ಸಾಂದರ್ಭಿಕ ಚಿತ್ರ 
ಆರೋಗ್ಯ

ಈ ಸರಳ ನಿಯಮಗಳನ್ನು ಪಾಲಿಸಿ ನೋಡಿ.. ನಿಮ್ಮ ಹೃದಯವೇ ನಿಮಗೆ ಥ್ಯಾಂಕ್ಸ್ ಹೇಳುತ್ತೆ! Heart health

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಹೃದಯ ಕಾಯಿಲೆಗೆ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ
  • ನಮ್ಮ ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ಹೃದಯದ ಕಾಯಿಲೆಗಳು ಹೆಚ್ಚಾಗುತ್ತವೆ
  • ಪ್ರತಿನಿತ್ಯ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದರಿಂದ ಹೃದಯದ ಆರೋಗ್ಯ ರಕ್ಷಿಸಿಕೊಳ್ಳಬಹುದು
  • ತಿನಿತ್ಯ 30 ನಿಮಿಷಗಳ ಕಾಲ ನಡೆಯುವುದರಿಂದ ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ
Heart health: ಇತ್ತೀಚಿನ ದಿನಗಳಲ್ಲಿ ಹೃದಯ ಕಾಯಿಲೆಗೆ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ. ದಿನನಿತ್ಯ ನಾವು ಅಳವಡಿಸಿಕೊಂಡ ಕೆಟ್ಟ ಅಭ್ಯಾಸಗಳಿಂದ ಹೃದಯದ ಕಾಯಿಲೆಗಳು ಹೆಚ್ಚಾಗುತ್ತಿವೆ. ಆದರಿಂದ ಪ್ರತಿನಿತ್ಯ ಈ ರೀತಿಯ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದರಿಂದ ಹೃದಯದ ಆರೋಗ್ಯವನ್ನು ಬಲಪಡಿಸಿಕೊಳ್ಳಬಹುದು. ಹಾಗಿದ್ದರೆ, ಆ ಅಭ್ಯಾಸಗಳು ಯಾವುದು ಎಂದು ನೋಡೋಣ ಬನ್ನಿ..

1.ನಿಮ್ಮ ದಿನವನ್ನು ಚಲನೆಯೊಂದಿಗೆ ಪ್ರಾರಂಭಿಸಿ

ನಿಮ್ಮ ಹೃದಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ನೀವೇನಾದರೂ ಪ್ರಯತ್ನಿಸುತ್ತಿದ್ದರೆ, ಇಂದಿನಿಂದಲೇ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಪ್ರತಿನಿತ್ಯ 30 ನಿಮಿಷಗಳ ಕಾಲ ನಡೆಯುವುದರಿಂದ ಇದು ರಕ್ತ ಪರಿಚಲನೆಯನ್ನು ಸುಧಾರಿಸಿ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

2.ಸಂಪೂರ್ಣ ಆಹಾರವನ್ನು ಸೇವಿಸಿ

ಪ್ರತಿನಿತ್ಯ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಜೊತೆಗೆ ಕೊಲೆಸ್ಟ್ರಾಲ್​ ಮಟ್ಟವನ್ನು ಸುಧಾರಿಸುತ್ತದೆ. ನಿಮ್ಮ ಹೃದಯ ಆಹಾರವನ್ನು ನೈಸರ್ಗಿಕವಾಗಿ ಗುರುತಿಸುವುದರಿಂದ ನೀವು ಸೇವಿಸುವ ಆಹಾರಗಳು ನಿಮ್ಮ ಹೃದಯದ ರಕ್ತನಾಳದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

3.ಉಪ್ಪನ್ನು ಕಡಿಮೆ ಮಾಡಿ

ಹೆಚ್ಚು ಉಪ್ಪು ಇರುವ ಆಹಾರವನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ಅತಿ ಹೆಚ್ಚು ಉಪ್ಪು ತಿನ್ನುವ ಅಭ್ಯಾಸವನ್ನು ಬಿಡಿ. ಇದು ನಿಮ್ಮ ಹೃದಯವನ್ನು ಕಾಪಾಡುತ್ತದೆ.

4.ಹೈಡ್ರೇಟೆಡ್ ಆಗಿರಿ

ಪ್ರತಿನಿತ್ಯ ಕನಿಷ್ಟ 3-4 ಲೀಟರ್ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಸರಿಯಾದ ಜಲಸಂಚಯನವು ದೇಹದಲ್ಲಿ ರಕ್ತದ ಪರಿಚಲನೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ದೇಹಕ್ಕೆ ನೀರು ಸಿಗದೇ ಇದ್ದಾಗ ಹೃದಯವು ಹೆಚ್ಚು ಪಂಪ್​ ಮಾಡಬೇಕಾಗುತ್ತದೆ. ಇದರಿಂದ ಹೃದಯದ ಸ್ನಾಯುಗಳಿಗೆ ಒತ್ತಡ ಉಂಟಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯುವ ಮೂಲಕ ದೇವನ್ನು ಹೈಡ್ರೇಟೆಡ್ ಆಗಿರಿಸಲು ಸಾಧ್ಯವಾಗುತ್ತದೆ.

5.ಪ್ರತಿದಿನ ಒತ್ತಡವನ್ನು ನಿರ್ವಹಿಸಿ

ದೀರ್ಘಕಾಲದಿಂದ ನೀವೇನಾದರೂ, ಒತ್ತಡವನ್ನು ಅನುಭವಿಸುತ್ತಿದ್ದರೆ, ಇದು ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಜೊತೆಗೆ ಹಾರ್ಮೋನುಗಳ ಬದಲಾವಣೆಗೆ ಕಾರಣವಾಗುತ್ತದೆ. ಒತ್ತಡ ಎಂಬದು ಮನಸ್ಸಿಗೆ ಸಂಬಂಧಿಸಿಲ್ಲ, ಬದಲಾಗಿ ಜೈವಿಕವಾಗಿದೆ. ಹಾಗಾಗಿ ಪ್ರತಿದಿನ ವ್ಯಾಯಾಮವನ್ನು ಮಾಡುವುದರ ಮೂಲಕ ಅದನ್ನು ನಿಯಂತ್ರಿಸಬೇಕು.

6.ಚೆನ್ನಾಗಿ ನಿದ್ರೆ ಮಾಡಿ

ನಿದ್ರೆಯ ಕೊರತೆಯು ಬೊಜ್ಜು, ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿನಿತ್ಯ ಕನಿಷ್ಟ 7-8 ಗಂಟೆಗಳ ವರೆಗೆ ನಿದ್ರೆ ಮಾಡುವ ಅಭ್ಯಾಸವನ್ನು ಮಾಡಿ. ಹೀಗೆ ಮಾಡುವುದರಿಂದ ಮನಸ್ಸು ಹಗುರವಾಗಿರುತ್ತದೆ ಜೊತೆಗೆ ಹೃದಯದ ಸ್ನಾಯುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

7.ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ

ಧೂಮಪಾನವು ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಮದ್ಯ ಸೇವನೆಯು ರಕ್ತದೊತ್ತಡ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಹೆಚ್ಚಿಸುತ್ತದೆ. ಇವು ಹೃದಯದ ರಕ್ತನಾಳಗಳನ್ನು ಸಂಕುಚಿತಗೊಳಿಸಿ, ಹೃದಯಕ್ಕೆ ಒತ್ತಡವನ್ನು ಉಂಟು ಮಾಡುತ್ತದೆ. ಹಾಗಾಗಿ ನೀವೇನಾದರೂ ಈ ಕೆಟ್ಟ ಅಭ್ಯಾಸವನ್ನು ಹೊಂದಿದ್ದರೆ, ಇಂದೇ ಬಿಟ್ಟುಬಿಡಿ. ಇವು ಕಾಲಾನಂತರದಲ್ಲಿ ಹೃದಯಕ್ಕೆ ಮೌನವಾಗಿ ಹಾನಿ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.