wife 
ಆರೋಗ್ಯ

ದಾಂಪತ್ಯದಲ್ಲಿ ಈ ಸಣ್ಣ ತಪ್ಪುಗಳೇ ಪತ್ನಿಯ ನೆಮ್ಮದಿ ಕೆಡಿಸಬಹುದು! ಈ 5 ತಪ್ಪುಗಳನ್ನು ಇಂದೇ ತಿದ್ದಿಕೊಳ್ಳಿ..

ಬೆಂಗಳೂರು: ( wife) ಸಂಸಾರ ಎಂಬ ನೌಕೆ ಸುಗಮವಾಗಿ ಸಾಗಬೇಕೆಂದರೆ ಪತಿ-ಪತ್ನಿಯರ ನಡುವೆ ಪರಸ್ಪರ ಗೌರವ ಮತ್ತು ತಿಳುವಳಿಕೆ ಬಹಳ ಮುಖ್ಯ. ಆದರೆ, ಅನೇಕ ಬಾರಿ ಪತಿಯು ಯಾವುದೇ ಕೆಟ್ಟ ಉದ್ದೇಶವಿಲ್ಲದೆ ಮಾಡುವ ಕೆಲವು ಕೆಲಸಗಳು ಪತ್ನಿಯ ಮನಸ್ಸಿಗೆ ನೋವುಂಟು ಮಾಡಬಹುದು ಅಥವಾ ಅವಳ ಜೀವನದಲ್ಲಿ ಸಂಕಷ್ಟ ತರಬಹುದು ಎಂದು ಜೀವನಶೈಲಿ ತಜ್ಞರು ಹೇಳುತ್ತಾರೆ.

ಭಾವನೆಗಳಿಗೆ ಬೆಲೆ ನೀಡದಿರುವುದು

ಪತ್ನಿ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಬಂದಾಗ, ಅದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು, ನಿರ್ಲಕ್ಷಿಸುವುದು ಅವಳನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಇದು ಅವಳಲ್ಲಿ ಒಂಟಿತನವನ್ನು ಮೂಡಿಸಬಹುದು.

ಟೀಕೆ ಮಾಡುವುದು

ಪತ್ನಿಯಿಂದ ಏನಾದರೂ ತಪ್ಪಾದಾಗ ಅದನ್ನು ನಾಲ್ಕು ಜನರ ಮುಂದೆ ಅಥವಾ ಮನೆಯವರ ಮುಂದೆ ಎತ್ತಿ ತೋರಿಸುವುದು ಅವಳ ಆತ್ಮಗೌರವಕ್ಕೆ ಧಕ್ಕೆ ತರುತ್ತದೆ. ಪತಿಯ ಈ ನಡೆ ಪತ್ನಿಗೆ ಸಮಾಜದಲ್ಲಿ ಮುಜುಗರ ಉಂಟುಮಾಡಬಹುದು.

ಪ್ರಾಮುಖ್ಯತೆ ನೀಡದಿರುವುದು!

ಮನೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪತ್ನಿಯ ಸಲಹೆ ಪಡೆಯದಿರುವುದು ಅವಳಿಗೆ ತನ್ನ ಪ್ರಾಮುಖ್ಯತೆ ಇಲ್ಲ ಎಂಬ ಭಾವನೆ ಮೂಡಿಸುತ್ತದೆ. ಇದು ದಾಂಪತ್ಯದಲ್ಲಿ ಅಂತರ ಸೃಷ್ಟಿಸಲು ಕಾರಣವಾಗುತ್ತದೆ.

ಹೋಲಿಕೆ ಮಾಡುವುದು!

ಪತ್ನಿಯನ್ನು ಬೇರೆ ಮಹಿಳೆಯರ ಜೊತೆ ಅಥವಾ ಮನೆಯವರ ಜೊತೆ ಹೋಲಿಸಿ ಮಾತನಾಡುವುದು ಅತ್ಯಂತ ದೊಡ್ಡ ತಪ್ಪು. ಇದು ಅವಳಲ್ಲಿ ಕೀಳರಿಮೆ ಬೆಳೆಯುವಂತೆ ಮಾಡುತ್ತದೆ ಮತ್ತು ಮಾನಸಿಕ ಒತ್ತಡಕ್ಕೆ ದಾರಿ ಮಾಡಿಕೊಡುತ್ತದೆ.

ಸಹಾಯವನ್ನೂ ನಿರೀಕ್ಷಿಸುವುದು!

ಮನೆಯ ಕೆಲಸ ಕೇವಲ ಮಹಿಳೆಯ ಜವಾಬ್ದಾರಿ ಎಂದು ಭಾವಿಸಿ, ಸಣ್ಣ ಕೆಲಸಗಳಿಗೂ ಪತ್ನಿಯನ್ನೇ ಅವಲಂಬಿಸುವುದು ಅವಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲಸದ ಒತ್ತಡದಿಂದ ಅವಳು ಶೀಘ್ರವಾಗಿ ಸುಸ್ತಾಗುವ ಸಾಧ್ಯತೆ ಇರುತ್ತದೆ.