆಗೆ ಒಳಗಾದ ಶೇ. 99 ರಷ್ಟು ಜನರು ಯಾವುದೇ ಅಪಾಯವಿಲ್ಲದೇ, ಎಂಆರ್​ಐಗೆ ಒಳಗಾಗಬಹುದು. ಜಿರ್ಕೋನಿಯಾ ಅಥವಾ ಆಲ್-ಸೆರಾಮಿಕ್ ಕ್ಯಾಪ್‌ಗಳಂತಹ ಹೆಚ್ಚಿನ ಆಧುನಿಕ ಪಿಂಗಾಣಿ-ಹೊದಿಕೆಯ ದಂತ ಕ್ಯಾಪ್‌ಗಳು ಲೋಹ-ಮುಕ್ತವಾಗಿವೆ. ಇವುಗಳು ಯಾವುದೇ ಲೋಹವನ್ನು ಹೊಂದಿಲ್ಲದಿರುವುದರಿಂದ ಎಂಐಆರ್​ ಮಾಡಿಸಿಕೊಳ್ಳಲು ಯಾವುದೇ ತೊಂದರೆ ಉಂಟಾಗುವುದಿಲ್ಲ.
ಸಾಮಾಜಿಕ ಮಾಧ್ಯಮ ಅಥವಾ ವದಂತಿಗಳಿಂದ ಉಂಟಾಗುವ ರೂಟ್ ಕೆನಾಲ್‌ಗಳು ಮತ್ತು ಎಂಆರ್‌ಐಗಳ ಬಗ್ಗೆ ಭಯವು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿಲ್ಲ ಎಂದು ತಜ್ಞರು ಹೇಳುತ್ತಾರೆ. ರೋಗಿಗಳು ನಿಖರವಾದ ಮಾಹಿತಿಯನ್ನು ನೀಡಿ ಸಂಪೂರ್ಣವಾಗಿ ಟ್ರೀಟ್​ಮೆಂಟ್​ ಪಡೆಯಬಹುದು. ಹಾಗಾಗಿ ಎಂಆರ್‌ಐ ಸ್ಕ್ಯಾನ್ ಮಾಡಿಸಿಕೊಳ್ಳಲು ಯೋಚಿಸುತ್ತಿರುವ ಜನರು ನಿಮ್ಮ ದಂತ ಮತ್ತು ವೈದ್ಯಕೀಯ ಇತಿಹಾಸವನ್ನು ಮುಂಚಿತವಾಗಿ ನಿಮ್ಮ ವೈದ್ಯರೊಂದಿಗೆ ಹಂಚಿಕೊಳ್ಳುವ ಅಭ್ಯಾಸವನ್ನು ಮಾಡುವುದು ಉತ್ತಮವಾಗಿದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.